Budget Friendly luxury cars: ಇದೇ ತಿಗಳಿನಲ್ಲಿ ಬಿಡುಗಡೆಯಾಗಲಿರುವ ಬಜೆಟ್‌ ಸ್ನೇಹಿ ಐಷಾರಾಮಿ ಕಾರುಗಳಿವು

ಕಾಲ ಬದಲಾದಂತೆ ಜನರು ಕೂಡ ಚೇಂಜ್‌ ಕೇಳ್ತಾ ಇರ್ತಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ದೇಶದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗುತ್ತಲೇ ಇದೆ. ಹಾಗೆಯೇ ಜನರ ಅಭಿರುಚಿಗೆ ತಕ್ಕಂತೆ ಮೇ ತಿಂಗಳಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆ ಆಗಲಿದೆ. ಹಾಗಾದರೆ ಯಾವೆಲ್ಲ ಕಂಪನಿಗಳ ಕಾರುಗಳು ಬರಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹೊಸ ಮಾದರಿಯ ಮಾರುತಿ ಸ್ವಿಫ್ಟ್: ಮಾರುತಿ ಸುಜುಕಿಯು ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಮೇ 9, 2024ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದ್ದು, ಈಗಾಗಲೇ ಬುಕ್ಕಿಂಗ್‌ ಆರಂಭವಾಗಿದೆ. ಗ್ರಾಹಕರು 11,000 ರೂಪಾಯಿ ಮುಂಗಡ ಹಣವನ್ನು ಪಾವತಿಸುವ ಮೂಲಕ ಬುಕ್ಕಿಂಗ್‌ ಮಾಡಿ ಕಾಯ್ದಿರಿಸಬಹುದಾಗಿದೆ. ಇನ್ನು ಬಿಡುಗಡೆಗೆ ಕೆಲವು ದಿನಗಳಷ್ಟೇ ಬಾಕಿಯಿದ್ದು, ಡೀಲರ್‌ಶಿಪ್ ಮುಂದೆ ನೂತನ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ ನಿಂತಿರುವ ಫೋಟೋಗಳು ಆನ್‌ಲೈನ್‌ನಲ್ಲಿ ಇದೀಗ ಭಾರೀ ಸದ್ದು ಮಾಡುತ್ತಿವೆ. ಇನ್ನು ಇದರತ್ತ ಹೆಚ್ಚಿನ ಗ್ರಾಹಕರು ಕೂಡ ಗಮನಹರಿಸಿದ್ದಾರೆ ಎಂದು ತಿಳಿದುಬಂದಿದೆ.

Budget-friendly luxury cars to be launched in May 2024 know details

ಫೋರ್ಸ್ ಗೂರ್ಖಾ: ಫೋರ್ಸ್ ಮೋಟಾರ್ಸ್ ಗೂರ್ಖಾ 5 ಡೋರ್‌ ಅನ್ನು ಬಿಡುಗಡೆಗೆ ಮಾಡಲಿದ್ದು, ಬುಕ್ಕಿಂಗ್‌ ಕೂಡ ಈಗಾಗಲೇ ಶುರುವಾಗಿದೆ. ಇನ್ನು ಫೋರ್ಸ್ ಗೂರ್ಖಾ ಇದರ ದರದ ವಿವರಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಗ್ರಾಹಕರು 25,000 ರೂಪಾಯಿ ಮುಂಗಡ ಹಣವನ್ನು ಪಾವತಿಸುವ ಮೂಲಕ ಬುಕ್ಕಿಂಗ್‌ ಮಾಡಿ ಕಾಯ್ದಿರಿಸಬಹುದಾಗಿದೆ. ಇದರ ಬೆಲೆಯನ್ನು ಮೇ ಮೊದಲ ವಾರದಲ್ಲಿ ಬಹಿರಂಗಪಡಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದರ ತಯಾರಕರು ಮೇ ತಿಂಗಳಿನಲ್ಲಿಯೇ ಹೆಚ್ಚಿನ ಗ್ರಾಹಕರು ಖರೀದಿ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಹೊಸ ಗೂರ್ಖಾ 5 ಡೋರ್ಕಾರು ಸಿಂಗಲ್-ಸ್ಲ್ಯಾಟ್ ಗ್ರಿಲ್ ಅನ್ನು ಹೊಂದಿದ್ದು, ಮೇಲ್ಬಾಗದಲ್ಲಿ ಗೂರ್ಖಾ ಬ್ರ್ಯಾಂಡಿಂಗ್ ಅನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಟಾಟಾ ಆಲ್ಟ್ರೋಜ್ ರೇಸರ್: ಟಾಟಾ ಆಲ್ಟ್ರೋಜ್ ರೇಸರ್ ಇದೇ ತಿಂಗಳಿನಲ್ಲಿ ಶೋರೂಮ್‌ಗಳಿಗೆ ಎಂಟ್ರಿ ಕೊಡಲಿದೆ. ಇದು 1.2 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ಯದೆ. ಅಲ್ಲದೆ 120 hp ಮತ್ತು 170 Nm ಎಂಜಿನ್ ಹೊಂದಿದೆ. ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಒಳಗೊಂಡಿರುತ್ತದೆ. ಮತ್ತು ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿರುತ್ತದೆ. ಇದು ಮಿಶ್ರಲೋಹವುಳ್ಳ ರಿಮ್‌ಗಳ 16-ಇಂಚಿನ ಚಕ್ರಗಳು ಹೊಸ ವಿನ್ಯಾಸವನ್ನು ಹೊಂದಿರಲಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ತಯಾರಕರು.

ಟಾಟಾ ನೆಕ್ಸಾನ್ iCNG: ಟಾಟಾ ನೆಕ್ಸಾನ್‌ನ ಹೆಚ್ಚು ಜನಪ್ರಿಯವಾಗಿರುತ್ತಲೇ ಇದ್ದು, ಇದೀಗ ಇದರ ಹೊಸ ಮಾಡೇಲ್‌ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದರ ಹೊಸ ಮಾದರಿ Nexon i-CNG ಆಗಿದೆ. ಟಾಟಾ ನೆಕ್ಸಾನ್ ಪ್ರಸ್ತುತ ಪೆಟ್ರೋಲ್, ಡೀಸೆಲ್ ಮತ್ತು ಇವಿ ಸೇರಿದಂತೆ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಇದೀಗ ಇದನ್ನು iCNG ರೂಪಾಂತರದಲ್ಲಿ ಪ್ರಾರಂಭಿಸಲಾಗುತ್ತದೆ.

ಇನ್ನು ನೆಕ್ಸಾನ್ ಎಸ್‌ಯುವಿಯು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ-ಫಿಟ್ಡ್ ಟ್ವಿನ್-ಸಿಲಿಂಡರ್ ಸಿಎನ್‌ಜಿ ಕಿಟ್‌ನಿಂದ ಕೊಡಿರುತ್ತದೆ ಎಂದು ಹೇಳಲಾಗುತ್ತದೆ. ಮೂಲಕಗಳ ಪ್ರಕಾರ, ಸಿಎನ್‌ಜಿ ಸಿಲಿಂಡರ್‌ಗಳ ಸಾಮರ್ಥ್ಯವು 60 ಲೀಟರ್‌ಗಳಷ್ಟಿರುತ್ತದೆ. Nexon iCNG ಸರಿಸುಮಾರು 230 ಲೀಟರ್‌ಳಷ್ಟು ಬಳಸಬಹುದಾದ ಸ್ಪೇಸ್ ಅನ್ನು ಹೊಂದಿರುತ್ತದೆ.

ಪೋರ್ಷೆ ಪನಾಮೆರಾ: Panamera GTS ಭಾರತದಲ್ಲಿ ಶೀಗ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪನಾಮೆರಾದ ಹಳೆಯ ಮಾದರಿ ನವೆಂಬರ್ 2023ರಲ್ಲಿ ಬಿಡುಗಡೆಯಾಯಿತು. ಆದರೆ, ಈ ವಾಹನವು 2.9-ಲೀಟರ್ ಟ್ವಿನ್-ಟರ್ಬೊ V6 ಎಂಜಿನ್ ಅನ್ನು ಹೊಂದಿದೆ.

ಪೋರ್ಷೆ 4.0-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್‌ನೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ GTS ಆವೃತ್ತಿಯನ್ನು ಬಿಡಿಗಡೆ ಮಾಡಲಾಗುತ್ತದೆ. ಸ್ಟ್ಯಾಂಡರ್ಡ್ ಪನಾಮೆರಾಗೆ ಹೋಲಿಸಿದರೆ, ಇದು ಸ್ಪೋರ್ಟ್ ವಿನ್ಯಾಸವನ್ನು ಒಳಗೊಂಡಿದೆ. ಅಲ್ಲದೆ ಹೊಸ ವಿನ್ಯಾಸವನ್ನು ಒಳಗೊಂಡಿದೆ. ಈ ವಾಹನವು Mercedes-AMG GT63 S ಇ-ಪರ್ಫಾರ್ಮೆನ್ಸ್ 4-ಡೋರ್‌ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+