ಅಂತಾರಾಷ್ಟ್ರೀಯ ಗಡಿಗಳನ್ನು ಪುನಃ ತೆರೆಯಲು ಸಜ್ಜಾದ ಬಾಲಿ
ಅಂತಾರಾಷ್ಟ್ರೀಯ ಗಡಿಗಳನ್ನು ಪುನಃ ತೆರೆಯಲು ಇಂಡೋಷೇಷ್ಯಾದ ಬಾಲಿ ಸಿದ್ಧತೆ ನಡೆಸಿದೆ. ಕೊರೊನಾ ಸೋಂಕಿನ ಕಾರಣದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಬಾಲಿ ನಿಷೇಧ ಹೇರಿತ್ತು.
ಇದೀಗ ಜಗತ್ತಿನಾದ್ಯಂತ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪುನಃ ಏರ್‌ಪೋರ್ಟ್ ತೆರೆಯಲು ಚಿಂತನೆ ನಡೆಸಿದೆ.
ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವರು ಜನಪ್ರಿಯ ಪ್ರವಾಸಿತಾಣವಾದ ಬಾಲಿ ತನ್ನ ಗಡಿಗಳನ್ನು ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಪ್ರಕಾಣಿಕರಿಗೆ ಪುನಃ ತೆರೆಯುವುದಾಗಿ ಹೇಳಿದ್ದರು.

ಈ ಹಿಂದೆ ಕೊರೊನಾ ಸೋಂಕಿನಿಂದಾಗಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಪುನರಾರಂಭಿಸುವ ಯೋಜನೆಗಳು ಹಲವು ಬಾರಿ ವಿಳಂಬವಾಗಿದ್ದವು. ಇಂಡೋನೇಷ್ಯಾದ ದ್ವೀಪವು ಜಗತ್ತಿನಾದ್ಯಂತ ಪ್ರವಾಸಿಗರನ್ನು ಸ್ವೀಕರಿಸಲು ಸಿದ್ಧವಾಗಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.
ಬಾಲಿಯ ಪ್ರವಾಸೋದ್ಯಮ ಸಚಿವ ಉನೊ ಸೆಪ್ಟೆಂಬರ್ 24 ರಂದು ಬಾಲಿ ಟೂರಿಸಂ ಪಾಲಿಟೆಕ್ನಿಕ್‌ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದೀಗ ವರದಿ ಪ್ರಕಾರ ಕೇಂದ್ರ ಸರ್ಕಾರವು ಅಕ್ಟೋಬರ್‌ನಿಂದ ಅಂತಾರಾಷ್ಟ್ರೀಯ ಟ್ರಾವೆಲ್ ಕಾರಿಡಾರ್ ಅನ್ನು ಪುನಃ ತೆರೆಯಲು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ಬಾಲಿ ವಿಮಾನ ನಿಲ್ದಾಣದ ಬಗ್ಗೆ ಮಾಹಿತಿ:
ಬಾಲಿ ವಿಮಾನ ನಿಲ್ದಾಣವನ್ನು 1930 ರಲ್ಲಿ ಡಚ್ ವಸಾಹತು ಸರ್ಕಾರವು ಸ್ಥಾಪಿಸಿತು. ಆ ಸಮಯದಲ್ಲಿ, ಟೇಕ್-ಆಫ್ ಸ್ಟ್ರಿಪ್ 1 ಕಿ.ಮೀ ಗಿಂತಲೂ ಕಡಿಮೆ ಉದ್ದವಾಗಿತ್ತು.
ಬಾಲಿ ವಿಮಾನ ನಿಲ್ದಾಣದಿಂದ ಸಾರ್ವಜನಿಕ ಸಾರಿಗೆ ಇಲ್ಲ. ಆದಾಗ್ಯೂ, 24-ಗಂಟೆಗಳ ಟ್ಯಾಕ್ಸಿ ಸೇವೆ ಇದೆ.
ಬಾಲಿ ವಿಮಾನ ನಿಲ್ದಾಣವು ಕಾರುಗಳು ಮತ್ತು ಬೈಕುಗಳಿಗೆ ದೊಡ್ಡ ಹೊರಾಂಗಣ ಪಾರ್ಕಿಂಗ್ ಪ್ರದೇಶವನ್ನು ಹೊಂದಿದೆ, ಅಲ್ಲದೆ ಒಳಾಂಗಣ ಎತ್ತರದ ಪಾರ್ಕಿಂಗ್ ಪ್ರದೇಶಗಳಿವೆ.

ಕಾರುಗಳಿಗೆ ದಿನಕ್ಕೆ ವೆಚ್ಚ - 30 ಸಾವಿರ ರೂಪಾಯಿಗಳು ಮತ್ತು ಮೋಟಾರು ಬೈಕುಗಳಿಗೆ - 5 ಸಾವಿರ. ವಿಮಾನ ನಿಲ್ದಾಣದಲ್ಲಿ ನೇರವಾಗಿ ನೀವು ದ್ವೀಪದಲ್ಲಿ ಮುಕ್ತವಾಗಿ ಚಲಿಸಲು ವೈಯಕ್ತಿಕ ಕಾರು ಅಥವಾ ಬೈಕು ಬಾಡಿಗೆಗೆ ಪಡೆಯಬಹುದು.
ಬಾಲಿ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ, ಇದು 1980 ರ ದಶಕದಿಂದಲೂ ಪ್ರವಾಸಿಗರ ಗಮನಾರ್ಹ ಏರಿಕೆ ಕಂಡಿದೆ. ಪ್ರವಾಸೋದ್ಯಮ-ಸಂಬಂಧಿತ ವ್ಯವಹಾರವು ತನ್ನ ಆರ್ಥಿಕತೆಯ 80% ರಷ್ಟನ್ನು ನೀಡುತ್ತದೆ. ಇದು ಸಾಂಪ್ರದಾಯಿಕ ಮತ್ತು ಆಧುನಿಕ ನೃತ್ಯ, ಶಿಲ್ಪಕಲೆ, ಚಿತ್ರಕಲೆ, ಚರ್ಮ, ಲೋಹದ ಕೆಲಸ ಮತ್ತು ಸಂಗೀತವನ್ನು ಒಳಗೊಂಡಂತೆ ಹೆಚ್ಚು ಅಭಿವೃದ್ಧಿ ಹೊಂದಿದ ಕಲೆಗಳಿಗೆ ಹೆಸರುವಾಸಿಯಾಗಿದೆ.
ಇಂಡೋನೇಷಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತಿವರ್ಷ ಬಾಲಿಯಲ್ಲಿ ನಡೆಸಲಾಗುತ್ತದೆ. ಮಾರ್ಚ್ 2017 ರಲ್ಲಿ, ಟ್ರಿಪ್ ಅಡ್ವೈಸರ್ ತನ್ನ ಪ್ರಯಾಣಿಕರ ಆಯ್ಕೆಯ ಪ್ರಶಸ್ತಿಯಲ್ಲಿ ವಿಶ್ವದ ಅಗ್ರ ಗಮ್ಯಸ್ಥಾನವನ್ನು ಬಾಲಿದ್ವೀಪ ಎಂದು ಹೆಸರಿಸಿತು.
ಬಾಲಿ ಕೋರಲ್ (ಹವಳ) ತ್ರಿಕೋಣದ ಭಾಗವಾಗಿದೆ, ಇದು ಸಮುದ್ರ ಜಾತಿಗಳ ಅತಿ ಹೆಚ್ಚು ಜೀವವೈವಿಧ್ಯತೆಯ ಪ್ರದೇಶವಾಗಿದೆ. ಈ ರೀತಿಯಾಗಿ 500 ರೀಫ್ ಕಟ್ಟಡದ (ದಂಡೆ) ಹವಳದ ಜಾತಿಗಳನ್ನು ಕಾಣಬಹುದು. ಹೋಲಿಕೆಯಲ್ಲಿ, ಇಡೀ ಕೆರಿಬಿಯನ್ನಲ್ಲಿರುವುದಕ್ಕಿಂತ ಇದು ಸುಮಾರು 7 ಪಟ್ಟು ಹೆಚ್ಚಾಗಿದೆ.
ಇತ್ತೀಚೆಗೆ, ಬಾಲಿ 2011 ಏಷಿಯಾನ್ ಶೃಂಗಸಭೆ, 2013 ಅಪೆಕ್ (APEC) ಮತ್ತು ವಿಶ್ವ ಸುಂದರಿ 2013 ರ ಸ್ಪರ್ಧೆಗೆ ಆತಿಥೇಯವಾಗಿತ್ತು. ಬಾಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಸುಬಾಕ್ ನೀರಾವರಿ ವ್ಯವಸ್ಥೆಯನ್ನು ಹೊಂದಿದೆ.
ಬಾಲಿಯಲ್ಲಿ 'ತೀರ್ಥ ಎಂಪುಲ್' ಎನ್ನುವ ಚಿಲುಮೆಯೊಂದಿದೆ. ಇದರ ನೀರಲ್ಲಿ ಮೀಯುವುದರಿಂದ, ಮೈ-ಮನಗಳ ಜೊತೆಗೆ ಆತ್ಮವೂ ಶುದ್ಧಿಯಾಗುತ್ತದೆ ಎನ್ನುವುದು ಹಿಂದೂ ಜನರ ನಂಬಿಕೆ. ಇದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಬಾಲಿಯನ್ನರ ಮನೋಧರ್ಮಕ್ಕೆ ಅನುಗುಣವಾಗಿರುವ ನಂಬಿಕೆ. ಇಂಡೋನೇಷ್ಯಾದಲ್ಲಿ 'ದೇವರ ದ್ವೀಪ' ಎಂದು ಹೆಸರಾದದ್ದು ಬಾಲಿ.
ಆ ದೇವರಿಗೂ ಆಕರ್ಷಕ ಎನಿಸುವಷ್ಟು ಚೆಂದದ ದ್ವೀಪ ಎನ್ನುವ ಬಾಲಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ದೇವಾಲಯಗಳೇ! ಬಾಲಿಯಲ್ಲಿ ಆಚರಿಸುವ ಹಿಂದೂಧರ್ಮಕ್ಕೆ ಆಗಮ ತೀರ್ಥ (ಪವಿತ್ರ ನೀರಿನ ಧರ್ಮ) ಎಂದೇ ಕರೆಯುತ್ತಾರೆ. ನೀರಿಲ್ಲದೇ ಅವರಿಲ್ಲ. ದಿನಕ್ಕೆ ಎರಡು ಬಾರಿ ಸ್ನಾನಮಾಡುವರು.
ಅದರೊಂದಿಗೆ ಅವರು ಪ್ರತೀ ಆರು ತಿಂಗಳಿಗೊಮ್ಮೆ ದೇಹ ,ಮನಸ್ಸು, ಆತ್ಮ ಮೂರನ್ನೂ ಸ್ವಚ್ಛಗೊಳಿಸುವ 'ಮೇಲುಕಾಟ್' ತೀರ್ಥಸ್ನಾನ ಮಾಡುತಾರೆ.
ಇಂಡೋನೇಷ್ಯಾದ ದ್ವೀಪ ಮತ್ತು ಪ್ರಾಂತ್ಯ. ಪ್ರಾಂತ್ಯವು ಬಾಲಿ ದ್ವೀಪ ಮತ್ತು ಕೆಲವು ಸಣ್ಣ ನೆರೆಹೊರೆಯ ದ್ವೀಪಗಳನ್ನು ಒಳಗೊಂಡಿದೆ, ಅದರಲ್ಲೂ ವಿಶೇಷವಾಗಿ ನುಸಾ ಪೆನಿಡಾ, ನುಸಾ ಲೆಂಬೊಂಗನ್, ಮತ್ತು ನುಸಾ ಸಿನೆನನ್.
ಇದು ಪಶ್ಚಿಮದ ಜಾವಾ ಮತ್ತು ಪೂರ್ವದಲ್ಲಿ ಲೊಂಬೊಕ್ ನಡುವೆ, ಲೆಸ್ಸರ್ ಸುಂದ ದ್ವೀಪಗಳು ಪಶ್ಚಿಮ ತುದಿಯಲ್ಲಿದೆ. ಇದರ ರಾಜಧಾನಿಯಾದ ಡೆನ್ಪಾಸರ್ ದ್ವೀಪದ ದಕ್ಷಿಣ ಭಾಗದಲ್ಲಿದೆ.












Click it and Unblock the Notifications