ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಅತೀ ಹೆಚ್ಚು ಮೈಲೇಜ್ ಕೊಡುವ ಕಡಿಮೆ ದರದ ಬೈಕ್-ಮಾಹಿತಿ, ಇಲ್ಲಿದೆ ವಿವರ
BaJaj CNG: ದ್ವಿಚಕ್ರ ವಾಹನಗಳಲ್ಲಿ ಅತೀ ಹೆಚ್ಚು ಮೈಲೇಜ್ ಕುಡುವ ಬೈಕ್ ಅಂತಾ ಇದ್ದರೆ ಅದು ಬಜಾಜ್ ಮಾತ್ರ. ಇದೀಗ ಇದೇ ಕಂಪನಿಯ ಹೊಸ ಮಾದರಿಯ ಬೈಕ್‌ವೊಂದು ಶೀಘ್ರದಲ್ಲೇ ಎಂಟ್ರಿ ಕೊಡಲಿದೆ. ಹಾಗಾದರೆ ಯಾವಾಗ ಬಿಡುಗಡೆಯಾಗಲಿದೆ, ವಿಶೇಷತೆ ಏನು ಹಾಗೂ ದರ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಾಮಾನ್ಯವಾಗಿ ಹಳ್ಳಿಗಳ ಕಡೆಗೆ ಬಜಾಜ್ ಬೈಕ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದನ್ನು ಬಿಟ್ಟರೆ ನಗರ ಪ್ರದೇಶಗಳಲ್ಲಿ ವ್ಯಾಪಾರಿಗಳು ಹೆಚ್ಚಾಗಿ ಬಳಕೆ ಮಾಡುವಂತಹ ಬೈಕ್ ಇದಾಗಿದೆ. ಯಾಕೆಂದರೆ ಅತೀ ಹೆಚ್ಚು ಮೈಲೇಜ್ ಕೊಡುವುದಲ್ಲದೆ, ಅತೀ ಕಡಿಮೆ ಬೆಲೆಗೆ ಸಿಗುವ ಕಾರಣ ಈ ಬೈಕನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಇದೀಗ ಇದೇ ಕಂಪನಿಯ ಹೊಸ ಮಾದರಿಯ ಬೈಕ್ ಜೂನ್ ತಿಂಗಳಿನಲ್ಲಿ ಹೊರಬರಲಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಇತ್ತೀಚಿನ ದಿನಗಳಲ್ಲು ವಾಯುಮಾಲಿನ್ಯ ಹೆಚ್ಚಾಗುತ್ತಲೇ ಇದ್ದು, ಇದರಿಂದ ಪರಿಸರ ಸ್ನೇಹಿ ವಾಹನಗಳ ಕಡೆಗೆ ಹೆಚ್ಚಿನ ಜನರು ಆಸಕ್ತಿ ತೋರುತ್ತಿದ್ದಾರೆ. ಇದೀಗ ಕಡಿಮೆ ನಿರ್ವಹಣೆ ಹೊಂದಿರುವ ಸಿಎನ್‌ಜಿ(CNG) ವಾಹನಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ ಬಜಾಜ್ ಆಟೋ ಕಂಪನಿಯು ಸಹ ತನ್ನ ಹೊಸ ಸಿಎನ್‌ಜಿ ಬೈಕ್ ಬಿಡುಗಡೆಗೆ ಮುಂದಾಗಿದ್ದು, ಈ ಹೊಸ ಬೈಕ್ ಜೂನ್ 18ಕ್ಕೆ ಬಿಡುಗಡೆಯಾಲಿದೆ ಎಂದು ತಿಳಿದುಬಂದಿದೆ.
ಈ ಹೊಸ ಸಿಎನ್‌ಜಿ ಬೈಕ್ ಅನ್ನು ಬ್ರೂಜರ್ ಹೆಸರಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಇದು ಪ್ಲಾಟಿನಾ ಬೈಕ್ ಮಾದರಿಯಂತೆ ಇರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಬೈಕ್‌ನಲ್ಲಿ 110 ಇಲ್ಲವೇ 125 ಸಿಸಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿನ್‌ಜಿಜಿ ಕಿಟ್ ಜೋಡಣೆ ಮಾಡಲಾಗುತ್ತಿದ್ದು, ಇದು ಪೆಟ್ರೋಲ್ ಮಾದರಿಗಿಂತಲೂ ಹೆಚ್ಚು ಮೈಲೇಜ್ ಕೊಡಲಿದೆ ಎಂದು ತಿಳಿದುಬಂದಿದೆ.
ಹೊಸ ಮಾದರಿಯ ಬೈಕ್‌ನ ವಿಶೇಷತೆಗಳೇನು?:ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಹೊಂದಿರುವ ಹೊಸ ಬೈಕ್ ಮಾದರಿಯನ್ನು ಬಜಾಜ್ ಕಂಪನಿಯು ಸದ್ಯ ಬ್ರೂಜರ್ ಇ101 ಕೋಡ್ ಹೆಸರಿನೊಂದಿಗೆ ತಯಾರು ಮಾಡುತ್ತಿದೆ. ಇದರಲ್ಲಿ ಲಭ್ಯತೆಗೆ ತಕ್ಕಂತೆ ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಮಾಡಬಹುದಾಗಿದೆ. ಈ ಹೊಸ ಬೈಕ್ ಮಾದರಿಯನ್ನು ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಉತ್ತರಾಖಂಡದ ಪಂತ್ ನಗರದಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆ ಮಾಡಲು ನಿರ್ಧರಿಸಿದ್ದು, ಇದು ಪೆಟ್ರೋಲ್ ಬೈಕ್ ಮಾದರಿಗಳಿಗೆ ಭಾರೀ ಪೈಪೋಟಿ ನೀಡುವ ಸಾಧ್ಯತೆಯಿದೆ.
ಮೈಲೇಜ್ ಎಷ್ಟು?: ಉತ್ತಮ ಇಂಧನ ದಕ್ಷತೆ ಹೊಂದಿರುವ ಸಿಎನ್‌ಜಿ ಬೈಕ್ ಮಾದರಿಯು 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ. ಇದರ ದರ 75-80 ಸಾವಿರ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ 80-85 ಕಿಲೋ ಮೀಟರ್ ಮೈಲೇಜ್ ಕೊಡಲಿದೆ ಎಂದು ಹೇಳಲಾಗುತ್ತಿದೆ.
ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಸ್ವಲ್ಪ ದುಬಾರಿ ಆಗಿರಲಿದೆ. ಆದರೆ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಇಂಧನ ದಕ್ಷತೆ ಹೊಂದಿರುವುದರಿಂದ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಗ್ರಾಹಕರನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಬಳಕೆದಾರರಿಗೆ ಅನೂಕೂವಾಗುವ ಹಲವು ಸರಳ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಲಾಗಿದೆ. ಜೊತೆಗೆ ಹೊಸ ಬಲ್ಬ್ ಇಂಡಿಕೇಟರ್‌ನೊಂದಿಗೆ ಎಲ್ಇಡಿ ಹೆಡ್ ಲೈಟ್, ಬ್ರ್ಯಾಸ್ಡ್ ಹ್ಯಾಂಡಲ್ ಬಾರ್‌ನೊಂದಿಗೆ ಹ್ಯಾಂಡ್‌ಗಾರ್ಡ್‌ಗಳು ಮತ್ತು ಮಿಶ್ರಲೋಹದ ಅಲಾಯ್ ಚಕ್ರಗಳನ್ನು ಜೋಡಣೆ ಮಾಡುವ ಸಾಧ್ಯತೆಯಿದೆ ಅಂತೂ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಬಜಾಜ್ ಎಂದಾಕ್ಷಣ ಮೊದಲು ತಲೆಗೆ ಬರುವುದು ಹೆಚ್ಚಿನ ಮೈಲೇಜ್ ಕೊಡುವ ಬೈಕ್ ಅಂತಾ. ಹೆಚ್ಚು ಮೈಲೇಜ್ ಕೊಡುವ ಕಾರಣಕ್ಕೆ ಈ ಬೈಕ್‌ನತ್ತ ಗ್ರಾಹಕರು ಗಮನಹರಿಸುತ್ತಾರೆ. ಇನ್ನು ಇದರ ಹೊಸ ಮಾದರಿಯ ಬೈಕ್ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದಾರೆ.












Click it and Unblock the Notifications