ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆಯೇ?

ಬೆಳಗಾವಿ, ಸೆ. 20: ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ, ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಚಾರಣೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದುವರೆಸಿದ್ದಾರೆ. ಈ ನಡುವೆ ಜಾಮೀನು ಸಿಗದ ಕಾರಣ ತಿಹಾರ್ ಜೈಲಿನಲ್ಲಿ ಡಿಕೆಶಿ ಇದ್ದಾರೆ. ಡಿಕೆಶಿ ಆಪ್ತರಿಗೆ ವಿಚಾರಣೆ ಬಿಸಿ ತಟ್ಟಿದೆ. ಈ ನಡುವೆ ಲಕ್ಷ್ಮಿ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ ಆಸ್ತಿ ವಿವರ ಅಫಿಡವಿಟ್ ನಲ್ಲಿ ತಿಳಿಸಿರುವಂತೆ ಅವರ ಮೇಲೆ ಯಾವುದೇ ಕ್ರಿಮಿನಲ್ ಕೇಸುಗಳಿಲ್ಲ.

'ಡಿ.ಕೆ.ಶಿವಕುಮಾರ್ ಅವರಿಗೆ ಸೇರಿರುವ ದೆಹಲಿಯ ಫ್ಲಾಟ್ ನಲ್ಲಿ ಸಿಕ್ಕ 8.69 ಕೋಟಿ ರು ಬಗ್ಗೆ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ಆಂಜನೇಯ, ಹನುಮಂತಯ್ಯ ಅವರ ವಿಚಾರಣೆ ನಡೆಸಲಾಗಿದೆ.

ಡಿಕೆಶಿ ಪತ್ನಿ ಉಷಾ ಹಾಗೂ ಪುತ್ರಿ ಐಶ್ವರ್ಯಾ ಅವರು ಲೋಕನಾಯಕ ಭವನದಲ್ಲಿರುವ 'ಇಡಿ' ಕಚೇರಿಗೆ ಭೇಟಿ ನೀಡಿ ಬಂದಿದ್ದಾರೆ. ಇದಾದ ಬಳಿಕ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ವಿಚಾರಣೆಯನ್ನು ನಡೆಸಲಾಗಿದೆ.

ಡಿಕೆ ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಮಂಜೂರಾದ ಸೋಲಾರ್ ಘಟಕಗಳು, ಗಣಿಗಾರಿಕೆಗೂ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಅವರ ಸೋದರ ಚನ್ನರಾಜುಗೂ ಸಂಬಂಧವಿದೆ. ಡಿಕೆಶಿ ಹವಾಲ ದಂಧೆಗೆ ಬೇನಾಮಿಯಾಗಿ ಇವರಿಬ್ಬರು ವ್ಯವಹರಿಸಿದ್ದಾರೆ ಎಂಬ ಆರೋಪವಿದೆ. ಈ ಕುರಿತಂತೆ ಪ್ರಶ್ನಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಕೇಳಿ ಬಂದ ಎರಡು ಕೇಸ್

ಚುನಾವಣೆ ಸಂದರ್ಭದಲ್ಲಿ ಕೇಳಿ ಬಂದ ಎರಡು ಕೇಸ್

ವಿಧಾನಸಭೆ ಚುನಾವಣೆಯಲ್ಲಿ ಕುಕ್ಕರ್ ಹಂಚಿಕೆ, ಅಕ್ರಮವಾಗಿ ದುಡ್ಡು ಹಂಚಿಕೆ ಆರೋಪದ ಮೇಲೆ ಐಪಿಸಿ ಸೆಕ್ಷನ್ 171 ಎಚ್ ನಂತೆ ಪ್ರಕರಣ ದಾಖಲಾಗಿತ್ತು. ಇದಲ್ಲದೆ, ಐಪಿಸಿ ಸೆಕ್ಷನ್ 500 ಅಡಿಯಲ್ಲಿ ಮಾನನಷ್ಟ ಮೊಕದ್ದಮೆಯೂ ಲಕ್ಷ್ಮಿ ಅವರ ಮೇಲಿದೆ. ಮಿಕ್ಕಂತೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿಲ್ಲ ಎಂದು ಅಫಿಡವಿಟ್ ನಲ್ಲಿ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಆಸ್ತಿ ಸಂಕ್ಷಿಪ್ತ ವಿವರ

ಡಿಕೆ ಶಿವಕುಮಾರ್ ಆಸ್ತಿ ಸಂಕ್ಷಿಪ್ತ ವಿವರ

2018ಕ್ಕೂ ಮುನ್ನ ನಡೆದ ಚುನಾವಣೆಯಲ್ಲಿ 251 ಕೋಟಿ ರೂ. ಆಸ್ತಿ ಘೋಷಿಸಿದ್ದರು. 2018ರಲ್ಲಿ ಸ್ಥಿರಾಸ್ತಿ 548 ಕೋಟಿ 85 ಲಕ್ಷದ 20 ಸಾವಿರದ 592 ರೂ ಹಾಗೂ ಚರಾಸ್ತಿ 70 ಕೋಟಿ 94 ಲಕ್ಷದ 84 ಸಾವಿರದ 974 ರೂ. ನಷ್ಟಿದೆ. ಬ್ಯಾಂಕ್ ಸಾಲ 101 ಕೋಟಿ 77 ಲಕ್ಷದ 82 ಸಾವಿರದ 200 ರೂ.ನಷ್ಟಿದೆ. ಕುಟುಂಬದ ಆಸ್ತಿ ಮೊತ್ತವನ್ನು ಸೇರಿಸಿದರೆ 840 ಪ್ಲಸ್ ಕೋಟಿ ರು. ಪುತ್ರಿ ಐಶ್ವರ್ಯಾ ಹೆಸರಿನಲ್ಲಿ 102 ಕೋಟಿ ರೂ. ಆಸ್ತಿ ಇದೆ, ಡಿಕೆ ಶಿವಕುಮಾರ್​ ಪತ್ನಿ ಉಷಾ ಹೆಸರಿನಲ್ಲಿ 48 ಕೋಟಿ ರೂ. ಆಸ್ತಿ ಇದೆ. 23 ವರ್ಷ ಐಶ್ವರ್ಯಾ ಕೂಡಾ ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಇದರಿಂದ ಸಕತ್ ಆಗಿ ರಿಟರ್ನ್ಸ್ ಬಂದಿದ್ದು, ಐಶ್ವರ್ಯಾರನ್ನು ಕೋಟ್ಯಧಿಪತಿಯನ್ನಾಗಿಸಿದೆ.

ಲಕ್ಷ್ಮಿ ವಿಚಾರಣೆಗೊಳಗಾದ ಪ್ರಕರಣಗಳು

ಲಕ್ಷ್ಮಿ ವಿಚಾರಣೆಗೊಳಗಾದ ಪ್ರಕರಣಗಳು

* ಬೆಳಗಾವಿ ಜೆಎಂ ಎಫ್ ಸಿ 4ನೇ ಕೋರ್ಟ್ ಜನಪ್ರತಿನಿಧಿಗಳ ಕಾಯ್ದೆ 1951ರ ಉಲ್ಲಂಘನೆ ಐಪಿಸಿ ಸೆಕ್ಷನ್ 127( ಎ)- ಒಟ್ಟು 3 ಪ್ರಕರಣಗಳು
* ಬೆಳಗಾವಿ ಜೆಎಂ ಎಫ್ ಸಿ 4ನೇ ಕೋರ್ಟ್ ಜನಪ್ರತಿನಿಧಿಗಳ ಕಾಯ್ದೆ ಐಪಿಸಿ ಸೆಕ್ಷನ್ 171 ಎಚ್ ಅಡಿಯ ಪ್ರಕರಣ- 2 ಪ್ರಕರಣಗಳು
* ಬೆಳಗಾವಿ ಜೆಎಂ ಎಫ್ ಸಿ 4ನೇ ಕೋರ್ಟ್ ಜನಪ್ರತಿನಿಧಿಗಳ ಕಾಯ್ದೆ ಐಪಿಸಿ ಸೆಕ್ಷನ್ 500 ಅಡಿ ಪ್ರಕರಣದಲ್ಲಿ ಕೋರ್ಟಿಗೆ ಹಾಜರಾಗಿದ್ದಾರೆ.

ಲಕ್ಷ್ಮಿ ವಿರುದ್ಧ ಒಟ್ಟು 6 ಕೇಸುಗಳಿವೆ

ಲಕ್ಷ್ಮಿ ವಿರುದ್ಧ ಒಟ್ಟು 6 ಕೇಸುಗಳಿವೆ

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ವಿರುದ್ಧ ಒಟ್ಟು 6 ಕೇಸುಗಳಿವೆ, ಗುರುತರ ಐಪಿಸಿ ಸೆಕ್ಷನ್ ಉಲ್ಲಂಘನೆ:2, ಇತರೆ ಐಪಿಸಿ :1 ಆದರೆ, ಕ್ರಿಮಿನಲ್ ಕೇಸ್ ಗಳಿಲ್ಲ. ಹೀಗಾಗಿ, ಡಿಕೆ ಶಿವಕುಮಾರ್ ಅವರ ಮನಿ ಲಾಂಡ್ರಿಂಗ್ ಕೇಸಿನಲ್ಲಿ ಏನಾದರೂ ಲಕ್ಷ್ಮಿ ಅವರನ್ನು ಆರೋಪಿಯಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಗಣಿಸಿದರೆ, ಮೊದಲ ಬಾರಿಗೆ ದೊಡ್ಡ ಆರೋಪವನ್ನು ಎದುರಿಸಬೇಕಾಗುತ್ತದೆ. ಆದರೆ, ಸೆ.20ರಂದು ಕೂಡಾ ಇಡಿ ಕಚೇರಿಗೆ ತೆರಳಿರುವ ಲಕ್ಷ್ಮಿ ಅವರು ತಮ್ಮ ಘೋಷಿತ ಆಸ್ತಿ 27 ಕೋಟಿ ಹಾಗೂ ವ್ಯವಹಾರಕ್ಕೆ ಸೂಕ್ತ ದಾಖಲೆ ಒದಗಿಸಿರುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+