45,400 ರೂಪಾಯಿಗೆ ತಿನ್ನಬಹುದು ಆನೆ ಲದ್ದಿಯ ಈ ವಿಶೇಷ ಸ್ವೀಟ್: ಎಲ್ಲಿ?
ಈ ಪ್ರಪಂಚದಲ್ಲಿರುವ ವಿವಿಧ ದೇಶಗಳಲ್ಲಿ ಬೇರೆ ಬೇರೆ ರೀತಿಯಾದ ಬದುಕುವ ಶೈಲಿ, ಆಹಾರ ಪದ್ಧತಿ, ಆಚರಣೆಗಳು ಇರುತ್ತದೆ. ಅವರವರ ದೇಶದ ಸಂಸ್ಕೃತಿ ಅವರಿಗೆ ಶ್ರೇಷ್ಠ ಹಾಗೂ ಮಹತ್ವದಾಗಿರುತ್ತದೆ. ಹೀಗಾಗಿ ಬೇರೆ ದೇಶದ ಜನರ ಬದುಕು ವಿಚಿತ್ರವಾಗಿ ಕಾಣುತ್ತದೆ. ನಮ್ಮ ದೇಶದ ಜನರಿಗೆ ಚೀನಾದ ಆಹಾರ ಪದ್ಧತಿ ಕಾಣಿಸುವ ಹಾಗೆ.
ಹೌದು ಆಹಾರದ ವಿಚಾರದಲ್ಲಿ ಚೀನಾ ಎಲ್ಲಾ ದೇಶಗಳಿಗಿಂತ ವಿಭಿನ್ನ. ಇಲ್ಲಿನ ಜನ ತಿನ್ನದ ವಸ್ತು ಅಥವಾ ಪ್ರಾಣಿಗಳಿಲ್ಲ. ಎಲ್ಲಾ ರೀತಿಯ ಪ್ರಾಣಿಗಳನ್ನು ಸಹ ಅವರು ತಿನ್ನುತ್ತಾರೆ. ಹಾವು, ಚೇಳು, ಜಿರಳೆ, ಕಪ್ಪೆ ಇವುಗಳನ್ನು ನೆನಪಿಸಿಕೊಂಡರೆ ನಮಗೆ ವಾಕರಿಕೆ ಬಂದರೆ ಅವರಿಗೆ ವಾವ್ ಅನಿಸುತ್ತದೆ. ಅವರು ತಮ್ಮ ದೇಶದ ವಾತಾವರಣಕ್ಕೆ ತಕ್ಕಂತೆ ಆಹಾರ ಸೇವಿಸುತ್ತಾರೆ.

ಚೀನಾ ಅವರ ಆಹಾರ ಪದ್ಧತಿಗಳು ಭಾರತ ಸೇರಿದಂತೆ ಕೆಲ ದೇಶಗಳಿಗೆ ಲಗ್ಗೆ ಇಟ್ಟಿದ್ದು, ಹೋಟೆಲ್‌ಗಳ ಮೆನುವಿನಲ್ಲಿ ಚೈನೀಸ್ ಎನ್ನುವ ಬೇರೆ ವಿಭಾಗವನ್ನೇ ನೀವು ನೋಡಬಹುದು. ಆದರೆ ನಮ್ಮಲ್ಲಿ ನಾವು ತಿನ್ನುವ ವಸ್ತುಗಳನ್ನೇ ಬಳಸಿಕೊಂಡು ಅವರ ಶೈಲಿಯಂತೆ ಆಹಾರ ಸಿದ್ಧವಾಗುತ್ತದೆಯಷ್ಟೇ. ಅದೇನೇ ಇದ್ದರೂ ಚೀನಾ ದೇಶದವರು ಆಹಾರ ಪದ್ಧತಿ ಸಖತ್ ವಿಭಿನ್ನ. ಅವರು ಆಹಾರ ತಯಾರಿಸದ ವಸ್ತುಗಳಿಲ್ಲ ಎನ್ನುವುದಕ್ಕೆ ಉದಾಹರಣೆ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಚೀನಾದ ವಿಶೇಷ ಬಗೆಯ ಸಿಹಿ ತಿಂಡಿಯೊಂದು ವೈರಲ್ ಆಗುತ್ತಿದ್ದು, ಈ ಸಿಹಿ ತಿಂಡಿಯನ್ನು ಯಾವುದರಿಂದ ತಯಾರಿಸಿದ್ದಾರೆ ಎಂದು ಗೊತ್ತಾದರೆ ನಮ್ಮವರು ಅಸಹ್ಯಪಟ್ಟುಕೊಳ್ಳುವುದಂತೂ ಗ್ಯಾರಂಟಿ. ಹೌದು ನೋಡಲು ಡಿಲೀಷಿಯಸ್ ಆಗಿ ಕಾಣುವ ಸ್ವೀಟ್‌ವೊಂದನ್ನು ಚೀನಾ ದೇಶದವರು ಆನೆ ಲದ್ದಿಯಿಂದ ತಯಾರಿಸುತ್ತಿದ್ದಾರೆ.

ಈ ಸಿಹಿ ತಿಂಡಿ ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡುಗರು ಫುಲ್ ಶಾಕ್ ಆಗಿದ್ದಾರೆ. ಚೀನಾದ ಶಾಂಘೈನ ರೆಸ್ಟೋರೆಂಟ್‌ನಲ್ಲಿ ಆನೆಯ ಲದ್ದಿಯಿಂದ ಸ್ವೀಟ್ ತಯಾರು ಮಾಡಲಾಗುತ್ತಿದೆ. ಆನೆ ಲದ್ದಿಯಿಂದ ತಯಾರಿಸಲಾಗುವ ಈ ಸಿಹಿ ತಿಂಡಿಗೆ ಎಲಿಫೆಂಟ್ ಡಂಗ್ ಡೆಸರ್ಟ್ ಎಂದು ಹೆಸರಿಡಲಾಗಿದೆ.
ಮೊದಲು ಆನೆಯ ಲದ್ದಿಯನ್ನು ಬಿಸಿಲಿನಲ್ಲಿ ಒಣಗಿಸಿ ಕ್ರಿಮಿನಾಶಕ ಬಳಸಿ ಸ್ವಚ್ಛಗೊಳಿಸಿ ಕೆಲವು ಗಿಡಮೂಲಿಕೆಗಳು ಮತ್ತು ಜೇನುತುಪ್ಪದ ಬೆರೆಸಿ ಈ ಸಿಹಿ ತಿಂಡಿಯನ್ನು ತಯಾರಿಸಲಾಗುತ್ತದೆ. ಈ ಸಿಹಿ ತಿಂಡಿಯ ಬೆಲೆ ಬರೋಬ್ಬರಿ 45,400 ರೂಪಾಯಿ ಎಂದು ತಿಳಿದು ಬಂದಿದೆ. ಚೀನಾದ ಅನೇಕ ಫುಡ್ ವ್ಲಾಗರ್‌ಗಳು ಈ ಸಿಹಿ ತಿಂಡಿಯ ರುಚಿ ನೋಡಿ ವಾವ್ ಎಂದಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಈ ಚೀನಾದವರು ಯಾವುದನ್ನೂ ಬಿಡುವುದಿಲ್ಲ ಅಲ್ಲಿಗೆ ಹೋಗುವ ಮನುಷ್ಯರು ಹುಷಾರಾಗಿರಿ ಎಂದು ಕಮೆಂಟ್ ಮಾಡಿದ್ದಾರೆ.












Click it and Unblock the Notifications