Honda: ಅತೀ ಹೆಚ್ಚು ಮೈಲೇಜ್‌ ಕೊಡುವ ಕಡಿಮೆ ಬೆಲೆಯ ಹೋಂಡಾ ಬೈಕ್‌ ಮಾರುಕಟ್ಟೆಗೆ; ದರ, ವಿಶೇಷತೆಗಳ ವಿವರ

ಕಾಲ ಬದಲಾದಂತೆ ಜನರು ಚೇಂಜ್‌ ಕೇಳುತ್ತಾರೆ. ಹಾಗೆಯೇ ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಟೋಮೊಬೈಲ್‌ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಗಳು ಆಗುತ್ತಲಿರುತ್ತವೆ. ಇದೀಗ ಹೋಂಡಾ ಕಂಪನಿಯು ಕೈಗೆಟಕುವ ದರದಲ್ಲಿ ಹೆಚ್ಚು ಮೈಲೇಜ್‌ ನೀಡುವ ಬೈಕ್‌ ಪರಿಚಯಿಸಿದೆ. ಹಾಗಾದ್ರೆ ಇದರ ದರ ಹಾಗೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹೊಂಡಾ ಕಂಪನಿ ತನ್ನ ಹೊಸ CB125 ಹಾರ್ನೆಟ್ ಬೈಕ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಪರಿಚಯಿಸಿದೆ. ಇದು ಬೈಕ್‌ ಪ್ರಿಯರಿಗೆ ಅದರಲ್ಲೂ ಯುವ ಮತ್ತು ಸ್ಟೈಲ್ ಪ್ರಿಯರಾದ ರೈಡರ್ಗಳಿಗೆ ತಕ್ಕಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಇದು 125 ಸಿಸಿ ವಿಭಾಗದಲ್ಲಿ ಹೇಳಿ ಮಾಡಿಸಿದ ಬೈಕ್‌ ಆಗಿದೆ. ಬುಕ್ಕಿಂಗ್ ಆಗಸ್ಟ್ 1, 2025ರಿಂದ ಆರಂಭವಾಗಲಿದೆ.

Honda CB125 Hornet Launched in India Specs Advanced Features Price and Sporty Design

ವಿಶೇಷತೆಗಳ ವಿವರ: ಹೊಸ ಹೋಂಡಾ CB125 ಹಾರ್ನೆಟ್ ಬೈಕ್‌ನ ಎಂಜಿನ್ 123.94 ಸಿಸಿ ಆಗಿದ್ದು, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಅನ್ನು ಒಳಗೊಂಡಿದೆ. ಪವರ್ 11.1 ಬಿಎಚ್‌ಪಿ, 11.2 ಎನ್.ಎಂ ಟಾರ್ಕ್, 5-ಸ್ಪೀಡ್ ಮ್ಯಾನುಯಲ್ ಗಿಯರ್‌ಬಾಕ್ಸ್ ಅನ್ನು ಹೊಂದಿದೆ.

ಇನ್ನು ಹೋಂಡಾ CB125 ಹಾರ್ನೆಟ್ ಬೈಕ್‌ನ ತೂಕ 124 ಕೆ.ಜಿ ಇದ್ದು, 12 ಲೀಟರ್ ಇಂಧನ ಟ್ಯಾಂಕ್ ಅನ್ನು ಒಳಗೊಂಡಿದೆ. ಈ ವಿಭಾಗದಲ್ಲಿಯೇ ಮೊದಲ ಬಾರಿಗೆ ಗೋಲ್ಡನ್ ಯುಎಸ್‌ಡಿ ಫ್ರಂಟ್ ಫೋರ್ಕ್‌ಗಳನ್ನು ಒಳಗೊಂಡಿರುವ ಬೈಕ್ ಇದಾಗಿದೆ. 4.2 ಇಂಚಿನ TFT ಡಿಸ್ಪ್ಲೇ, ಪೂರ್ಣ LED ಲೈಟಿಂಗ್, ಡಿಆರ್‌ಎಲ್‌ಗಳಿರುವ ಟ್ವಿನ್-ಎಲ್‌ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಸಿಂಗಲ್-ಚಾನಲ್ ABS,ಸೈ ಡ್-ಸ್ಟ್ಯಾಂಡ್ ಇಂಜಿನ್ ಇನ್ಹಿಬಿಟರ್, ಇಂಜಿನ್ ಸ್ಟಾಪ್ ಸ್ವಿಚ್ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಇದು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಲೆಮೆನ್ ಐಸ್ ಯೆಲ್ಲೋದೊಂದಿಗೆ ಪರ್ಲ್ ಸೈರೆನ್ ಬ್ಲೂ, ಪರ್ಲ್ ಇಗ್ನಿಯಸ್ ಬ್ಲಾಕ್, ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಹೊಂದಿರುವ ಪರ್ಲ್ ಸೈರೆನ್ ಬ್ಲೂ ಮತ್ತು ಸ್ಪೋರ್ಟ್ಸ್ ರೆಡ್ ಹೊಂದಿರುವ ಪರ್ಲ್ ಸೈರೆನ್ ಬ್ಲೂ ಆಯ್ಕೆಗಳಿವೆ.

ಯಾವೆಲ್ಲಾ ಬೈಕ್‌ಗಳಿಗೆ ಪ್ರತಿಸ್ಪರ್ಧಿ: ಹೀರೋ ಎಕ್ಸ್ಟ್ರೀಮ್ 125R, ಟಿವಿಎಸ್ ರೈಡರ್ 125, ಬಜಾಜ್ ಪಲ್ಸರ್ N125 ಬೈಕ್‌ಗಳಿಗೆ ಇದು ಪ್ರತಿಸ್ಪರ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ ಇದು ಯುವ ರೈಡರ್ಸ್‌ಗಳಿಗೆ ಹೇಳಿ ಮಾಡಿಸಿದ ಬೈಕ್ ಇದಾಗಿದೆ. ಅಷ್ಟರ ಮಟ್ಟಿಗೆ ಇದು ಅತ್ಯಾಧುನಿಕ ತಂತ್ರಜ್ಞಾನ, ವಿನ್ಯಾಸದೊಂದಿದೆ ತಯಾರಿಸಲಾದಿದೆ. ಹೀಗೆ ಹೋಂಡಾ ಗ್ರಾಹಕರಿಗೆ ಇಷ್ಟವಾಗುವಂತೆ ಕೈಗೆಟಕುವ ದರದಲ್ಲಿ ಬೈಕ್‌ಗಳನ್ನು ಮಾರುಕಟ್ಟೆಗೆ ತರುತ್ತಲಿದೆ. ಹಾಗೆಯೇ ಇದೀಗ ಪರಿಚಯಿಸಿರುವ CB125 ಹಾರ್ನೆಟ್ ಕೂಡ ಬುಕ್ಕಿಂಗ್‌ ಆರಂಭಕ್ಕೂ ಮುನ್ನವೇ ಸಖತ್ ಸೌಂಡ್‌ ಮಾಡುತ್ತಿದೆ.

ದರಗಳ ವಿವರ: ಮಾಹಿತಿ ಪ್ರಕಾರ, ಈ ಬೈಕ್‌ನ ಎಕ್ಸ್‌ಶೋರೂಂ ಬೆಲೆ ಸುಮಾರು ₹1,00,000 ಇರುತ್ತದೆ. ಇದರಲ್ಲಿ ವೇರಿಯಂಟ್ಸ್‌ಗಳಿದ್ದು, ಕೆಲವು ಹೆಚ್-ಎಸ್‌ವಿ ವೇರಿಯಂಟ್ಸ್‌ಗೆ ₹1.20-1.40 ಲಕ್ಷ ರೂಪಾಯರೆಗೂ ಆಗಬಹುದು. ಅಧಿಕೃತ ಬೆಲೆಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ವೇರಿಯಂಟ್‌ಗಳ ಮೇಲೆ ದರಗಳು ನಿರ್ಧಾರವಾಗಲಿವೆ. ಈಗಾಗಲೇ ಗ್ರಾಹಕರು ಇದನ್ನು ಕೊಂಡುಕೊಳ್ಳಲು ಸದರಿಯಲ್ಲಿ ಕಾದುಕುಳಿತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+