Deepavali Wishes Kannada: ಪ್ರೀತಿಪಾತ್ರರು, ಕುಟುಂಬದವರು & ಸ್ನೇಹಿತರಿಗೆ ದೀಪಾವಳಿ ಶುಭಾಶಯ ಮೆಸೇಜ್‌ಗಳು ಇಲ್ಲಿವೆ
Deepavali Wishes 2025: ದೀಪಾವಳಿ ಹಬ್ಬಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷವಾದ ಸ್ಥಾನವಿದೆ. ದೀಪದಿಂದ ದೀಪವ ಹಚ್ಚಿ ಸಂಭ್ರಮಿಸುವ ದಿನವಿದು. ಬದುಕಿನ ಕತ್ತಲೆ, ನೋವು ಹಾಗೂ ಸಂಕಷ್ಟಗಳನ್ನು ಮರೆತು ಸಮೃದ್ಧಿ, ಸಂಭ್ರಮ ಹಾಗೂ ಬೆಳಕಿನೆಡೆಗೆ ಸಾಗುವ ವಿಶೇಷವಾದ ದಿನವೇ ದೀಪಾವಳಿ. ಮನೆ - ಮನಗಳಲ್ಲಿ ಬೆಳಕು ತುಂಬಿ ಸಂಭ್ರಮಿಸುವ ದಿನ. ಇಷ್ಟೊಂದು ವಿಶೇಷವಾದ ದಿನದಂದು ನಿಮ್ಮ ಆತ್ಮೀಯರು, ಆಪ್ತರು ಮತ್ತು ಗೆಳೆಯರಿಗೆ ಶುಭಕೋರದಿದ್ದರೆ ಹೇಗೆ. ಈ ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆಯೂ ಪಸರಲಿ. ನಿಮ್ಮೆಲ್ಲರಿಗೂ ಬೆಳಕಿನ ಹಬ್ಬ ದೀಪವಾಳಿಯ ಶುಭಾಶಯಗಳು. ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ತರಲಿ...
ಬೆಳಕು, ಪ್ರೀತಿ ಮತ್ತು ಸಮೃದ್ಧಿಯ ಸಂಕೇತ: ದೀಪಾವಳಿ ಹಬ್ಬ ಮೊದಲೇ ಹೇಳಿದಂತೆ ಬೆಳಕಿನ ಹಬ್ಬ ಈ ಸಂಭ್ರಮದ ದಿನದಂದು ನಿಮ್ಮ ಆತ್ಮೀಯರಿಗೆ ಶುಭಕೋರುವ ಸಂದೇಶಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಆರೋಗ್ಯ, ಸಮೃದ್ಧಿ ಹಾಗೂ ಸುಖ - ಸಂತೋಷ ತುಂಬಿರಲಿ ಎಂದು ನಿಮ್ಮ ಆತ್ಮೀಯರು ಹಾಗೂ ಕುಟುಂಬದವರೊಂದಿಗೆ ಈ ಸಂದೇಶಗಳನ್ನು ಹಂಚಿಕೊಳ್ಳಿ.

ದೀಪಾವಳಿಯ ಸಂಭ್ರಮದಲ್ಲಿ ಕುಟುಂಬದವರಿಗೆ ಶುಭಾಶಯಗಳು: ದೀಪಾವಳಿಯ ದೀಪದ ಬೆಳಕು ನೀವು ಮತ್ತು ನಿಮ್ಮ ಮನೆಯವರಿಗೆ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ತರಲಿ. ದೀಪಾವಳಿ ಹಬ್ಬದ ಶುಭಾಶಯಗಳು. ಈ ದಿನದಿಂದ ನಿಮ್ಮ ಕನಸುಗಳು ನನಸಾಗಲಿ. ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಬೆಳಕಿನ ಹಬ್ಬದ ಶುಭಾಶಯಗಳು.
ಆತ್ಮೀಯರಿಗೆ ಶುಭ ಸಂದೇಶ: ನಗು, ಮನಮುಟ್ಟುವ ಮಾತು ಮತ್ತು ಹೊಸ ಆರಂಭಗಳಿಂದ ತುಂಬಿರುವ ನಮ್ಮ ಬಾಲ್ಯದ ನೆನಪುಗಳಂತೆಯೇ ದೀಪಾವಳಿ ಶುಭ ತರಲಿ. ಆ ಬಾಲ್ಯದ ಮುಗ್ಧತೆ, ನಲಿವು ಹಾಗೂ ಸಂಭ್ರಮಗಳು ಬಾಳಿನಲ್ಲಿ ಮತ್ತೆ ಬರಲಿ. ಬೆಳಕಿನಂತೆ ನಿಮ್ಮ ಕನಸುಗಳು ನನಸಾಗಿ ಪ್ರಜ್ವಲಿಸಲಿ.
ಸ್ನೇಹಿತರಿಗಾಗಿ ದೀಪಾವಳಿ ಶುಭಾಶಯಗಳು: ಆತ್ಮೀಯ ಗೆಳಯ / ಗೆಳತಿ ಈ ದೀಪಾವಳಿ ಸಂಭ್ರಮ ನಮ್ಮಿಬ್ಬರ ಬಾಳಿನಲ್ಲಿ ಇನ್ನಷ್ಟು ಅನ್ಯೋನ್ಯತೆ ಇರಲಿ ಎಂದು ಆಶಿಸುತ್ತೇನೆ. ಉತ್ತಮ ಗೆಳೆಯರು ಸಿಗುವ ದೀಪಾವಳಿ ಹಬ್ಬದಷ್ಟೇ ಸಂಭ್ರಮದ ವಿಷಯ. ನಿಮ್ಮ ಕನಸುಗಳು ಪಟಾಕಿಗಳಿಗಿಂತ ಪ್ರಕಾಶಮಾನವಾಗಿ ಸದ್ದು ಮಾಡಲಿ. ಎಲ್ಲಾ ದಿನಗಳು ಬೆಳಕಿನಿಂದ ಕೂಡಿರಲಿ ದೀಪಾವಳಿ ಹಬ್ಬದ ಶುಭಾಶಯಗಳು.
ಸಹೋದ್ಯೋಗಿಗಳು ಹಾಗೂ ಕಿರಿಯರಿಗೆ: ಮನೆಗಿಂತಲೂ ಹೆಚ್ಚು ಸಮಯ ಕಳೆಯುವುದು ನಿಮ್ಮೊಂದಿಗೇ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು. ಮುಂದಿನ ದಿನಗಳಲ್ಲಿ ನಿಮ್ಮ ನಿರ್ಧಾರಗಳಲ್ಲಿ ಸ್ಪಷ್ಟತೆ, ಯೋಜನೆಗಳಲ್ಲಿ ಯಶಸ್ಸು ಮತ್ತು ಜೀವನ ಸಂತೋಷ ತುಂಬಿರಲಿ ಎಂದು ದೇವರಲ್ಲಿ ಕೋರುತ್ತೇನೆ. ನಿಮಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು: ಬೆಳಕು ನಿಮ್ಮ ಮುಂದಿನ ಎಲ್ಲಾ ಪಯಣ, ಕನಸುಗಳಿಗೆ ಮಾರ್ಗದರ್ಶನ ನೀಡಲಿ, ದಯೆ - ಕರುಣಿ ನಿಮ್ಮ ಹೃದಯ ತುಂಬಲಿ. ಕತ್ತಲು ಸರಿದು ಬೆಳಕು ಮೂಡಲಿ. ಮೋಡ ಸರಿದು ಸೂರ್ಯ ಉದಯಿಸುವಂತೆ ನಿಮ್ಮೆಲ್ಲ ನಾಳೆಗಳು ಸಂಭ್ರಮದಿಂದ ಕೂಡಿರಲಿ. ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ದೀಪಾವಳಿಯ ಶುಭಾಶಯಗಳು. ಶುಭವಾಗಲಿ...
ಈ ದೀಪಾವಳಿಯು ನಿಮ್ಮೆಲ್ಲ ಕನಸುಗಳನ್ನು ನನಸು ಮಾಡಲಿ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.












Click it and Unblock the Notifications