ಮಹೀಂದ್ರಾ ಥಾರ್ 3 ಡೋರ್‌ಗಿಂತ ಥಾರ್ ರಾಕ್ಸ್‌ ಹೇಗೆ ಭಿನ್ನ.?-ಇಲ್ಲಿದೆ ಮಾಹಿತಿ

Mahindra Thar 5 Vs 3-Door: ದೇಶದ ಅತ್ಯುನ್ನತ ಕಂಪನಿಗಳಲ್ಲೊಂದಾದ ಮಹೀಂದ್ರಾ ಕಂಪನಿ ಇತ್ತೀಚೆಗಷ್ಟೇ ಮಹೀದ್ರಾ ಥಾರ್ ರೋಕ್ಸ್ 5 ಡೋರ್ ಬಿಡುಗಡೆ ಮಾಡಿದ್ದು, ಇದರ ಬುಕ್ಕಿಂಗ್‌ ಶೀಘ್ರದಲ್ಲೇ ಆರಂಭವಾಗಿದೆ. ಹಾಗಾದರೆ ಥಾರ್ 3 ಡೋರ್‌ಗೆ ಹೋಲಿಕೆ ಮಾಡಿದ್ರೆ ಥಾರ್ ರೋಕ್ಸ್ 5 ಡೋರ್‌ ಹೇಗೆ ಭಿನ್ನ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಥಾರ್ 3-ಡೋರ್‌ ಮತ್ತು ಥಾರ್ ರೋಕ್ಸ್ ಎರಡೂ ಸಂಪೂರ್ಣವಾಗಿ ವಿಭಿನ್ನವಾದ ಕಾರುಗಳಾಗಿದ್ದು, ರೋಕ್ಸ್‌ನಲ್ಲಿ ಅತ್ಯಧುನಿಕ ಸೌಲಭ್ಯಗಳನ್ನು ನೀಡಲಾಗಿದೆ. ಅದರಲ್ಲೂ ಥಾರ್ ಬ್ರ್ಯಾಂಡ್ ಇತ್ತೀಚಿನ ಪೀಳಿಗೆಗೆ ಅಚ್ಚುಮೆಚ್ಚಾಗಿದ್ದು, ಇದೀಗ ಇದರ 5 ಡೋರ್‌ ಬಿಡುಗಡೆಯಾಗಿದೆ. ಇನ್ನು ಇದರ ಬುಕ್ಕಿಂಗ್‌ ಶೀಘ್ರದಲ್ಲೇ ಆರಂಭವಾಗಲಿದೆ.

How is the Thar Rocks different from Mahindra Thar 3 Door Know details

ಥಾರ್ ಕಾರು ಮಾದರಿಯನ್ನು ಮಹೀಂದ್ರಾ ಕಂಪನಿಯು ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿ ಈ ಹಿಂದೆ 3 ಡೋರ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆ ಮಾಡಿತ್ತು. ಆದರೆ, ಥಾರ್ ಹಿಂಬದಿಯ ಆಸನವನ್ನು ಬಳಕೆ ಮಾಡುವ ಪ್ರಯಾಣಿಕರಿಗೆ ಕೆಲವು ಸೌಲಭ್ಯಗಳನ್ನು ಒದಗಿಸಲಾಗಿದೆ.

ಆದ್ದರಿಂದ ಮಹೀಂದ್ರಾ ಕಂಪನಿಯು ಲೈಫ್‌ಸ್ಟೈಲ್ ಜೊತೆ ಕುಟುಂಬ ಸಮೇತರಾಗಿ ಪ್ರಯಾಣ ಮಾಡಲು ಅನುಕೂಲ ಆಗುವಂತೆ ಹೊಸದಾಗಿ ಥಾರ್ ರಾಕ್ಸ್ ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ 5 ಡೋರ್ ಜೊತೆ ಹಲವು ಅತ್ಯಧೂನಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಇದರ ದರ ಥಾರ್ 3 ಡೋರ್‌ಗಿಂತಲೂ ಹೆಚ್ಚಿದೆ.

ಥಾರ್ ರಾಕ್ಸ್ ಕಾರು ಎಂಎಕ್ಸ್1, ಎಂಎಕ್ಸ್3, ಎಎಕ್ಸ್ 3 ಎಲ್, ಎಂಎಕ್ಸ್5, ಎಎಕ್ಸ್5 ಎಲ್ ಮತ್ತು ಎಎಕ್ಸ್7 ಎಲ್ ಎನ್ನುವ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರ ಎಕ್ಸ್ ಶೋರೂಂ ಪ್ರಕಾರ ದರ 12.99 ಲಕ್ಷದಿಂದ ರೂ. 20.49 ಲಕ್ಷ ಬೆಲೆ ಹೊಂದಿದೆ. ಹೊಸ ಆವೃತ್ತಿಯು ಸಾಮಾನ್ಯ ಥಾರ್ ಕಾರಿಗಿಂತಲೂ ರೂ. 1.64 ಲಕ್ಷದಷ್ಟು ದುಬಾರಿಯಾಗಿದ್ದು, ಥಾರ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 11.35 ಲಕ್ಷದಿಂದ ರೂ. 17.60 ಲಕ್ಷ ಬೆಲೆ ಹೊಂದಿದೆ. ಹೊಸ ಆವೃತ್ತಿಯಲ್ಲಿ ಥಾರ್ ನಲ್ಲಿರುವಂತೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರೇರಿತ 2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಇನ್ನು ಆಕರ್ಷಕವಾದ ವಿನ್ಯಾಸದೊಂದಿಗೆ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಮತ್ತು ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಆರಂಭಿಕ ಮಾದರಿಯಂತೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಸಿ ಆಕಾರದ ಹೋಲುವ ಎಲ್‌ಇಡಿ ಡಿಆರ್‌ಎಲ್ಸ್, ಸರ್ಕ್ಯೂಲರ್ ಆಗಿರುವ ಫಾಗ್ ಲೈಟ್ಸ್ ಜೊತೆಗೆ ಸ್ಪೋರ್ಟಿಯಾಗಿ ಬಂಪರ್ ನೀಡಲಾಗಿದೆ. ಜೊತೆಗೆ 19 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್‌ಗಳು, ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್, ಎಲ್ಇಡಿ ಟೈಲ್‌ಲೈಟ್ಸ್ ನೀಡಲಾಗಿದೆ.

ಹೊರಭಾಗದಂತೆ ಕಾರಿನ ಒಳಭಾಗದಲ್ಲೂ ಕೂಡ ಹವು ಸೌಲಭ್ಯಗಳಿದ್ದು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸರ್ಪೊಟ್ ಮಾಡುವ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಲಭ್ಯವಿದೆ. ಅಲ್ಲದೇ ಸಂಪೂರ್ಣ ಡಿಜಿಟಲ್ ಆಗಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು, ಪನೊರಮಿಕ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ರಿಯರ್ ಎಸಿ ವೆಂಟ್ಸ್ ನೀಡಲಾಗಿದೆ.

ಥಾರ್ ರಾಕ್ಸ್ 5 ಡೋರ್‌ ಕಾರ್‌ನಲ್ಲಿ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್‌ಗಳು, ಇಎಸ್ಇ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್ ಲೈಟ್ ಅಂಡ್ ವೈಪರ್ಸ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ನೀಡಲಾಗಿದೆ.

ಇನ್ನು ಈ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವಿದ್ದು, ಇದು ಹಲವಾರು ಆಕ್ಟಿವ್ ಸೇಫ್ಟಿ ಫೀಚರ್ಸ್ ಗಳೊಂದಿಗೆ ಸಂಭಾವ್ಯ ಅಪಘಾತಗಳನ್ನು ತಪ್ಪಿಸಲಿದೆ.
ಈ ಮೂಲಕ ಹೊಸ ಥಾರ್ ರಾಕ್ಸ್ ಕಾರು ಸಾಮಾನ್ಯ ಕಾರಿಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ಹೊಂದಿದೆ.

ಈ ಕಾರಿನಲ್ಲಿ ಥಾರ್ ಮಾದರಿಯಲ್ಲಿ ಇಲ್ಲದೆ ಇರುವ 5 ಡೋರ್ ಸೌಲಭ್ಯ, ಎಡಿಎಎಸ್ ಸೇಫ್ಟಿ ಸಿಸ್ಟಂ, ದೊಡ್ಡದಾದ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟುಮೆಂಟ್ ಕ್ಲಸ್ಟರ್, ಸನ್ ರೂಫ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಂ, ಪ್ರೀಮಿಯಂ ಆಡಿಯೋ ಸಿಸ್ಟಂ ಮತ್ತು ಕೀ ಲೆಸ್ ಸ್ಟಾರ್ಟ್/ಸ್ಟಾಪ್ ಸೌಲಭ್ಯಗಳನ್ನು ಕಾಣಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+