7 ಹಂತಗಳಿಂದ ಒಟ್ಟು 3,493 ಕೋಟಿ ರು ವಶ: ಚುನಾವಣಾ ಆಯೋಗ

ನವದೆಹಲಿ, ಮೇ 19: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ಸದ್ಯ ಜಾರಿಯಲ್ಲಿದೆ. ಏಪ್ರಿಲ್ 11ರಿಂದ ಮೇ 19ರ ತನಕ ಏಳು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗಿದೆ. ಇಲ್ಲಿ ತನಕ ಚುನಾವಣಾ ಪ್ರಚಾರದ ವೇಳೆ ವಶಕ್ಕೆ ಪಡೆದ ಅಕ್ರಮ ಹಣದ ಲೆಕ್ಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಬಾರಿ ಚುನಾವಣೆಯಲ್ಲಿ ಆಯೋಗವು ಒಟ್ಟು 3,493 ಕೋಟಿ ಹಣವನ್ನು ವಶಕ್ಕೆ ಪಡೆದಿದೆ. ಅಪಾರ ಪ್ರಮಾಣದಲ್ಲಿ ಅಕ್ರಮ ನಗದು, ಮದ್ಯ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲ ನಾಲ್ಕು ಹಂತಗಳಲ್ಲೇ 3274 ಕೋಟಿ ರು ವಶಕ್ಕೆ ಪಡೆಯಲಾಗಿತ್ತು ಎಂದು ಆಯೋಗ ತಿಳಿಸಿದೆ.

ಅಕ್ರಮ ನಗದು ಹಣ ಜಪ್ತಿಯಲ್ಲಿ ತಮಿಳುನಾಡು ಮುಂದಿದೆ. ಈ ರಾಜ್ಯದಲ್ಲಿ ಒಟ್ಟಾರೆ, 950 ಕೋಟಿ ಅಕ್ರಮ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಗುಜರಾತಿನಲ್ಲಿ 552 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ದೆಹಲಿಯಲ್ಲಿ 426 ಕೋಟಿ ಹಣವನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿದೆ.

Election Commission seized Rs 3493 Cr with illegal money and inducements

ಇನ್ನು ಮಾರ್ಚ್ 10 ರಿಂದ ಇಲ್ಲಿ ತನಕ 500ಕ್ಕೂ ಅಧಿಕ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿವೆ. ಪ್ರಧಾನಿ ಮೋದಿ ವಿರುದ್ಧವೇ 6 ದೂರು ದಾಖಲಾಗಿತ್ತು. ಆದರೆ, ಎಲ್ಲಾ ಪ್ರಕರಣಗಳಲ್ಲೂ ಚುನಾವಣಾ ಆಯೋಗದಿಂದ ಕ್ಲೀನ್ ಚಿಟ್‍ ಸಿಕ್ಕಿದೆ.

7ನೇ ಹಾಗೂ ಕೊನೆ ಹಂತದ ಚುನಾವಣೆ ಮೇ 19ರಂದು ಜಾರಿಯಲ್ಲಿದ್ದು 8 ರಾಜ್ಯಗಳ 59ಕ್ಷೇತ್ರಗಳಲ್ಲಿ ನಡೆದಿದೆ. ಮೇ 23ರಂದು 543 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+