ಲೋಕಸಭೆ ಎಕ್ಸಿಟ್ ಪೋಲ್ LIVE ಅಪ್ಡೇಟ್ಸ್ : ಮೋದಿ ದಿಗ್ವಿಜಯ
ಲೋಕಸಭೆ ಚುನಾವಣೆ2019ರಲ್ಲಿ ಏಪ್ರಿಲ್ 11 ರಿಂದ ಮೇ19ರ ತನಕ ಮತದಾನ ಪ್ರಕ್ರಿಯೆಯನ್ನು ನಡೆಸಲಾಗಿದೆ. ಮತದಾನ ಮುಕ್ತಾಯವಾದ ಬಳಿಕ ಯಾವ ಪಕ್ಷ ಮುನ್ನಡೆ ಗಳಿಸಲಿದೆ ಎಂಬುದರ ಬಗ್ಗೆ ದೇಶದ ಪ್ರಮುಖ ಸುದ್ದಿವಾಹಿನಿಗಳು ನಡೆಸಿದ ಚುನಾವಣಾ ಎಕ್ಸಿಟ್ ಪೋಲ್ ಸಮೀಕ್ಷೆ ವರದಿ ಪ್ರಕಟವಾಗಿದೆ.
ಮೇ 19ರಂದು ಏಳನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿದ ಬಳಿಕ(ಸಂಜೆ 6.30ರ ನಂತರ), ಚುನಾವಣೋತ್ತರ ಸಮೀಕ್ಷೆ ಪ್ರಸಾರವಾಗಲಿದೆ. ಈ ಕುರಿತ ಅಪ್ಡೇಟ್ಸ್ ಇಲ್ಲಿ ಪಡೆಯಬಹುದು
543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ, ಶೇಕಡಾವಾರು ಮತದಾನದ ಆಧಾರದ ಮೇಲೆ ವಿವಿಧ ಮಾಧ್ಯಮ ಸಂಸ್ಥೆಗಳು 2019ರಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂದು ತಿಳಿಸಲಿದೆ.

2014ರ ಮತದಾನೋತ್ತರ ಸಮೀಕ್ಷೆಯಲ್ಲಿ ಎನ್ಡಿಎಗೆ ಬಹುಮತ ಎಂದು ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳು ಘೋಷಿಸಿದ್ದವು, ಟುಡೇಸ್ ಚಾಣಕ್ಯ ಅತ್ಯಂತ ನಿಖರ ಅಂಕಿ ಅಂಶ ನೀಡಿ ಗಮನ ಸೆಳೆದಿತ್ತು.
ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.











Click it and Unblock the Notifications