ರಾಯ್ ಬರೇಲಿ ಅಭ್ಯರ್ಥಿ ಸೋನಿಯಾ ಗಾಂಧಿ ಆಸ್ತಿ ವಿವರ
ನವದೆಹಲಿ, ಏಪ್ರಿಲ್ 11: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆ ಬಯಸಿ ತಮ್ಮ ಉಮೇದುವಾರಿಕೆಯನ್ನು ಇಂದು ಸಲ್ಲಿಸಿದ್ದಾರೆ.
ಪುತ್ರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜತೆಗೂಡಿ ರಾಯ್ ಬರೇಲಿ ಕ್ಷೇತ್ರದ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆ ಸಲ್ಲಿಸಿರುವ ಫಾರ್ಮ್ 26ರಲ್ಲಿರುವ ಆಸ್ತಿ ವಿವರ ಇಲ್ಲಿದೆ...
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏಪ್ರಿಲ್ 11 ರಿಂದ ಮೇ 19ರ ತನಕ ದೇಶದೆಲ್ಲೆಡೆ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 543 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.
ಸೋನಿಯಾ ಗಾಂಧಿ ಸ್ವವಿವರ:
ಹೆಸರು : ಸೋನಿಯಾ ಗಾಂಧಿ
ಪತಿ : ದಿವಂಗತ ರಾಜೀವ್ ಗಾಂಧಿ
ವಯಸ್ಸು : 72
ನಿವಾಸ : 10, ಜನಪಥ್, ದೆಹಲಿ.
* ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
* 1965ರಲ್ಲಿ ಕೇಂಬ್ರಿಡ್ಜ್ ನ ಲೆನೊಕ್ಸ್ ಕುಕ್ ಶಾಲೆಯಿಂದ ಇಂಗ್ಲೀಷ್ ಪ್ರಮಾಣ ಪತ್ರ.
* 1964ರಲ್ಲಿ ಇಸ್ಟಿಟುಟೋ ಸಾಂಟಾ ತೆರೆಸಾ, ಟುರಿನ್ ನಲ್ಲಿ ವಿದೇಶಿ ಭಾಷೆ(ಇಂಗ್ಲೀಷ್ ಹಾಗೂ ಫ್ರೆಂಚ್) ಮೂರು ವರ್ಷಗಳ ಕೋರ್ಸ್
ಸುಬ್ರಮಣಿಯನ್ ಸ್ವಾಮಿ ಅವರ ದೂರಿನ ಅನ್ವಯ ಯಂಗ್ ಇಂಡಿಯಾ ಹಾಗೂ ಸೋನಿಯಾ ಗಾಂಧಿ ವಿರುದ್ಧ 420 ಕೇಸ್ ಮಿಕ್ಕಂತೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲ. ಇನ್ನಷ್ಟು ಆಸ್ತಿ ವಿವರ ಮುಂದಿದೆ.

ಐಟಿ ರಿಟರ್ನ್ಸ್ ವಿವರ
2017-18 ಐಟಿ ರಿಟರ್ನ್ಸ್ : 9,61,700 ರು ಆದಾಯ
2016-17 : 87,03,000 ರು ಆದಾಯ
2015-16 : 12,31, 030 ರು ಆದಾಯ
2014-15 : 17,78,470 ರು ಆದಾಯ
2013-14 : 17,60,032 ರು ಆದಾಯ
ಯಾವುದೇ ಆದಾಯ ತೆರಿಗೆ, ಸರ್ಕಾರಿ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ

ಸೋನಿಯಾ ಗಾಂಧಿ ಚರಾಸ್ತಿ ವಿವರ
* ನಗದು : 60,000ರು
* ಬ್ಯಾಂಕ್ ಠೇವಣಿ : 16,59,883 ರು
(ಯುಕೋ ಬ್ಯಾಂಕ್ 16,27,122 ರು ಹಾಗೂ ಎಚ್ ಡಿ ಎಫ್ ಸಿ 32,761ರು)
* 1,90,000 ರು ಬಾಂಡ್, ಎಚ್ ಡಿ ಎಫ್ ಸಿ, ಕೋಟಕ್, ಮೋತಿಲಾಲ್ ಓಸ್ವಾಲ್, ರಿಲಯನ್ಸ್ ಷೇರು ಚರಾಸ್ತಿ : 2,44,96,405 ರು
* 28,53,000 ರು ಮೌಲ್ಯದ ತೆರಿಗೆ ರಹಿತ ಬಾಂಡ್ ಗಳು
ವಿಮೆ, ಎನ್ಎಸ್ಎಸ್ ಉಳಿತಾಯ: 72,25,414 ರು
* ರಾಹುಲ್ ಗಾಂಧಿ ಅವರಿಂದ ಪಡೆದ ಸಾಲ 5,00,000 ರು

ಸ್ಥಿರಾಸ್ತಿ, ಚಿನ್ನಾಭರಣ ಮೊತ್ತ
ಸ್ಥಿರಾಸ್ತಿ: 4,29,82,013 ರು
* 3.28 ಕೃಷಿಭೂಮಿ ಎಕರೆ ಮೌಲ್ಯ 7,29,61,793 ರು
* ಸಂಸದ ಸಂಬಳ, ರಾಯಲ್ಟಿ ಮೊತ್ತ, ಬ್ಯಾಂಕ್ ಠೇವಣಿ, ಮ್ಯೂಚುವಲ್ ಫಂಡ್
ಚಿನ್ನಾಭರಣ : 1267.3 ಗ್ರಾಂ ಚಿನ್ನ 24,24,411 ರು ಮೌಲ್ಯ
88 ಕೆಜಿ ಬೆಳ್ಳಿ 35,72,800 ರು
ಒಟ್ಟು : 59,97,211 ರು ಮೌಲ್ಯ.
ಇಟಲಿಯ ಪಿತ್ರಾರ್ಜಿತ ಆಸ್ತಿ ಪಾಲು : 23,20,110 ರು

2014ರಲ್ಲಿ ಸೋನಿಯಾ ಗಾಂಧಿ ಆಸ್ತಿ ಎಷ್ಟಿತ್ತು?
*ನಗದು : 85,000 ರು
*ಬ್ಯಾಂಕಿನಲ್ಲಿ 66 ಲಕ್ಷ ರು ಠೇವಣಿ, 11.5 ಲಕ್ಷ ಸೆಕ್ಯುರಿಟಿ ಬ್ಯಾಂಕ್, 85 ಲಕ್ಷ ಮ್ಯೂಚುವಲ್ ಫಂಡ್
*62 ಲಕ್ಷ ಮೌಲ್ಯದ ಆಭರಣ, 45 ಲಕ್ಷ ಮೌಲ್ಯದ ಅಂಚೆ ಕಚೇರಿ ಉಳಿತಾಯ.
*2013ರಲ್ಲಿ ತಮ್ಮ ಪುತ್ರ ರಾಹುಲ್ ಅವರಿಂದ 9 ಲಕ್ಷ ರು ಸಾಲ ಪಡೆದಿದ್ದರು. ಆದರೆ, 2019ರಲ್ಲಿ ಪುತ್ರನಿಂದ ಪಡೆದ ವಯಕ್ತಿಕ ಸಾಲದ ಪ್ರಮಾಣ 5 ಲಕ್ಷ ರು ಗೆ ತಗ್ಗಿದೆ ಎಂದು ತೋರಿಸಿದ್ದಾರೆ.











Click it and Unblock the Notifications