ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?
ನಮ್ಮ ದೈನಂದಿನ ವ್ಯವಹಾರಗಳಿಗೆ ಹಲವು ದಾಖಲೆಗಳು ಅಗತ್ಯ. ಇಷ್ಟು ದಾಖಲೆಗಳನ್ನು ನಾವು ಜೊತೆಯಲ್ಲಿಟ್ಟುಕೊಂಡು ಹೋಗಲು ಸಾಧ್ಯವಿಲ್ಲ. ಕಳುವಾಗಬಹುದು, ತಪ್ಪಿ ಹೋಗಬಹುದು ಏನು ಬೇಕಾದರೂ ಆಗಬಹುದು. ಆದರೆ, ಈ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆ.
ಆಧಾರ್ ಕಾರ್ಡ್ ಇತ್ಯಾದಿಯನ್ನು ಡಿಜಿಟಲೈಸ್ ಮಾಡಲಾಗಿದೆ. ಎಲ್ಲಿ ಬೇಕಾದರೂ ನೀವು ಆಧಾರ್ ಕಾರ್ಡ್ ತೆರೆಯಬಹುದು. ಚಾಲನಾ ಪರವಾನಿಗೆಯನ್ನೂ ಡಿಜಿಟಲ್ ಆಗಿ ಇರಿಸಲು ಅವಕಾಶ ಇದೆ. ಕೇಂದ್ರ ಸರಕಾರ ಡಿಜಿಲಾಕರ್ ಎಂಬ ಮೊಬೈಲ್ ಅಪ್ಲಿಕೇಶ್ ರೂಪಿಸಿದ್ದು ಅದರಲ್ಲಿ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿಡಬಹುದು.
ನಿಮ್ಮ ಡ್ರೈವಿಂಗ್ ಲೈಸನ್ಸ್ ಕಾರ್ಡ್ ಭೌತಿಕವಾಗಿಯೂ ಸಿಗುತ್ತದೆ. ಹಾಗೆಯೇ ಇ-ಲೈಸೆನ್ಸ್ ಕೂಡ ಸಿಗುತ್ತದೆ. ಫಿಸಿಕಲ್ ಕಾರ್ಡ್‌ನಷ್ಟೇ ಇ-ಲೈಸೆನ್ಸ್ ಕಾರ್ಡ್ ಕೂಡ ಮಾನ್ಯವಿರುತ್ತದೆ. ಡಿಜಿಲಾಕರ್ ವೆಬ್‌ಸೈಟ್ ಅಥವಾ ಆ್ಯಪ್ ಮತ್ತು ಪರಿವಾಹನ್ ಸೇವಾ ವೆಬ್‌ಸೈಟ್‌ಗಳ ಮೂಲಕ ನೀವು ಇ-ಲೈಸೆನ್ಸ್ ಅನ್ನು ಡೌನ್‌ಲೋಡ್ ಮಾಡಬಹುದು.

ಡಿಜಿಲಾಕರ್ ಆ್ಯಪ್
* ಆಂಡ್ರಾಯ್ಡ್ ಫೋನ್‌ನಲ್ಲಿ ಪ್ಲೇ ಸ್ಟೋರ್‌ನಲ್ಲಿ ಡಿಜಿಲಾಕರ್ ಆ್ಯಪ್ ಡೌನ್‌ಲೋಡ್ ಮಾಡಿ
* 'ಡಾಕ್ಯುಮೆಂಟ್ಸ್ ಯೂ ಮೈಟ್ ರಿಕ್ವೈರ್' ಸೆಕ್ಷನ್ ಕ್ಲಿಕ್ ಮಾಡಿ
* 'ಡ್ರೈವಿಂಗ್ ಲೈಸೆನ್ಸ್' ಮೇಲೆ ಕ್ಲಿಕ್ ಮಾಡಿ
* 'ಮಿನಿಸ್ಟ್ರಿ ಆಫ್ ರೋಡ್ ಅಂಡ್ ಟ್ರಾನ್ಸ್‌ಪೋರ್ಟ್ ಹೈವೇಸ್' ಆಯ್ಕೆ ಮಾಡಿ
* 'ಡ್ರೈವರ್ಸ್ ಲೈಸೆನ್ಸ್ ನಂಬರ್' ನಮೂದಿಸಿ
* 'ರಿಸೀವ್ ದಿ ಡಾಕ್ಯುಮೆಂಟ್ಸ್' ಆಯ್ಕೆ ಮಾಡಿ
* ಡ್ರೈವರ್ಸ್ ಲೈಸೆನ್ಸ್‌ನ ಪಿಡಿಎಫ್ ಫೈಲ್ ಅನ್ನು ನೀವು ಈಗ ಡೌನ್‌ಲೋಡ್ ಮಾಡಬಹುದು.
ಡಿಜಿಲಾಕರ್ ವೆಬ್‌ಸೈಟ್ ಮೂಲಕ
* ಡಿಜಿಲಾಕರ್ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಖಾತೆಗೆ ಲಾಗಿನ್ ಆಗಿ. ಇಲ್ಲದಿದ್ದರೆ ಖಾತೆ ನೊಂದಾಯಿಸಿ
* ಪುಟದ ಮೇಲಿನ ಎಡಮೂಲೆಯಲ್ಲಿ 'ಸರ್ಚ್ ಡಾಕ್ಯುಮೆಂಟ್ಸ್' ಲಿಂಕ್ ಆಯ್ದುಕೊಳ್ಳಿ.
* ಮೆನುನಲ್ಲಿ ಇರುವ 'ಡ್ರೈವರ್ಸ್ ಲೈಸೆನ್ಸ್' ಆಯ್ದುಕೊಳ್ಳಿ.
* ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಅಂಡ್ ಹೈವೇಸ್ ಅನ್ನು ಕ್ಲಿಕ್ ಮಾಡಿ
* ಡ್ರೈವರ್ಸ್ ಲೈಸೆನ್ಸ್ ನಂಬರ್ ನಮೂದಿಸಿ
* ನಂತರ 'ಗೆಟ್ ದಿ ಡಾಕ್ಯುಮೆಂಟ್' ಆಯ್ಕೆ ಮಾಡಿ.

ಪರಿವಾಹನ್ ಸೇವಾ ವೆಬ್‌ಸೈಟ್ ಮೂಲಕ
* ಪರಿವಾಹನ್ ಸೇವಾ ವೆಬ್‌ಸೈಟ್‌ನಲ್ಲಿ 'ಆನ್‌ಲೈನ್ ಸರ್ವಿಸಸ್'' ಸೆಕ್ಷನ್ ಅಡಿಯಲ್ಲಿ 'ಡ್ರೈವರ್ಸ್ ಲೈಸೆನ್ಸ್ ರಿಲೇಟೆಡ್ ಸರ್ವಿಸಸ್' ಮೇಲೆ ಕ್ಲಿಕ್ ಮಾಡಿ.
* ಮೆನುನಲ್ಲಿ ನಿಮ್ಮ ರಾಜ್ಯವನ್ನು ಆಯ್ದುಕೊಳ್ಳಿ
* ಡ್ರೈವಿಂಗ್ ಲೈಸೆನ್ಸ್ ಸೆಕ್ಷನ್‌ನಲ್ಲಿ 'ಪ್ರಿಂಟ್ ಡ್ರೈವಿಂಗ್ ಲೈಸೆನ್ಸ್' ಕ್ಲಿಕ್ ಮಾಡಿ.
* ನಿಮ್ಮ ಅಪ್ಲಿಕೇಶನ್ ನಂಬರ್ ಮತ್ತು ಜನ್ಮದಿನಾಂಕವನ್ನು ಸೇರಿಸಿ
* ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮಾಹಿತಿಯನ್ನು ಸಲ್ಲಿಸಿ.
(ಒನ್ಇಂಡಿಯಾ ಸುದ್ದಿ)












Click it and Unblock the Notifications