Liquor: ಮದ್ಯಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಎಲ್ಲ ಎಣ್ಣೆ ಬ್ರ್ಯಾಂಡ್ ಮೇಲೆ ಶೇ 50ರಷ್ಟು ಡಿಸ್ಕೌಂಟ್, ಎಲ್ಲಿ ಈ ಆಫರ್?
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದ್ದರೂ ಅದನ್ನು ಸೇವನೆ ಮಾಡುವುದನ್ನು ಬಿಡೋರಲ್ಲ ಮದ್ಯಪ್ರಿಯರು. ಊಟ ಬೇಕಾದ್ರೂ ಬಿಡ್ತೀವಿ, ಎಣ್ಣೆ ಬಿಡಲ್ಲ ಅನ್ನೋ ಜಾಯಮಾನದವರು. ಇದು ಚಟ ಅನ್ನೋಕಿಂತ ದಿನದಲ್ಲಿ ಇದರ ರುಚಿ ನೋಡದಿದ್ರೆ ಅದೇನೋ ನಿದ್ದೇನೆ ಬರಲ್ಲ ಅನ್ನೋರು ಇದ್ದಾರೆ. ರೇಟ್ ಎಷ್ಟಾದ್ರೂ ಆಗಲಿ ಎಣ್ಣೆ ಬೇಕೇ ಬೇಕು ಅನ್ನೋರಿಗೆ ಈ ವಿಚಾರ ಎಣ್ಣೆ ಕುಡಿದಷ್ಟೇ ಆನಂದ ಕೊಡುತ್ತದೆ. ಸಾಮಾನ್ಯವಾಗಿ ದಿನಬಳಕೆ ವಸ್ತುಗಳ ಮೇಲೆ ಡಿಸ್ಕೌಂಟ್ ಕೊಡೋದನ್ನು ಕೇಳಿರುತ್ತೇವೆ. ಆದರೆ ಮತ್ತೇರಿಸೋ ಮದ್ಯ ಕೂಡ ಕಡಿಮೆ ಬೆಲೆಗೆ ಸಿಗುತ್ತಿದೆ ಅಂದ್ರೆ ನಿಜಕ್ಕೂ ಒಂದು ರೀತಿಯ ಹಬ್ಬವೇ ಹೌದು. ಬರೋಬ್ಬರಿ ಎಲ್ಲ ಟಾಪ್ ಬ್ರ್ಯಾಂಡ್‌ನ ಮದ್ಯ ಕೂಡ ಅರ್ಧ ಬೆಲೆಗೆ ಸಿಗುತ್ತಿದೆಯಂತೆ. ಈ ಆಫರ್ ಕೊಟ್ಟಿರೋದು ಎಲ್ಲಿ ಮತ್ತು ಯಾಕೆ ಅಂತ ಇಲ್ಲಿ ತಿಳಿಯಿರಿ..
ಮನೇಲಿ ಊಟ ಬಿಟ್ರೂ ಬಾರಲ್ಲಿ ಎಣ್ಣೆ ಬಿಡಲ್ಲ ಅನ್ನೋರಿಗಾಗಿ ಬರೋಬ್ಬರಿ ಆಫರ್‌ಗಳನ್ನು ಘೋಷಿಸಲಾಗಿದೆ. ಏಪ್ರಿಲ್ 1ರವರೆಗೆ ಮಾತ್ರವೇ ಈ ಡಿಸ್ಕೌಂಟ್ ಸಿಗಲಿದ್ದು, ಈಗಾಗಲೇ ಎಣ್ಣೆ ಪ್ರಿಯರು ಬಾರ್‌ಗಳ ಮುಂದೆ ಖರೀದಿಗೆ ಮುಗಿಬಿದ್ದಿದ್ದಾರೆ. ಎಲ್ಲ ಸರಿ, ಇಷ್ಟಕ್ಕೂ ಟಾಪ್ ಬ್ರ್ಯಾಂಡ್ ಎಣ್ಣೆಯನ್ನೂ ಕಡಿಮೆ ಬೆಲೆಗೆ ಯಾಕೆ ಕೊಡ್ತಿದ್ದಾರೆ? ಇದರಿಂದ ಅವರಿಗೆ ಏನು ಲಾಭ? ಎಂದು ಯೋಚಿಸಬಹುದು. ಅದಕ್ಕೂ ಉತ್ತರ ಇಲ್ಲಿದೆ ನೋಡಿ..

ಹೊಸ ಅಬಕಾರಿ ನೀತಿ ಜಾರಿಯಾಗುವ ಹಿನ್ನೆಲೆ ಚಂಡೀಗಢದಲ್ಲಿರುವ ಎಲ್ಲ ಮದ್ಯದ ಅಂಗಡಿಗಳಲ್ಲಿ ಈ ಆಫರ್ ಘೋಷಿಸಲಾಗಿದೆ. ಏಪ್ರಿಲ್ 1ರಿಂದ ಹೊಸ ಅಬಕಾರಿ ನೀತಿ ಬರುವುದರಿಂದ ಈ ಕೇಂದ್ರಾಡಳಿತ ಪ್ರದೇಶದ ಎಲ್ಲ ಮದ್ಯದ ಅಂಗಡಿಗಳು ಎಲ್ಲ ಮದ್ಯದ ಬ್ರಾಂಡ್‌ಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿವೆ. ಇದರ ಪರಿಣಾಮವಾಗಿ ಇಲ್ಲಿನ ಮದ್ಯದ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿದೆ. ಪಂಜಾಬ್ ಹಾಗೂ ಹರಿಯಾಣದ ರಾಜಧಾನಿಯಾದ ಚಂಡೀಗಢ ಮಾರ್ಚ್ ತಿಂಗಳ ಕೊನೆಯವರೆಗೂ ಈ ಡಿಸ್ಕೌಂಟ್‌ನಲ್ಲಿ ಮದ್ಯ ಸಿಗಲಿದೆ. ಇಲ್ಲಿನ ಮದ್ಯದಂಗಡಿಗಳು ಸದ್ಯ ಈಗ ಲಭ್ಯವಿರುವ ಎಲ್ಲ ಮದ್ಯದ ಬ್ರಾಂಡ್‌ಗಳನ್ನು ಅವುಗಳ ಮೂಲ ಬೆಲೆಯ ಅರ್ಧದಷ್ಟು ಬೆಲೆಗೆ ಮಾರಾಟ ಮಾಡುತ್ತಿವೆ ಎಂದು ವರದಿಯಾಗಿದೆ.
ಯಾವ ಎಣ್ಣೆ ಬೆಲೆ ಎಷ್ಟು?
ಇಂದ್ರಿ, ಬ್ಲ್ಯಾಕ್ ಡಾಗ್, ಬ್ಲೆಂಡರ್ಸ್ ಪ್ರೈಡ್, ಟೀಚರ್ಸ್, ಸೋಲನ್ ಗೋಲ್ಡ್ ಮತ್ತು 100 ಪೈಪರ್ಸ್ ಸೇರಿದಂತೆ ಎಲ್ಲ ಪ್ರಮುಖ ಬ್ರಾಂಡ್‌ಗಳ ಮದ್ಯದ ದರ ಕಡಿಮೆಯಾಗಿದೆ. ಪ್ರಸಕ್ತ ವರ್ಷದ ಮದ್ಯದ ಸ್ಟಾಕ್ ಅನ್ನು ಗುತ್ತಿಗೆದಾರರು ಖಾಲಿ ಮಾಡಬೇಕಾಗಿದೆ. ಹಾಗಾಗಿ ರೆಡ್ ಲೇಬಲ್ ಬ್ರ್ಯಾಂಡ್‌ನ ಮದ್ಯ 750 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆಲ್ ಸೀಸನ್ಸ್, ರಾಯಲ್ ಚಾಲೆಂಜರ್, ರಾಯಲ್ ಸ್ಟಾಗ್, ಸೋಲನ್ ಬ್ಲ್ಯಾಕ್ ಮತ್ತು ಬಕಾರ್ಡಿ ಬ್ಲ್ಯಾಕ್ ಬಾಟಲಿಗಳು 300 ರೂಪಾಯಿಗೆ ಲಭ್ಯವಿದೆ. ಸೋಲನ್ ನಂಬರ್ ಒನ್ ಮತ್ತು ಓಲ್ಡ್ ಮಾಂಕ್ ಬಾಟಲಿಗೆ 250 ರೂಪಾಯಿ ಆದರೆ, ಆಫೀಸರ್ಸ್ ಚಾಯ್ಸ್ ಕೇವಲ 160 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಈ ಹಿಂದೆ 3,000-3,500 ರೂಪಾಯಿವರೆಗೆ ಇದ್ದ ಇಂದ್ರಿ ಮತ್ತು ಗೋಡವಾನ್ ರಿಚ್ ಈಗ ಕೇವಲ 2,200 ರೂಪಾಯಿಗೆ ಸಿಗುತ್ತಿದೆ. ಬ್ಲ್ಯಾಕ್ ಡಾಗ್ ಡಿಲಕ್ಸ್ ಮತ್ತು 100 ಪೈಪರ್‌ಗಳ ಬೆಲೆ 1,300 ರೂಪಾಯಿಗೆ ಇಳಿದಿದೆ. ಬ್ಲ್ಯಾಕ್ ಡಾಗ್ ಮತ್ತು 100 ಪೈಪರ್‌ಗಳು ಈಗ ಕೇವಲ 1,000 ರೂಪಾಯಿಗೆ ಇಳಿದಿವೆ. ಇದಲ್ಲದೆ ಉನ್ನತ ದರ್ಜೆಯ ಬ್ರ್ಯಾಂಡ್‌ಗಳ ಮೇಲೂ ಡಿಸ್ಕೌಂಟ್ ಕೊಡಲಾಗಿದೆ. ಬ್ಲೆಂಡರ್‌ನ ಪ್ರೈಡ್ ರಿಸರ್ವ್, ಆಂಟಿಕ್ವಿಟಿ ಬ್ಲೂ, ರಾಕ್‌ಫೋರ್ಡ್ ರಿಸರ್ವ್ ಮತ್ತು ಅಮೃತ್ ಈಗ ಪ್ರತಿ ಬಾಟಲಿ ದರ ಕೇವಲ 600 ರೂಪಾಯಿಗೆ ಸಿಗುತ್ತಿದೆ. ಸಿಗ್ನೇಚರ್, ಫ್ಲೇವರ್ಡ್ ವೋಡ್ಕಾ ಪ್ರತಿ ಬಾಟಲಿಗೆ 450 ರೂಪಾಯಿಯಂತೆ ಮಾರಾಟವಾಗುತ್ತಿವೆ. ಗ್ರಾಹಕರಿಗೆ ಅನುಕೂಲವಾಗಲಿ ಎಂದು ಈ ಡಿಸ್ಕೌಂಟ್ ದರಪಟ್ಟಿಯನ್ನು ಮದ್ಯದಂಗಡಿಗಳ ಮುಂದೆ ಪೋಸ್ಟ್ ಅಂಟಿಸಲಾಗಿದೆ.
ಮದ್ಯ ಏಕೆ ಇಷ್ಟು ಅಗ್ಗ?
ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರಿಯಾಣಗಳಿಗೆ ಹೋಲಿಸಿದರೆ ಈಗಾಗಲೇ ಚಂದೀಗಢದಲ್ಲಿ ಮದ್ಯ ದರ ಕೈಗೆಟುಕುವಂತಿದೆ. ಆದರೆ 2025-26ನೇ ಸಾಲಿನ ಹೊಸ ಅಬಕಾರಿ ನೀತಿಯನ್ನು ಏಪ್ರಿಲ್ 1ರಿಂದ ಜಾರಿಗೆ ತರಲು ಅಲ್ಲಿನ ಸರ್ಕಾರ ನಿರ್ಧರಿಸಲಾಗಿದೆ. ಈ ಹಿನ್ನೆಲೆ ಎಲ್ಲ ಮದ್ಯದ ವ್ಯಾಪಾರಿಗಳಿಗೆ ತಮ್ಮಲ್ಲಿರುವ ಸ್ಟಾಕ್ ಅನ್ನು ಕ್ಲಿಯರ್ ಮಾಡುವಂತೆ ಸೂಚಿಸಲಾಗಿದೆ. ಹಾಗಾಗಿ ಎಲ್ಲ ಮದ್ಯದ ಬ್ರಾಂಡ್‌ಗಳನ್ನು ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಮತ್ತೊಂದೆಡೆ ಈ ಹೊಸ ಅಬಕಾರಿ ನೀತಿಯು ಮದ್ಯದ ಬೆಲೆಗಳು ಹೆಚ್ಚಾಗುತ್ತವೆಯೇ ಅಥವಾ ಕಡಿಮೆಯಾಗುತ್ತವೆಯೇ ಎಂಬುದನ್ನು ಕೂಡ ಬಹಿರಂಗಪಡಿಸಲಿದೆ. ಹೊಸ ನಿಯಮಗಳು ಜಾರಿಯಾಗುವುದರಿಂದ ಹಳೆ ಮದ್ಯವೆಲ್ಲವೂ ಖಾಲಿಯಾಗಬೇಕಿದೆ. ಈ ಹಿನ್ನೆಲೆ ಮದ್ಯದಂಗಡಿಯವರೇ ಗ್ರಾಹಕರಿಗೆ ಡಿಸ್ಕೌಂಟ್ ಕೊಟ್ಟು ಕೈಬೀಸಿ ಬಾರ್‌ಗಳತ್ತ ಕರೆಯುತ್ತಿದ್ದಾರೆ. ಇದರಿಂದ ಇಲ್ಲಿನ ಮದ್ಯದಂಗಡಿಗಳು ಮದ್ಯಪ್ರಿಯರಿಂದ ತುಂಬಿತುಳುಕುತ್ತಿವೆ.
ನೈಟ್‌ಕ್ಲಬ್‌ಗಳ ಬಾರ್ ಲೈಸೆನ್ಸ್ ಕೂಡ ರದ್ದು!
ಚಂಡೀಗಢದಲ್ಲಿ ನೈಟ್‌ಕ್ಲಬ್‌ಗಳ ಮೇಲೆ ಸ್ಥಳೀಯ ನಿವಾಸಿಗಳಿಂದ ಹಲವು ದೂರುಗಳು ಬಂದಿರುವ ಹಿನ್ನೆಲೆ ಚಂಡೀಗಢ ಅಬಕಾರಿ ಮತ್ತು ತೆರಿಗೆ ಇಲಾಖೆಯು ಮದ್ಯ ಪರವಾನಗಿಯನ್ನು ರದ್ದುಪಡಿಸಿದೆ. ಚಂಡೀಗಢಕ್ಕೆ ಅನ್ವಯವಾಗುವ ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ನಿಯಮಗಳು-2000 ಅನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಇಲ್ಲಿನ ಸೆಕ್ಟರ್ 7 ಹಾಗೂ 26ರಲ್ಲಿರುವ ಎಂಟು ನೈಟ್‌ಕ್ಲಬ್‌ಗಳ ಮದ್ಯ ಪರವಾನಗಿ ರದ್ದಾಗಿದೆ. ಈ ಕ್ಲಬ್‌ಗಳು ಹೆಚ್ಚಾಗಿ ಅಂಗಡಿಗಳು ಹಾಗೂ ಕಚೇರಿಗಳ ಸಮೀಪವೇ ಇದ್ದು, ಭಾರಿ ಕಿರಿಕಿರಿ ನೀಡುತ್ತಿದ್ದವು ಎನ್ನಲಾಗಿದೆ.
ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆಗಾಗಿ ಇಲಾಖೆಯು ಇನ್ನೂ ಆರು ಕ್ಲಬ್‌ಗಳಿಗೆ ನೋಟಿಸ್ ಕೂಡ ನೀಡಿದೆ. ಪಂಜಾಬ್‌ನ ಅಬಕಾರಿ ಕಾಯ್ದೆ 1914ರ ಸೆಕ್ಷನ್ 36 (ಸಿ) ಅಡಿಯಲ್ಲಿ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ಚಂಡೀಗಢಕ್ಕೂ ವಿಸ್ತರಿಸಲಾಗಿದೆ. ಇದು ನಿಯಮ ಉಲ್ಲಂಘಿಸುವವರ ಮದ್ಯ ಪರವಾನಗಿಗಳನ್ನು ರದ್ದುಗೊಳಿಸುವ ಅಥವಾ ಅಮಾನತುಗೊಳಿಸುವ ಅಧಿಕಾರವನ್ನು ನೀಡುತ್ತದೆ. ಶಬ್ದ ಮಾಲಿನ್ಯ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿದ ಎಂಟು ಕ್ಲಬ್‌ಗಳು ಮತ್ತು ಡಿಸ್ಕೋಟೆಕ್‌ಗಳಲ್ಲಿ ಬಾರ್ಗೇನ್ ಬೂಜ್, ಹಾರ್ಡ್ ರಾಕ್ ಕೆಫೆ, ಕಲಾ, ಡಿ ಓರ್ರಾ ಕ್ಲಬ್, ಮೋಬ್ ಹಾಗೂ ಬೌಲೆವಾರ್ಡ್, ಕುಕುನಾ ಕ್ಲಬ್ ಮತ್ತು ದಿ ವಾಲ್ಟ್ ಕೂಡ ಇವೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications