• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕೊರೊನಾವೈರಸ್ ಸೋಂಕಿತರಲ್ಲಿ ಹೊಸ ಲಕ್ಷಣಗಳು ಪತ್ತೆ!

|
Google Oneindia Kannada News

ನವದೆಹಲಿ, ಆಗಸ್ಟ್ 17: ಭಾರತದಲ್ಲಿ ಕೋವಿಡ್-19 ಸೋಂಕು ಅಂಟಿಕೊಂಡರೆ ಯಾವ ಲಕ್ಷಣಗಳು ಗೋಚರಿಸುತ್ತವೆ ಎಂಬುದರ ಬಗ್ಗೆ ವೈದ್ಯಕೀಯ ತಜ್ಞರು ಆಘಾತಕಾರಿ ಅಂಶವೊಂದನ್ನು ಹೊರ ಹಾಕಿದ್ದಾರೆ.

ಕೊರೊನಾ ವೈರಸ್ U-Turn ಹೊಡೆಯುತ್ತಿದೆಯಾ ಎಂಬ ಅನುಮಾನವನ್ನು ವೈದ್ಯರೇ ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯರಿಗೆ ಕೋವಿಡ್-19 ಸೋಂಕು ಈಗ ಅಂಟಿಕೊಂಡರೆ ಯಾವ ರೀತಿ ಲಕ್ಷಣಗಳು ಗೋಚರಿಸುತ್ತವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ.

Explained: ಈ ಪ್ರಯೋಗಾಲಯವೋ, ಆ ಮಾರುಕಟ್ಟೆಯೋ: ಕೊರೊನಾ ಮೂಲ ಅದ್ಯಾವುದಯ್ಯಾ!?Explained: ಈ ಪ್ರಯೋಗಾಲಯವೋ, ಆ ಮಾರುಕಟ್ಟೆಯೋ: ಕೊರೊನಾ ಮೂಲ ಅದ್ಯಾವುದಯ್ಯಾ!?

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಈಗ ಅಂಟಿಕೊಂಡರೆ ಎಂಥಾ ಲಕ್ಷಣಗಳು ಗೋಚರಿಸುತ್ತವೆ?, ಸಾಮಾನ್ಯವಾಗಿ ಕೋವಿಡ್-19 ರೋಗಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಯಾವುವು?, ಕೊರೊನಾ ವೈರಸ್ ಅಂಟಿಕೊಂಡರೆ ಹೃದಯ ವೀಕ್ ಆಗುತ್ತಾ?, ಮೊದಲೇ ಆರೋಗ್ಯ ಸಮಸ್ಯೆ ಉಳ್ಳವರಿಗೆ ಕೊರೊನಾ ವೈರಸ್ ಸೋಂಕು ತಗುಲಿದರೆ ಏನಾಗುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ದೇಶದಲ್ಲಿ ಒಂದೇ ದಿನ 9062 ಮಂದಿಗೆ ಕೋವಿಡ್-19

ದೇಶದಲ್ಲಿ ಒಂದೇ ದಿನ 9062 ಮಂದಿಗೆ ಕೋವಿಡ್-19

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 9062 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 36 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 15,220 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 44,286,256ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ, ಇದುವರೆಗೂ 43,654,064 ಸೋಂಕಿತರು ಗುಣಮುಖರಾಗಿದ್ದು, 527,134 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 105,058ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾ ವೈರಸ್ ಸೋಂಕಿತರಲ್ಲಿನ ಸಾಮಾನ್ಯ ಲಕ್ಷಣ

ಕೊರೊನಾ ವೈರಸ್ ಸೋಂಕಿತರಲ್ಲಿನ ಸಾಮಾನ್ಯ ಲಕ್ಷಣ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಮೊದಲ ಅಲೆ, ಎರಡನೇ ಅಲೆ ಮತ್ತು ಮೂರನೇ ಅಲೆಗಳು ಎಂಬ ಹಾವಳಿಗಳು ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದು ಗೊತ್ತಿರುವ ವಿಚಾರ. ಇದರ ಮಧ್ಯೆ ಕೋವಿಡ್-19 ಸೋಂಕು ಅಂಟಿಕೊಂಡರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು ಯಾವುವು ಎಂಬುದು ಸಾಮಾನ್ಯ ಜನರಿಗೂ ಸಹ ಅರ್ಥವಾಗಿ ಬಿಟ್ಟಿದೆ. ಕೊರೊನಾ ವೈರಸ್ ರೋಗಿಗಳಲ್ಲಿನ ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

* ತಲೆನೋವು,

* ಜ್ವರ

* ಕೆಮ್ಮು

* ಶೀತ

* ಗಂಟಲಿನ ಕಿರಿಕಿರಿ

* ದೇಹದಲ್ಲಿ ವಿಪರೀತ ನೋವು

ಸದ್ಯ ಕೊರೊನಾ ವೈರಸ್ ಸೋಂಕಿತರಲ್ಲಿನ ಲಕ್ಷಣಗಳೇನು?

ಸದ್ಯ ಕೊರೊನಾ ವೈರಸ್ ಸೋಂಕಿತರಲ್ಲಿನ ಲಕ್ಷಣಗಳೇನು?

ಕೊರೊನಾ ವೈರಸ್ ಸೋಂಕಿನ ನಾಲ್ಕು ಅಲೆಗಳನ್ನು ನೋಡಿರುವ ಭಾರತೀಯರು ಈಗ ಅದೇ ರೋಗದಿಂದ ಕಾಣಿಸಿಕೊಳ್ಳುವ ಹೊಸ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಬೇಕಾದ ಸಮಯ ಬಂದಿದೆ. ಸದ್ಯಕ್ಕೆ ಹೊಸದಾಗಿ ಕೊರೊನಾ ವೈರಸ್ ಸೋಂಕು ಅಂಟಿಕೊಂಡ ವ್ಯಕ್ತಿಗಳಲ್ಲಿ ಯಾವ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

*ಜ್ವರ ಅಥವಾ ಶೀತ,

* ಕೆಮ್ಮು

* ಉಸಿರಾಟದ ತೊಂದರೆ

* ಆಯಾಸ,

* ಸ್ನಾಯು ಸೆಳೆತ

* ದೇಹದ ನೋವು

* ತಲೆನೋವು

* ರುಚಿ ಅಥವಾ ವಾಸನೆಯ ನಷ್ಟ

* ಗಂಟಲಿವ ನೋವು

* ಮೂಗು ಸ್ರವಿಸುವಿಕೆ

* ವಾಕರಿಕೆ ಅಥವಾ ವಾಂತಿ

* ಅತಿಸಾರವು ಇತರ ಸಾಮಾನ್ಯ ಲಕ್ಷಣ

ಕೊರೊನಾ ವೈರಸ್ ಅಂಟಿದರೆ ವೀಕ್ ಆಗುವುದೇ ಹೃದಯ?

ಕೊರೊನಾ ವೈರಸ್ ಅಂಟಿದರೆ ವೀಕ್ ಆಗುವುದೇ ಹೃದಯ?

ಕೊರೊನಾ ವೈರಸ್ ಉಪ ತಳಿಗಳ ಕಾರಣದಿಂದ ಸೋಂಕಿತರಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಆಕಾಶ್ ಹೆಲ್ತ್‌ಕೇರ್‌ನಲ್ಲಿ ಹಿರಿಯ ಸಲಹೆಗಾರ ಅಕ್ಷಯ್ ಬುಧರಾಜ ತಿಳಿಸಿದ್ದಾರೆ. ಎದೆ ನೋವು, ಮೂತ್ರದ ಉತ್ಪಾದನೆಯಲ್ಲಿ ಇಳಿಕೆ, ಅತಿಸಾರ, ತೀವ್ರವಾದ ಪರಿಧಮನಿಯ ಸಿಂಡ್ರೋಮ್ ಮತ್ತು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (ಹೃದಯಾಘಾತ) ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ ಎಂದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಓಮಿಕ್ರಾನ್ ಉಪ-ತಳಿ ಹಾವಳಿ

ರಾಷ್ಟ್ರ ರಾಜಧಾನಿಯಲ್ಲಿ ಓಮಿಕ್ರಾನ್ ಉಪ-ತಳಿ ಹಾವಳಿ

ದೆಹಲಿಯಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಅಧ್ಯಯನದಲ್ಲಿ ಓಮಿಕ್ರಾನ್‌ನ ಉಪ-ರೂಪಾಂತರ ತಳಿ BA 2.75 ಪತ್ತೆಯಾಗಿದೆ. ಈ ಉಪತಳಿಯು ಅತಿಹೆಚ್ಚು ಹರಡುವಿಕೆಯ ಸಾಮರ್ಥ್ಯವನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಪರೀಕ್ಷಿಸಿದ 90 ಮಾದರಿಗಳಲ್ಲಿ ಇದೇ ತಳಿ ಪತ್ತೆಯಾಗಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಪ್ರತಿಕ್ರಿಯೆ ನೀಡಿದ್ದಾರೆ. "BA.2.75 ಪ್ರಮುಖ ಪ್ರತಿರಕ್ಷಣೆಯಿಂದ ಪಾರಾಗುವ ಶಕ್ತಿಯನ್ನು ಹೊಂದಿದೆ. ಈ ಹೊಸ ತಳಿಯು ಪ್ರತಿಕಾಯ ಶಕ್ತಿ ಉಳ್ಳವರು ಹಾಗೂ ಲಸಿಕೆ ಮೂಲಕ ಪ್ರತಿರಕ್ಷಣೆಯನ್ನು ವೃದ್ಧಿಸಿಕೊಂಡವರಿಗೂ ಅಂಟಿಕೊಳ್ಳುತ್ತದೆ," ಎಂದಿದ್ದಾರೆ.

ಆರೋಗ್ಯ ಸಮಸ್ಯೆ + ಕೊರೊನಾ ವೈರಸ್ = ಸಾವಿನ ಮನೆ!

ಆರೋಗ್ಯ ಸಮಸ್ಯೆ + ಕೊರೊನಾ ವೈರಸ್ = ಸಾವಿನ ಮನೆ!

ಕೊರೊನಾ ವೈರಸ್ ಅಂಟಿಕೊಂಡವರೆಲ್ಲ ಸಾವಿನ ಮನೆ ಸೇರುವುದಿಲ್ಲ. ಸಾವಿನ ಪ್ರಕರಣಗಳಿಗೆ ಕೋವಿಡ್-19 ಒಂದೇ ಮುಖ್ಯ ಕಾರಣ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಈಗಾಗಲೇ ದೀರ್ಘಕಾಲದ ಶ್ವಾಸಕೋಶ ಸಮಸ್ಯೆ, ಹೃದಯ, ಮೂತ್ರಪಿಂಡದ ಕಾಯಿಲೆ ಹೊಂದಿದವರಿಗೆ ಸಾವಿನ ಅಪಾಯ ಹೆಚ್ಚಾಗಿರುತ್ತದೆ. ಅದಾಗ್ಯೂ, ಕೋವಿಡ್ ರೋಗಿಗಳಲ್ಲಿ ತೀವ್ರವಾದ ಹೃದಯ ವೈಫಲ್ಯದ ಅಪಾಯವಿರುತ್ತದೆ. ಹಾಗಿದ್ದರೂ ಒಂದಕ್ಕೊಂದು ಸಂಬಂಧವಿದೆ ಎಂಬು ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ,"ಎಂದು ಬುಧರಾಜ ಹೇಳಿದ್ದಾರೆ.

ಇದರ ಮಧ್ಯೆ ಸಾವಿನ ಪ್ರಕರಣಗಳನ್ನು ಪರಿಶೀಲಿಸಿದಾಗ ಅಂಥ ರೋಗಿಗಳಿಗೆ ಮೊದಲೇ ಹೃದಯ ರಕ್ತನಾಳದ ಕಾಯಿಲೆ, ಮಧುಮೇಹ, ದೀರ್ಘಕಾಲದ ಉಸಿರಾಟದ ಕಾಯಿಲೆ ಮತ್ತು ಕ್ಯಾನ್ಸರ್ ಮುಂತಾದ ವೈದ್ಯಕೀಯ ಸಮಸ್ಯೆಗಳಿದ್ದವು ಎಂಬುದು ತಿಳಿದು ಬಂದಿದೆ.

English summary
Amid rising daily Covid cases, patients are presenting more non-specific symptoms like diarrhoea and chest pain leading to heart attacks says experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X