ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿಎಸ್ ಅಸ್ತಿ ಎಷ್ಟಿದೆ?
Recommended Video

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದ ಗೌಡ ಅವರ 15.5 ಕೋಟಿ ರು ಗೂ ಅಧಿಕ ಆಸ್ತಿ ಹೊಂದಿದ್ದೇನೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಿದ್ದಾರೆ.
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಒಟ್ಟು 15.5ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಒಂದು ಕಾರು,ಎರಡು ಮನೆ, ಕೈಯಲ್ಲಿ ಕೇವಲ 2.5ಲಕ್ಷ ರೂಪಾಯಿ ನಗದನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅದರಲ್ಲಿ 2,56,47,192 ರೂ.ಮೌಲ್ಯದ ಚರಾಸ್ತಿ,12,24,25,763ರೂ.ಮೌಲ್ಯದ ಸ್ಥಿರಾಸ್ತಿ ಸೇರಿದ್ದು. 2,55,560ರೂ.ನಗದು, 24ಲಕ್ಷ ರೂ.ಮೌಲ್ಯದ ಲ್ಯಾಂಡ್ ಕ್ರೂಸೆರ್ ಪ್ರಾಡೋ ಕಾರು, 5,24,650ರೂ.ಮೌಲ್ಯದ ಚಿನ್ನಾಭರಣ, 2,07,500ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಹೊಂದಿದ್ದು ಮಂಗಳೂರು ಮತ್ತು ಬೆಂಗಳೂರಲ್ಲಿ ನಿವಾಸಗಳನ್ನು ಹೊಂದಿದ್ದಾರೆ. ಮೈಸೂರಿನಲ್ಲಿ ನಿವಾಸವನ್ನು ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿದ್ದಾರೆ.

ಸದಾನಂದ ಗೌಡರ ಸ್ವ ವಿವರ
* ದೇವರಗುಂಡ ವೆಂಕಪ್ಪ ಗೌಡ ಅವರ ಪುತ್ರ
* 66 ವರ್ಷ ವಯಸ್ಸು
* ಬೆಂಗಳೂರಿನ ಸಂಜಯನಗರದ ನಿವಾಸಿ
* ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ
* ಇಮೇಲ್,2 ಫೇಸ್ ಬುಕ್ ಖಾತೆ, ಟ್ವಿಟ್ಟರ್ ಖಾತೆ, ವಾಟ್ಸಾಪ್ ನಂಬರ್ ಹೊಂದಿದ್ದಾರೆ.
* 2013 ರಿಂದ 2017 ರ ಆರ್ಥಿಕ ವರ್ಷದ ತನಕ ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆ.
* ಇವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲ

ಚರಾಸ್ತಿ ವಿವರ
* 2.5ಲಕ್ಷ ರೂಪಾಯಿ ನಗದು
* ಕಾರ್ಪೋರೇಷನ್ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ : 4,65,595 ರು
* ಟೆಲಿಫೋನ್ ಠೇವಣಿ : 2,000
* ಫೆಡರಲ್ ಬ್ಯಾಂಕ್ ಉಳಿತಾಯ ಖಾತೆ: 1,60,880ರು
* ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಲಿ ಖಾತೆ: 3,49,666
* ಕಾರ್ಪೊರೇಷನ್ ಬ್ಯಾಂಕ್ : 51,356 ರು
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : 70,400 ರು
* ವಿಜಯ ಬ್ಯಾಂಕ್ : 9,94,750(ಎಲೆಕ್ಷನ್ ದುಡ್ಡು)
* ಪತ್ನಿ ಡಾಟಿ ಅವರ ಬಳಿ ಇರುವ ಮೊತ್ತ
* 82,488 ರು ನಗದು
* ಕಾರ್ಪೊರೇಷನ್ ಬ್ಯಾಂಕ್ (ಎಫ್ ಡಿ) : 6,91,935 ರು
* ಫೆಡರಲ್ ಬ್ಯಾಂಕ್ (ಎಫ್ ಡಿ) : 10,000 ರು
* ಫೆಡರಲ್ ಬ್ಯಾಂಕ್ (ಎಸ್ ಬಿ) : 2,55,974 ರು

ಷೇರು, ಬಾಂಡ್, ಎಲ್ ಐಸಿ ಉಳಿತಾಯ
* ಕ್ಯಾಂಪ್ಕೋ ಲಿ ಷೇರು 500 ರು ಮೌಲ್ಯ
* ಬೀ ಕೀಪಿಂಗ್ ಕೋ 100 ರು ಮೌಲ್ಯ
* ಮಂಡೆಕೋಲ್ ಕೋ ಆಪ್ 50 ರು 5 ಷೇರು
* ಎಲ್ ಡಿ ಬ್ಯಾಂಕ್ 100 ರು 1 ಷೇರು
* ಪುತ್ತೂರು ನಗರ ಬ್ಯಾಂಕ್ 100 ರು 1 ಷೇರು
* ಎಸ್ ಕೆಎ ಸಿಎಂಎಸ್ 500 ರು 1 ಷು
* ಯುನೈಟೆಡ್ ಕನ್ಸ್ಟ್ರಕ್ಷನ್ ಲಿ 3000 ಷೇರು 22,50,000 ರು
ಪತ್ನಿ ಹೆಸರಿನಲ್ಲಿ 16,700 ರು ಮಂಡೆಕೋಲು ಕೋ ಆಪ್ ಲಿಮಿಟೆಡ್ ಷೇರು
* ವಿಮೆ : ಮ್ಯಾಕ್ಸ್ ನ್ಯೂಯಾರ್ಕ್ ಜೀವ ವಿಮೆ : 30,000
ಐಸಿಐಸಿಐ ಜೀವ ವಿಮೆ : 46,200 ರು
ಪೀರ್ ಲೆಸ್ ಜಿಎಫ್ ಅಂಡ್ ಐಸಿ ಲಿ : 15000ರು
ಎಲ್ ಐಸಿ ಮಾರ್ಕೆಟ್ ಪ್ಲಸ್ : 2,00,000 ರು

ಸಾಲ ಸೋಲ ವಿವರ, ವಾಹನ
ಶಹೀದ್ ಮೊಹ್ಸಿನ್ ಸಯದ್ ರಿಂದ 1,72,50,000 ರು
ಡಾಟಿ ಅವರು
ನಿರಂಜನ್ ರಿಂದ 7,50,000
ಕೆ ಗೋಪಾಲಕೃಷ್ಣ ಭಟ್ : 17,50, 000ರು
ಕಾರ್ತಿಕ್ ಡಿಎಸ್ : 12,50,000 ರು
ಕೆಎನ್ ರಾಜಶ್ರೀ : 10,00,000 ರು

ಡಿವಿಎಸ್ ಬಳಿ ಲ್ಯಾಂಡ್ ಕ್ರೂಸರ್ ಪ್ರಾಡೊ ಇದ್ದು, 2,21,485 ರು ಮೌಲ್ಯ
* 175 ಗ್ರಾಂ ಚಿನ್ನ: 5,24,650 ರು ಮೌಲ್ಯ
* 5 ಕೆಜಿ ಬೆಳ್ಳಿ : 2,07,500 ರು
ಪೀಠೋಪಕರಣ : 5,73,500ರು
ರಿವಾಲ್ವರ್ : 63,500
ಪತ್ನಿ ಡಾಟಿ ಬಳಿ 475 ಗ್ರಾಂ : 14,24,050 ರು
ಬೆಳ್ಳಿ 2 ಕೆಜಿ : 83,000 ರು
ಒಟ್ಟು ಚರಾಸ್ತಿ : 2,56,47,192 ರು












Click it and Unblock the Notifications