ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್, ಕಾಂಗ್ನಿಜೆಂಟ್‌ ರಿಜೆಕ್ಟ್ ಮಾಡಿದ ಯುವಕನಿಗೆ ಮೈಕ್ರೋಸಾಫ್ಟ್‌ನಲ್ಲಿ 50 ಲಕ್ಷ ಸಂಬಳ !

|
Google Oneindia Kannada News

ದೆಹರಾದುನ್‌ನಲ್ಲಿ ಯುಪಿಇಎಸ್‌ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್‌ನಿಂದ ತೈಲ ಮತ್ತು ಅನಿಲ ಮಾಹಿತಿಯಲ್ಲಿ ಪರಿಣತಿ ಹೊಂದಿರುವ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಓದುತ್ತಿರುವ ಹರಿಯಾಣದ ಅಂಬಾಲಾದ ಯುವಕ 50 ಲಕ್ಷ ರೂ. ಜಾಬ್‌ ಆಫರ್ ನೀಡಿರುವ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಪಡೆದುಕೊಂಡಿದ್ದಾನೆ.

ಈ ಯುವಕನಿಗೆ ಹೆಸರಾಂತ ಮೈಕ್ರೋಸಾಫ್ಟ್‌ ಕಂಪನಿಯು 50 ಲಕ್ಷ ರೂ. ಪ್ಯಾಕೇಜ್‌ ನೀಡಿದೆ. ತಮ್ಮ ತಂದೆ ಸಣ್ಣ ಅಂಗಡಿಯ ಪ್ಯಾಪಾರಿಯಾಗಿದ್ದು, ಇನ್ನು ನೀವು ನಂಬಬೇಕಿರುವ ಸಂಗತಿಯೆಂದರೆ 2018ರಿಂದ 2022ರ ಬ್ಯಾಚ್‌ನ ಬಿ.ಟೆಕ್ ವಿಧ್ಯಾರ್ಥಿಯಾಗಿರುವ ಈ ಯುವಕ ತನಗೆ ಈ 50 ಲಕ್ಷ ರೂ. ಪ್ಯಾಕೇಜ್‌ ಇರುವ ಹಾಗೂ ಈ ಕೆಲಸ ಸಿಗುವ ಮುನ್ನ ದೇಶದಲ್ಲಿ ಹೆಸರಾಂತ ಕಂಪನಿಗಳಾದ ಅಮೆಜಾನ್, ಕಾಂಗ್ನಿಜೆಂಟ್‌ ಹೀಗೆ ನಾಲ್ಕೈದು ಕಂಪನಿಗಳಿಂದ ಜಾಬ್‌ ಆಫರ್ ರಿಜೆಕ್ಟ್ ಮಾಡಿದ್ದನು.

200 ನೌಕರರನ್ನು ವಜಾ ಮಾಡಿದ ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌?200 ನೌಕರರನ್ನು ವಜಾ ಮಾಡಿದ ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌?

50 ಲಕ್ಷ ರೂ. ಕೆಲಸ ಗಿಟ್ಟಿಸಿಕೊಂಡ ಮಧುರ್ ರಾಖೇಜಾ

50 ಲಕ್ಷ ರೂ. ಕೆಲಸ ಗಿಟ್ಟಿಸಿಕೊಂಡ ಮಧುರ್ ರಾಖೇಜಾ

ಹರಿಯಾಣದ ಅಂಬಾಲಾ ಕಂಟೋನ್ಮೆಂಟ್ ನಿವಾಸಿ ಮಧುರ್ ರಖೇಜಾ ಡೆಹ್ರಾಡೂನ್‌ನಲ್ಲಿ ಓದುತ್ತಿಕೊಂಡಿದ್ದಾರೆ. ಮೈಕ್ರೋಸಾಫ್ಟ್‌ನಿಂದ 50 ಲಕ್ಷ ರೂಪಾಯಿ ಉದ್ಯೋಗದ ಆಫರ್ ಸಿಕ್ಕಿದೆ. ಯುವಕನ ತಾಯಿ ಗೃಹಿಣಿ, ಅವರೂ ಮಗನ ಸಾಧನೆಯಿಂದ ತುಂಬಾ ಖುಷಿಯಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್, ಅಮೆಜಾನ್, ಆ್ಯಪಲ್, ಗೂಗಲ್ ಹೀಗೆ ದೊಡ್ಡ ಬ್ರಾಂಡ್‌ಗಳಲ್ಲಿ ಕೆಲಸ ಸಿಕ್ಕರೆ ಅವರ ಖುಷಿ ಎಲ್ಲಿಲ್ಲದಂತಾಗುತ್ತದೆ. ಈ ಕಂಪನಿಗಳಿಂದಲೇ ವೃತ್ತಿ ಜೀವನ ಆರಂಭವಾದರೆ ಅದೊಂದು ದೊಡ್ಡ ಬ್ರೇಕ್ ಎಂದು ಪರಿಗಣಿಸಿ ವಿದ್ಯಾರ್ಥಿಯೊಬ್ಬ ಈ ಕಂಪನಿಗಳ ಕೆಲಸವನ್ನು ತಿರಸ್ಕರಿಸಿ ಇದೀಗ ಮೈಕ್ರೋಸಾಫ್ಟ್‌ನಿಂದ 50 ಲಕ್ಷ ರೂ. ಎಲ್‌ಪಿಎ ಪ್ಯಾಕೇಜ್ ಹೊಂದಿರುವ ಕೆಲಸ ಗಿಟ್ಟಿಸಿಕೊಂಡಿದ್ದಾನೆ ಇನ್ನು ಹರಿಯಾಣ ಮೂಲದ ಈ ಯುವಕನ ತಂದೆ ಅವರು ಮಗನ ಸಾಧನೆಯಿಂದ ಖುಷಿಪಟ್ಟಿದ್ದು ಅವರು ಸಣ್ಣ ಸಾಧಾರಣ ಅಂಗಡಿ ನಡೆಸುತ್ತಿದ್ದಾರೆ.

ಮೈಕ್ರೋಸಾಫ್ಟ್ ವರ್ಕ್ ಕಲ್ಚರ್ ಅದ್ಭುತವಾಗಿರುವುದರಿಂದ ಮೈಕ್ರೋಸಾಫ್ಟ್ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮಧುರ್ ಹೇಳಿದ್ದಾರೆ. ಅಲ್ಲಿ ಇಂಜಿನಿಯರ್‌ಗಳು ಮಾಡುವ ಕೆಲಸ ಬಹಳ ಪ್ರಭಾವಶಾಲಿಯಾಗಿದೆ. ನೌಕರರನ್ನು ನೋಡಿಕೊಳ್ಳಲಾಗುತ್ತದೆ. ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳು ತಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ಮುಂದುವರಿಸಲು ಇಷ್ಟಪಡುತ್ತದೆ ಎಂದು ಮಧುರ್ ರಾಖೇಜಾ ತಮ್ಮ ಹೊಸ ಕೆಲಸದ ಕುರಿತು ಹೇಳಿಕೊಂಡಿದ್ದಾರೆ.

ಟಿಕ್‌ಟಾಕ್ ಖರೀದಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೊತೆ ಮೈಕ್ರೋಸಾಫ್ಟ್‌ ಮಾತುಕತೆಟಿಕ್‌ಟಾಕ್ ಖರೀದಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೊತೆ ಮೈಕ್ರೋಸಾಫ್ಟ್‌ ಮಾತುಕತೆ

ಮೈಕ್ರೋಸಾಫ್ಟ್ ಆ ಪಟ್ಟಿಯಲ್ಲಿತ್ತು

ಮೈಕ್ರೋಸಾಫ್ಟ್ ಆ ಪಟ್ಟಿಯಲ್ಲಿತ್ತು

ಮಧುರ್ ರಾಖೇಜಾ ಅವರು ಯುಪಿಇಎಸ್ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್‌ನಿಂದ ಆಯಿಲ್ ಮತ್ತು ಗ್ಯಾಸ್ ಇನ್ಫರ್ಮ್ಯಾಟಿಕ್ಸ್‌ನಲ್ಲಿ ವಿಶೇಷತೆಯೊಂದಿಗೆ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿದ್ದಾರೆ. ಮಧುರ್, "ನಾನು ಯಾವಾಗಲೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದೇನೆ ಮತ್ತು ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುವ ಮತ್ತು ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದ್ದೇನೆ ಮತ್ತು ಅಂತಹ ದೊಡ್ಡ ಕಂಪನಿಯ ಭಾಗವಾಗಲು ನಾನು ಯಾವಾಗಲೂ ಬಯಸುತ್ತೇನೆ." ಎಂದಿರುವ ಈ ಯುವಕ, 'ನನ್ನ ಮನಸ್ಸಿನಲ್ಲಿ ನಾನು ಆಯ್ಕೆಯಾಗಲು ಬಯಸುವ ಕಂಪನಿಗಳ ಪಟ್ಟಿಯನ್ನು ಹೊಂದಿದ್ದೆ. ಮೈಕ್ರೋಸಾಫ್ಟ್ ಆ ಪಟ್ಟಿಯಲ್ಲಿತ್ತು, ಮತ್ತು ನಾನು ಇತರ ಜನರ ಸಂದರ್ಶನದ ಅನುಭವಗಳನ್ನು ಓದುವ ಮೂಲಕ ಮತ್ತು ನನಗೆ ಬೇಕಾದ ಕೌಶಲ್ಯಗಳನ್ನು ಕಲಿಯುವ ಮೂಲಕ ಆಯ್ಕೆ ಪ್ರಕ್ರಿಯೆಗೆ ಸಿದ್ಧಪಡಿಸಿದೆ.' ಕ್ಯಾಂಪಸ್ ಪ್ಲೇಸ್‌ಮೆಂಟ್‌ನಿಂದ ಮಧುರ್ ಅವರಿಗೆ ಈ ಉದ್ಯೋಗದ ಆಫರ್ ಸಿಕ್ಕಿದೆ.

ಅಮೆಜಾನ್, ಕಾಗ್ನಿಜೆಂಟ್, ಇನ್ಫೋಸಿಸ್ ಕಂಪನಿ ಆಫರ್ ರಿಜೆಕ್ಟ್

ಅಮೆಜಾನ್, ಕಾಗ್ನಿಜೆಂಟ್, ಇನ್ಫೋಸಿಸ್ ಕಂಪನಿ ಆಫರ್ ರಿಜೆಕ್ಟ್

ಮೈಕ್ರೋಸಾಫ್ಟ್ ಹೊರತುಪಡಿಸಿ, ಮಧುರ್ ಅವರು ಅಮೆಜಾನ್, ಡಿಇ ಶಾ, ಆಪ್ಟಮ್, ಕಾಗ್ನಿಜೆಂಟ್, ಇನ್ಫೋಸಿಸ್ ಮುಂತಾದ ಹಲವಾರು ಕಂಪನಿಗಳಿಗೆ ಆನ್-ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಎರಡನ್ನೂ ಅನ್ವಯಿಸಿದ್ದರು. "ಇವುಗಳಲ್ಲಿ, ನಾನು ಮೈಕ್ರೋಸಾಫ್ಟ್, ಆಪ್ಟಮ್ ಮತ್ತು ಕಾಗ್ನಿಜೆಂಟ್‌ನಿಂದ ಪೂರ್ಣ ಸಮಯದ ಕೊಡುಗೆಗಳನ್ನು ಮತ್ತು ಕ್ಯಾಂಪಸ್ ನಿಯೋಜನೆಗಳ ಭಾಗವಾಗಿ ಅಮೆಜಾನ್‌ನಿಂದ ಇಂಟರ್ನ್‌ಶಿಪ್ ಕೊಡುಗೆಗಳನ್ನು ಪಡೆದುಕೊಂಡಿದ್ದೇನೆ" ಎಂದು ಅವರು ಹೇಳಿದರು. ಇಂಟರ್ನ್‌ಶಿಪ್‌ನಲ್ಲಿ ನನ್ನ ಕಾರ್ಯಕ್ಷಮತೆಯ ಆಧಾರದ ಮೇಲೆ, ಅಮೆಜಾನ್‌ನಲ್ಲಿ ಎಸ್‌ಡಿಇ ಪಾತ್ರಕ್ಕಾಗಿ ನನಗೆ ಪೂರ್ಣ ಸಮಯದ ಕೊಡುಗೆಯೂ ಸಿಕ್ಕಿತ್ತು ಎಂದು ಮಧುರ್ ಹೇಳಿಕೊಂಡಿದ್ದಾನೆ.

ಮೈಕ್ರೋಸಾಫ್ಟ್ ಕಂಪನಿ ಆಯ್ಕೆ ಮಾಡಿದ್ದು ಯಾಕೆ?

ಮೈಕ್ರೋಸಾಫ್ಟ್ ಕಂಪನಿ ಆಯ್ಕೆ ಮಾಡಿದ್ದು ಯಾಕೆ?

ಮೈಕ್ರೋಸಾಫ್ಟ್ ಈ ವರ್ಕ್ ಕಲ್ಚರ್ ಅದ್ಭುತವಾಗಿರುವುದರಿಂದ ಮೈಕ್ರೋಸಾಫ್ಟ್ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮಧುರ್ ಹೇಳಿದ್ದಾರೆ. ಅಲ್ಲಿ ಇಂಜಿನಿಯರ್‌ಗಳು ಮಾಡುವ ಕೆಲಸ ಬಹಳ ಪ್ರಭಾವಶಾಲಿಯಾಗಿದೆ. ನೌಕರರನ್ನು ನೋಡಿಕೊಳ್ಳಲಾಗುತ್ತದೆ. ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳು ತಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ಮುಂದುವರಿಸಲು ಇಷ್ಟಪಡುತ್ತದೆ. ಮೈಕ್ರೋಸಾಫ್ಟ್ ವಿಭಿನ್ನ ಹಿನ್ನೆಲೆಯ ಜನರನ್ನು ಸ್ವಾಗತಿಸುತ್ತಾರೆ. ಸಂಬಳವು ಉತ್ತಮವಾಗಿದೆ ಮತ್ತು ಉದ್ಯೋಗಿಗಳಿಗೆ ಮೈಕ್ರೋಸಾಫ್ಟ್ ಷೇರುಗಳನ್ನು ಸಹ ನೀಡಲಾಗುತ್ತದೆ. ಇದಲ್ಲದೆ, ಇನ್ನೂ ಅನೇಕ ಪ್ರಯೋಜನಗಳಿವೆ ಎಂದು ಮಧುರ್ ರಾಖೇಜಾ ಹೇಳಿಕೊಂಡಿದ್ದಾನೆ.

Recommended Video

ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತ ರೆಡಿಯಾಗಿ‌ ಮಹಿಳಾ ಐಪಿಎಲ್‌ಗೆ | *Cricket | OneIndia Kannada

English summary
Madhur Rakheja, a BTech student of UPES, a multidisciplinary university at Dehra Dun, has bagged a Rs 50 lakh job offer from Microsoft check here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X