ಅತೀ ಕಡಿಮೆ ಬೆಲೆಯ ಹೆಚ್ಚು ಮೈಲೇಜ್‌ ನೀಡುವ ಉತ್ತಮ ಸೌಲಭ್ಯವುಳ್ಳ ಕಾರುಗಳಿವು-ಸಂಪೂರ್ಣ ಮಾಹಿತಿ ಇಲ್ಲಿದೆ

ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಕ್ರಾಂತಿಯೇ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳು ಒಂದಕ್ಕಿಂತ ಒಂದು ಹೊಸ ವಿನ್ಯಾಸದ ವಾಹನಗಳನ್ನು ಬಿಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿವೆ. ಹಾಗೆಯೇ ನೀವು ಕಡಿಮೆ ಬೆಲೆಗೆ ಕಾರು ಖರೀದಿ ಮಾಡಬೇಕೆ. ಹಾಗಾದರೆ ಇದೀಗ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಅತೀ ಕಡಿಮೆ ಬೆಲೆಗೆ ಸಿಗುವ ಕಾರುಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇದೀಗ ಕಾರುಗಳ ಮೊರೆ ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರ ನಡುವೆಯೇ ಈ ಕಾರು ತಯಾರಕ ಕಂಪನಿಗಳ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದ್ದು, ಕೈಗೆಟಕುವ ದರದಲ್ಲಿ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಯತ್ನಿಸುತ್ತಿರುವುದು ಸ್ಪರ್ಧೆಯಂತಾಗಿದೆ. ಇನ್ನು ನೀವು ಉತ್ತಮ ಸೌಲಭ್ಯಗಳುಳ್ಳ, ಕಡಿಮೆ ಬೆಲೆಗೆ ಸಿಗುವ ಕಾರುಗಳನ್ನು ಕೊಂಡುಕೊಳ್ಳುವ ಯೋಚನೆ ಮಾಡುತ್ತಿದ್ದೀರಾ? ಇಲ್ಲಿವೆ ನೋಡಿ ಕಡಿಮೆ ಬೆಲೆಗೆ ಸಿಗುವ ಕಾರುಗಳು.

Highest mileage s lowest price best cars list Know details

1. Tata Nexan: ಟಾಟಾ ನೆಕ್ಸಾನ್ ಎಸ್‌ಯುವಿ ಕಾರು 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ. ಈ ಮೂಲಕ ಇದು ಅತ್ಯಂತ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದರಲ್ಲಿರುವ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 118 bhp ಪವರ್ ಮತ್ತು 170 nm ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನ್ಯುವಲ್, 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿದ್ದು, ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ.

ನೆಕ್ಸಾನ್ ಸ್ಪೋರ್ಟ್ಸ್ ಟ್ವಿನ್ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ, 9 ಸ್ಪೀಕರ್ ಜೆಬಿಎಲ್ ಮ್ಯೂಸಿಕ್ ಸಿಸ್ಟಮ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದರ ಎಕ್ಸ್‌ಶೋ ರೂಂ ಬೆಲೆ 8,00,000 ರೂಪಾಯಿನಿಂದ ಆರಂಭ ಆಗಲಿದೆ.

2. ಮಹೀಂದ್ರಾ XUV 3X0: ಮಹೀಂದ್ರ XUV 3X0ಗೆ ಇದೀಗ ಮಾರುಕಟ್ಟೆಯಲ್ಲಿ ಭಾರೀ ಟ್ರೆಂಡ್‌ ಕ್ರಿಯೇಟ್‌ ಸೃಷ್ಟಿದೆ. ಇದು ಉತ್ತಮ ಸೌಲಭ್ಯಗಳನ್ನು ಕಾರುಗಳಲ್ಲಿ ಒಂದಾಗಿದ್ದು, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. 18.4 bhp ಗರಿಷ್ಠ ಶಕ್ತಿ, 200 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳು, ನಾಲ್ಕು ಡಿಸ್ಕ್ ಬ್ರೇಕ್‌ಳನ್ನು ಕೂಡ ಒಳಗೊಂಡದೆ.

ಈ ಕಾರು 10.2 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 7 ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, 65 ವ್ಯಾಟ್ ಯುಎಸ್ ಚಾರ್ಜಿಂಗ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಕೂಡ ಒಳಗೊಂಡಿದೆ. ಇದರ ಎಕ್ಸ್‌ ಶೋರೋ ಬೆಲೆ 7.49 ಲಕ್ಷದಿಂದ ಆರಂಭವಾಗಲಿದೆ.

3. ಮಾರುತಿ ಸುಜುಕಿ ಬ್ರೆಝಾ: ಮಾರುತಿ ಸುಜುಕಿ ಬ್ರೆಝಾ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 103 bhp ಪವರ್ ಮತ್ತು 136.2 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೇ, ಈ ಇದು 6 ಏರ್​ ಬ್ಯಾಗ್‌​ಗಳನ್ನು ಹೊಂದಿದೆ. ಇನ್ನು ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಕೆ ಮಾಡಿದರೆ, ಅತೀ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಇದು ಒಂದಾಗಿದೆ. ಈ ಮೂಲಕ ಈ ಮಾದರಿಯ ಎಸ್‌ಯುವಿ ಈ ವರ್ಷ ತನ್ನ ಮಾರಾಟವನ್ನು ಶೇಕಡಾ 45ರಷ್ಟು ಹೆಚ್ಚಿಸಿದೆ. ಇದು ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್​ನೊಂದಿಗೆ 4 ಸಿಲಿಂಡರ್ ಎಂಜಿನ್ ಸಹ ಒಳಗೊಂಡಿದೆ.

ಸನ್‌ರೂಫ್, 9-ಇಂಚಿನ ಟಚ್‌ಸ್ಕ್ರೀನ್, ಹೆಡ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆರ್ಕಾಮಿಸ್ ಸೌಂಡ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿರುವುದು ಈ ಕಾರಿನ ವಿಶೇಷತೆ ಆಗಿದೆ. ಇದರ ಎಕ್ಸ್ ಶೋ ರೂಂ ಬೆಲೆ
8.34 ಲಕ್ಷ ರೂಪಾಯಿನಿಂದ ಆರಂಭವಾಗುತ್ತದೆ.

4. Nissan Magnite: ನಿಸ್ಸಾನ್ ಮ್ಯಾಗ್ನೈಟ್ 1 ಲೀಟರ್ ಪೆಟ್ರೋಲ್ ಮತ್ತು 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಈ SUV 99 bhp ಪವರ್ ಮತ್ತು 160 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಪ್ರತಿ ಲೀಟರ್ ಗೆ 17.7-20 ಕಿಲೋ ಮೀಟರ್‌ ಮೈಲೇಜ್ ಕೊಡುತ್ತದೆ.

ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ, 6-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಅನ್ನು ಹೊಂದಿದೆ. ಇದರ ಎಕ್ಸ್ ಶೋ ರೂಂ ಬೆಲೆ 9.19 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.

5. ರೆನಾಲ್ಟ್ ಕಿಗರ್: ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಗಳು ಒಂದೇ ರೀತಿಯ ಹೋಲಿಕೆಯನ್ನು ಹೊಂದಿವೆ. ಇನ್ನು ನಿಸ್ಸಾನ್ ಮ್ಯಾಗ್ನೈಟ್‌ಗಿಂತ ರೆನಾಲ್ಟ್ ಕಿಗರ್ ದರ ತುಸು ಹೆಚ್ಚಾಗಿದೆ. 1 ಲೀಟರ್ ಟರ್ಬೊ ಎಂಜಿನ್ ಹೊಂದಿದ್ದು, ಕಿಗರ್ 99 bhp ಪವರ್ ಮತ್ತು 160 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಯ್ಕೆಗಳಲ್ಲಿ ಇದು ಸಿಗಲಿದೆ.

ಇದು 7-ಇಂಚಿನ ಡಿಜಿಟಲ್ ಡ್ರೈವರ್ ಕನ್ಸೋಲ್, 6-ಸ್ಪೀಕರ್ ಅರ್ಕಾಮಿ ಮ್ಯೂಸಿಕ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋದೊಂದಿಗೆ 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಲೆಥೆರೆಟ್ ಫ್ಯಾಬ್ರಿಕ್ ಸೀಟ್‌ಗಳು, ಲೆದರ್ ಸುತ್ತುವ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರ ಎಕ್ಸ್ ಶೋರೋ ಬೆಲೆ 9.30 ಲಕ್ಷದಿಂದ ಆರಂಭವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+