ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಎಕ್ಸಿಟ್ ಪೋಲ್: ರಾಜ್ಯದಲ್ಲಿ 18 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ

|
Google Oneindia Kannada News

ನವದೆಹಲಿ, ಮೇ 19: ಇಡೀ ದೇಶದ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಕರ್ನಾಟಕದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ಅಪ್ಡೇಟ್ಸ್ ಅನ್ನು 'ಒನ್ ಇಂಡಿಯಾ ಕನ್ನಡ' ನೀಡುತ್ತಿದೆ.

ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಲ್ಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಈ ಎರಡೂ ಪಕ್ಷಗಳೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕದಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಲಿದೆ ಎಂಬುದು ಕುತೂಹಲದ ವಿಷಯವಾಗಿದೆ.

ಲೋಕಸಭಾ ಚುನಾವಣೆ ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದಿದೆ. ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23 ರಂದು ಎರಡು ಹಂತಗಳಲ್ಲಿ ನಡೆದಿತ್ತು. ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣೋತ್ತರ ಸಮೀಕ್ಷೆಗಳು ಎಷ್ಟು ನಿಖರವಾಗಿವೆ ಎಂಬುದು ಅಂದು ತಿಳಿಯಲಿದೆ.

ಯಾರಿಗೆ ಎಷ್ಟು ಸ್ಥಾನ

ಯಾರಿಗೆ ಎಷ್ಟು ಸ್ಥಾನ

ಬಿಜೆಪಿ: 18-20
ಕಾಂಗ್ರೆಸ್-ಜೆಡಿಎಸ್: 7-10
ಇತರರು: 0-1
ಒಟ್ಟ: 28

ಮತ ಹಂಚಿಕೆ

ಮತ ಹಂಚಿಕೆ

ಬಿಜೆಪಿ:48.3%
ಕಾಂಗ್ರೆಸ್-ಜೆಡಿಎಸ್: 49.3%
ಪಕ್ಷೇತರ: 2.4%
ಒಟ್ಟು: 28

ಚುನಾವಣಾ ಪೂರ್ವ ಸಮೀಕ್ಷೆ ಏನೆಂದಿತ್ತು?

ಚುನಾವಣಾ ಪೂರ್ವ ಸಮೀಕ್ಷೆ ಏನೆಂದಿತ್ತು?

ಬಿಜೆಪಿ: 17
ಕಾಂಗ್ರೆಸ್: 09
ಜೆಡಿಎಸ್: 02
ಪಕ್ಷೇತರ: 0
ಒಟ್ಟು: 28

2014 ರ ಚುನಾವಣೆ ಫಲಿತಾಂಶ

2014 ರ ಚುನಾವಣೆ ಫಲಿತಾಂಶ

ಬಿಜೆಪಿ: 17

ಕಾಂಗ್ರೆಸ್: 09

ಜೆಡಿಎಸ್: 02

ಒಟ್ಟು: 28

English summary
Lok Sabha Elections 2019: Republic TV - Jan ki Baat Exit poll rersults 2019 LIVEin Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X