ಬಿಹಾರ: ಎನ್‌ಡಿಎ ಹಾಗೂ ಮಹಾಘಟಬಂಧನ್ ನಡುವೆ ನೆಕ್ ಟು ನೆಕ್ ಫೈಟ್
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಮಹಾಘಟಬಂಧನ್ ನಡುವೆ ನೆಕ್ ಟು ನೆಕ್ ಫೈಟ್ ಇದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (ಎನ್‌ಡಿಎ) ಕ್ಕೆ ಬಿಹಾರ ಚುನಾವಣೆ-2020 ರಲ್ಲಿ ಬಹುಮತ ಕೊರತೆಯಾಗುವ ಸಾಧ್ಯತೆ ಇದೆ.
ಮೂರನೇ ಮತ್ತು ಅಂತಿಮ ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದ್ದು, ಚುನಾವಣಾ ಫಲಿತಾಂಶ ನವೆಂಬರ್ 10 ರಂದು ಪ್ರಕಟಿಸಲಾಗುತ್ತದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗಿಂತ ಎನ್‌ಡಿಎ ಶೇ.2 ರಷ್ಟು ಹೆಚ್ಚಿನ ಮತ ಪಡೆಯುತ್ತದೆ ಎಂದು ಹೇಳಲಾಗಿದೆ. ಆದರೆ ಅಂತರ ಬಹಳ ಕಡಿಮೆ. ಎಲ್.ಜೆ.ಪಿ ಮತ್ತು ಇತರರು ಫಲಿತಾಂಶದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ.

ಬಿಹಾರದ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಮಹಾಘಟಬಂಧನ್ ಹೊರತು ಪಡಿಸಿ ಉಳಿದ ಪಕ್ಷಗಳು 6 ರಿಂದ 13 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಎಬಿಪಿ ನ್ಯೂಸ್ ಸಿ-ವೋಟರ್ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಆಂಗ್ ಪ್ರದೇಶವು 7 ಜಿಲ್ಲೆಗಳನ್ನು ಹೊಂದಿದ್ದು, 27 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ಇಲ್ಲಿ ಎನ್‌ಡಿಎ ಹಾಗೂ ಮಹಾಘಟಬಂಧನ್ ನಡುವೆ ನೆಕ್ ಟು ನೆಕ್ ಹೋರಾಟಕ್ಕೆ ಸಾಕ್ಷಿಯಾಗಲಿದೆ.
ಇದರ ಮಧ್ಯೆ ತೃತೀಯ ಪಕ್ಷಗಳಾದ ಎಲ್.ಜೆ.ಪಿ, ಪಪ್ಪು ಯಾಬ್ ಮತ್ತು ಒವೈಸಿ ಕೂಡ ಈ ಪ್ರದೇಶದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಚಿರಾಗ್ ಪಾಸ್ವಾನ್ ಈ ಭಾಗದ ಸಂಸದರಾಗಿದ್ದರೂ, ಎಲ್.ಜೆ.ಪಿ ಇಲ್ಲಿ ಖಾತೆ ತೆರೆಯಲು ವಿಫಲವಾಗಿದೆ ಎಂದು ಎಬಿಪಿ ಸಿ-ವೋಟರ್ ಸಮೀಕ್ಷೆ ತಿಳಿಸಿದೆ.












Click it and Unblock the Notifications