ಗೌಡರ ಕುಟುಂಬದ ವಿರುದ್ಧ ನಿಂತಿರುವ ಎ.ಮಂಜು ಆಸ್ತಿ ಎಷ್ಟು?
Recommended Video

ಹಾಸನ, ಮಾರ್ಚ್ 26: ಹಾಸನದಲ್ಲಿ ದೇವೇಗೌಡ ಅವರ ಕುಟುಂಬದ ವಿರುದ್ಧ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಎ.ಮಂಜು ಇದೀಗ ದೇವೇಗೌಡ ಅವರ ಕುಟುಂಬದ ಕುಡಿಯ ವಿರುದ್ಧ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಒಂದಾಗಿ ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದನ್ನು ತೀವ್ರವಾಗಿ ವಿರೋಧಿಸಿದ್ದ ಎ.ಮಂಜು, ಬಿಜೆಪಿಗೆ ಹಾರಿ ಅಲ್ಲಿಂದ ಟಿಕೆಟ್ ಪಡೆದು, ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಎ.ಮಂಜು ನಿನ್ನೆಯಷ್ಟೆ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ, ಪ್ರಕರಣಗಳು, ವಿದ್ಯಾಭ್ಯಾಸ ಇನ್ನೂ ಕೆಲವು ವಿಷಯಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಎ.ಮಂಜು ಅವರು 2018-19ನೇ ಸಾಲಿನಲ್ಲಿ 12.04 ಕೋಟಿ ಆದಾಯ ಗಳಿಸಿದ್ದಾರೆ. ಮಂಜು ಅವರ ಪತ್ನಿ ತಾರಾ ಮಂಜುಗೌಡ ಅವರ ಈ ಆರ್ಥಿಕ ವರ್ಷದ ಆದಾಯ 2.20 ಕೋಟಿ ರೂಪಾಯಿಗಳು. ಮಂಜು ಅವರ ಬಳಿ 15 ಲಕ್ಷ ನಗದು ಇದೆ, ಪತ್ನಿ ಅವರ ಬಳಿ 10 ಲಕ್ಷ ನಗದು ಇದೆ.

ಮಂಜು ಬ್ಯಾಂಕ್ ಖಾತೆಯಲ್ಲಿರುವ ಹಣ
ಮಂಜು ಅವರಿಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಲ್ಲಿ 1.68 ಕೋಟಿ ರೂಪಾಯಿ ಹಣ ಇದೆ. ಪತ್ನಿ ತಾರಾ ಅವರ ಬ್ಯಾಂಕ್ ಖಾತೆಯಲ್ಲಿ 65 ಲಕ್ಷ ಹಣ ಇದೆ. ಮಂಜು ಅವರು ಪಿಎಲ್‌ಡಿ ಬ್ಯಾಂಕ್‌ನಲ್ಲಿ 56,000 ದ ಷೇರು ಹೊಂದಿದ್ದಾರೆ. 24.95 ಲಕ್ಷದ ವಿಮೆ ಇದೆ. ಪತ್ನಿ ತಾರಾ ಅವರ ಹೆಸರಿನಲ್ಲಿ 8.75 ಲಕ್ಷದ ವಿಮೆ ಇದೆ. ಜಗದೀಶ್ ಎಂಬುವರಿಗೆ ಮಂಜು ಅವರು 50 ಲಕ್ಷ ಸಾಲ ನೀಡಿದ್ದಾರೆ.

ಮಂಜು ಅವರ ಬಳಿ ಇರುವ ಕಾರುಗಳೆಷ್ಟು?
ಮಂಜು ಅವರ ಬಳಿ ಇನ್ನೋವಾ ಕ್ರಿಸ್ಟಾ, ಫಾರ್ಚ್ಯುನರ್, ಮಾರುತಿ ಒಮಿನಿ, ಹೀರೊ ಹೊಂಡಾ ಬೈಕ್, ಟ್ರಾಕ್ಟರ್, ಟಿಲ್ಲರ್ ಗಳಿವೆ, ಇವುಗಳ ಒಟ್ಟು ಮೌಲ್ಯ 56.45 ಲಕ್ಷ. ಪತ್ನಿ ಬಳಿ 70,000 ಮೌಲ್ಯದ ಕಾರೊಂದು ಇದೆ. ಮಂಜು ಅವರ ಬಳಿ ಎರಡು ಲಕ್ಷ ಮೌಲ್ಯದ ಒಡವೆ ಇದೆ, ಪತ್ನಿ ತಾರಾ ಅವರ ಬಳಿ 31.25 ಲಕ್ಷ ಮೌಲ್ಯದ ಚಿನ್ನವಿದೆ. ಮಂಜು ಅವರ ಒಟ್ಟು ಚರಾಸ್ತಿ ಮೌಲ್ಯ 3.32 ಕೋಟಿ, ಪತ್ನಿ ಅವರದ್ದು 1.66 ಕೋಟಿ.

ಕೃಷಿ ಜಮೀನಿನ ಮಾರುಕಟ್ಟೆ ಮೌಲ್ಯ
ಮಂಜು ಅವರು ಹೊಂದಿರುವ ಒಟ್ಟು ಕೃಷಿ ಭೂಮಿಯ ಈಗಿನ ಮಾರುಕಟ್ಟೆ ಮೌಲ್ಯ 80 ಲಕ್ಷ ರೂಪಾಯಿ. ಲತಾ ಅವರ ಒಡೆತನದ ಕೃಷಿ ಭೂಮಿಯ ಒಟ್ಟು ಮೌಲ್ಯ 2.20 ಕೋಟಿ ರೂಪಾಯಿಗಳು. ಮಂಜು ಅವರ ಒಡೆತನದ ಕೃಷಿಯೇತರ ಜಮೀನಿನ ಈಗಿನ ಮಾರುಕಟ್ಟೆ ಮೌಲ್ಯ 6.68 ಕೋಟಿ ರೂಪಾಯಿ. ಪತ್ನಿ ತಾರಾ ಹೆಸರಲ್ಲಿ ಕೃಷಿಯೇತರ ಜಮೀನು ಇಲ್ಲ.

ವಸತಿ, ವಾಣಿಜ್ಯ ಕಟ್ಟಡಗಳ ವಿವರ
ಮಂಜು ಅವರ ಒಡೆತನದ ಮೂರು ವಾಣಿಜ್ಯ ಕಟ್ಟಡಗಳ ಮಾರುಕಟ್ಟೆ ಮೌಲ್ಯ 1.30 ಕೋಟಿ, ಎರಡು ವಸತಿ ಕಟ್ಟಡಗಳು ಮಂಜು ಅವರ ಹೆಸರಿನಲ್ಲಿದ್ದು, ಅವುಗಳ ಈಗಿನ ಮೌಲ್ಯ 40 ಲಕ್ಷ ರೂಪಾಯಿ. ತಾರಾ ಅವರ ಹೆಸರಿನಲ್ಲಿರುವ ವಸತಿ ಕಟ್ಟಡಗಳ ಈಗಿನ ಮಾರುಕಟ್ಟೆ ಮೌಲ್ಯ 7.30 ಕೋಟಿ.

ಮಂಜು ಅವರ ಒಟ್ಟು ಆಸ್ತಿ ಎಷ್ಟಿದೆ?
ಮಂಜು ಅವರು 2.53 ಕೋಟಿ ರೂಪಾಯಿ ಸಾಲ ತೀರಿಸಬೇಕಿದೆ. ಪತ್ನಿ ತಾರಾ ಅವರ ಹೆಸರಿನಲ್ಲಿ 35 ಲಕ್ಷ ಸಾಲ ಇದೆ. ಎ.ಮಂಜು ಅವರ ಒಟ್ಟು ಚರಾಸ್ತಿ ಮೌಲ್ಯ 3.32 ಕೋಟಿ, ತಾರಾ ಅವರ ಚರಾಸ್ತಿ ಮೌಲ್ಯ 1.66 ಕೋಟಿ. ಮಂಜು ಅವರ ಸ್ಥಿರಾಸ್ತಿ ಮೌಲ್ಯ 9.70 ಕೋಟಿ, ಪತ್ನಿ ಅವರ ಸ್ಥಿರಾಸ್ತಿ ಮೌಲ್ಯ 9.50 ಕೋಟಿ ರೂಪಾಯಿಗಳು. ಅಲ್ಲಿಗೆ ಮಂಜು ಅವರ ಒಟ್ಟು ಆಸ್ತಿ ಮೌಲ್ಯ 13.02 ಕೋಟಿ ರೂಪಾಯಿಗಳಾಯಿತು, ಪತ್ನಿ ತಾರಾ ಮಂಜುಗೌಡ ಅವರ ಒಟ್ಟು ಆಸ್ತಿ ಮೌಲ್ಯ 11.16 ಕೋಟಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications