iPhone 16: ಐಪೋನ್ 16 ಫೋನ್ ಕಡಿಮೆ ದರದಲ್ಲಿ ಎಲ್ಲಿ ಸಿಗುತ್ತದೆ ಗೊತ್ತಾ.?-ಇಲ್ಲಿದೆ ದರಗಳ ಪಟ್ಟಿ
iPhone 16: ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಐಪೋನ್ 16 ಫೋನ್ ಇದೀಗ ಇಡಿ ಪ್ರಪಂಚದಾದ್ಯಂತ ಭಾರೀ ಹವಾ ಸೃಷ್ಟಿಸಿದೆ. ಇನ್ನು ಭಾರತದಲ್ಲಿ ಸೆಪ್ಟೆಂಬರ್ 13ರ ಸಂಜೆ 5:30ರಿಂದ ಪ್ರಿ ಆರ್ಡರ್ ಆರಂಭ ಆಗಲಿದ್ದು, ಸೆಪ್ಟೆಂಬರ್ 20ರಿಂದ ಮಾರಾಟ ಶುರುವಾಗಲಿದೆ. ಹಾಗಾದರೆ ದರ ಎಲ್ಲೆಲ್ಲಿ ಎಷ್ಟಿದೆ ಎನ್ನುವ ಸಂಪೂರಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಮೆರಿಕಾ ಕ್ಯಾಲಿಫೋರ್ನಿಯಾದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 4 ಹೊಸ ಐಫೋನ್‌ಗಳನ್ನು ವಿಶ್ವಕ್ಕೆ ಪರಿಚಯಿಸಲಾಗಿದೆ. ಐಫೋನ್ 16 ಮತ್ತು ಐಫೋನ್ 16 ಪ್ಲಸ್ 128 GB, 256GB, 512GB ರೋಮ್ ಮೆಮೊರಿಯಲ್ಲಿ ಬಿಡುಗಡೆ ಆಗಿದೆ. ಐಫೋನ್ 16 ಪ್ರೋ 128GB, 256GB, 512GB, 1TB ರೋಮ್ ಮೆಮೊರಿಯಲ್ಲಿ ಬಿಡುಗಡೆಯಾಗಿದ್ದರೆ, ಐಫೋನ್ 16 ಪ್ರೋ ಮ್ಯಾಕ್ಸ್ 256GB, 512GB, 1TB ರೋಮ್ ಮೆಮೊರಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಭಾರತದಲ್ಲಿ ಐಫೋನ್‌ನ ದರಗಳ ವಿವರ
* ಐಫೋನ್ 16 - 79,900 ರೂಪಾಯಿ
* ಐಫೋನ್ 16 ಪ್ಲಸ್ - 89,900 ರೂಪಾಯಿ
* ಐಫೋನ್ 16 ಪ್ರೋ - 1,19,900 ರೂಪಾಯಿ
* ಐಫೋನ್ 16 ಪ್ರೋ ಮ್ಯಾಕ್ಸ್ (256 ಜಿಬಿ ಸ್ಟೋರೇಜ್) -1,44,900 ರೂಪಾಯಿ
ಅಮೆರಿಕದಲ್ಲಿ ಐಫೋನ್‌ನ ದರಗಳ ವಿವರ
* ಐಫೋನ್ 16 - 799 ಡಾಲರ್(67,090 ರೂಪಾಯಿ)
* ಐಫೋನ್ 16 ಪ್ಲಸ್ - 899 ಡಾಲರ್
* ಐಫೋನ್ 16 ಪ್ರೋ - 999 ಡಾಲರ್
* ಐಫೋನ್ 16 ಪ್ರೋ ಮ್ಯಾಕ್ಸ್ - 1,199 ಡಾಲರ್
ಯುಎಇನಲ್ಲಿ ಐಫೋನ್‌ನ ದರಗಳ ವಿವರ
* ಐಫೋನ್ 16 - 3,399 ದಿರ್ಹಮ್ (77,705 ರೂಪಾಯಿ)
* ಐಫೋನ್ 16 ಪ್ಲಸ್ - 3,799 ದಿರ್ಹಮ್
* ಐಫೋನ್ 16 ಪ್ರೋ - 4,299 ದಿರ್ಹಮ್
* ಐಫೋನ್ 16 ಪ್ರೋ ಮ್ಯಾಕ್ಸ್ - 5,099 ದಿರ್ಹಮ್
ಚೀನಾದಲ್ಲಿ ಐಫೋನ್‌ನ ದರಗಳ ವಿವರ
* ಐಫೋನ್ 16 - 5,999 ಯುವಾನ್ (70,703 ರೂಪಾಯಿ)
* ಐಫೋನ್ 16 ಪ್ಲಸ್ - 6,999 ಯುವಾನ್
* ಐಫೋನ್ 16 ಪ್ರೋ - 7,99 ಯುವಾನ್
* ಐಫೋನ್ 16 ಪ್ರೋ ಮ್ಯಾಕ್ಸ್ - 9,999 ಯುವಾನ್
ಭಾರತದಲ್ಲಿ ಐಫೋನ್ ಬೆಲೆ ಹೆಚ್ಚು ಯಾಕೆ.?: ಭಾರತದಲ್ಲಿ ಐಫೋನ್ ಉತ್ಪಾದನೆ ಆದರೂ ಹಲವು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ವಸ್ತುಗಳು ಭಾರತಕ್ಕೆ ಆಮದಾಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳಿಗೆ ತೆರಿಗೆ ಹಾಕುವುದರಿಂದ ಅದನ್ನು ಭರಿಸಲು ಕಂಪನಿಗಳು ದರವನ್ನು ಏರಿಕೆ ಮಾಡಿವೆ. ಫೋನ್‌ಗಳ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ಇದೆ. ಅಬಕಾರಿ ಸುಂಕವನ್ನು ಕಂಪನಿಗಳು ಹಾಕುವ ಪರಿಣಾಮ ಫೋನ್ ಬೆಲೆ ಶೇಕಡ 35ರಷ್ಟು ಹೆಚ್ಚಿರುತ್ತದೆ.
ಅದರಲ್ಲೂ ಅಮೆರಿಕ ಮತ್ತು ಯುಎಇಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಐಫೋನ್ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬೇಡಿಕೆ ಹೆಚ್ಚಿದ್ದಾಗ ಫೋನ್‌ಗಳ ಬೆಲೆ ಕಡಿಮೆ ಇರುವುದು ಸಾಮಾನ್ಯ. ಆಪಲ್ ಭಾರತದಲ್ಲಿ ವಿಶೇಷ ಮಾರುಕಟ್ಟೆ ತಂತ್ರವನ್ನು ಬಳಕೆ ಮಾಡುತ್ತಿದೆ. ಹೊಸ ಐಫೋನ್ ಬಿಡುಗಡೆ ಮಾಡುವ ಸಮಯದಲ್ಲಿ ಹಳೆಯ ಐಫೋನ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡುತ್ತದೆ. ಆದರೆ ಬೇರೆ ಕಂಪನಿಗಳ ಫೋನ್ ದರಗಳು ಇಳಿಕೆ ಆದರೂ ಅಷ್ಟೊಂದು ದರ ಇಳಿಕೆ ಆಗುವುದಿಲ್ಲ.












Click it and Unblock the Notifications