Maha Kumbh Mela 2025: ಮಹಾಕುಂಭ ಮೇಳದಲ್ಲಿ ಹಾಸಿಗೆಗಳಾಗಿ ಬದಲಾಯ್ತು ಅಮೆಜಾನ್ ಡೆಲಿವರಿ ಬಾಕ್ಸ್
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಹಲವು ಅಪರೂಪದ ಸಂಗತಿಗಳಿಗೆ ಸಾಕ್ಷಿಯಾಗಿದೆ. ಈಗಾಗಲೇ ಮಹಾಕುಂಭ ಮೇಳಕ್ಕೆ ಭೇಟಿ ನೀಡುತ್ತಿರುವ ಭಕ್ತಾದಿಗಳಿಗೆ ಹಲವು ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಪ್ರಸಿದ್ಧ ಇ-ಕಾಮರ್ಸ್ ದೈತ್ಯ ಅಮೇಜಾನ್ (Amazon) ಕೂಡ ಯಾತ್ರಿಕರಿಗೆ ವಿಶೇಷ ಸೌಕರ್ಯ ಕಲ್ಪಿಸಿ, ಗಮನ ಸೆಳೆದಿದೆ.
ಅಮೆಜಾನ್ ಇಂಡಿಯಾ ತನ್ನ ಡೆಲಿವರಿ ಬಾಕ್ಸ್‌ಗಳನ್ನು ಹಾಸಿಗೆಗಳಾಗಿ ಮಾರ್ಪಡಿಸಿದೆ. ಅದನ್ನು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುವವರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ. ಅಮೇಜಾನ್ ಸಂಸ್ಥೆ ತನ್ನ ಉತ್ಪನ್ನಗಳ ಡೆಲಿವರಿಗೆ ಬಳಸುವ ಕಾರ್ಡ್‌ಬೋರ್ಡ್ ಪ್ಯಾಕೇಜಿಂಗ್ ಬಾಕ್ಸ್‌ಗಳನ್ನು ಆರಾಮದಾಯಕ ಹಾಸಿಗೆಗಳಾಗಿ ಮರುರೂಪಿಸಿದೆ. ಇದನ್ನು ಮಹಾ ಕುಂಭಮೇಳಕ್ಕಾಗಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಸೇರುವ ಭಕ್ತರಿಗೆ ನೀಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಮೆಜಾನ್ ಇಂಡಿಯಾ, ನಾವು ಸೇವೆ ಸಲ್ಲಿಸುವ ಜನರಿಗಾಗಿ ನಮ್ಮ ಮಿಷನ್‌ನ ಹೃದಯಭಾಗದಲ್ಲಿ ನಾವೀನ್ಯತೆ ಇದೆ. ಮಹಾ ಕುಂಭಮೇಳದೊಂದಿಗೆ ನಮ್ಮ ಸಂಬಂಧವು ಈ ಉಪಕ್ರಮದ ಮೂಲಕ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ವಿಶ್ವಾಸಾರ್ಹ ಸೇವೆಯ ಮೂಲಕ ಲಕ್ಷಾಂತರ ಜನರಿಂದ ಗುರುತಿಸಲ್ಪಟ್ಟಿರುವ ನಮ್ಮ ಸಾಂಪ್ರದಾಯಿಕ ಅಮೇಜಾನ್ ಬಾಕ್ಸ್‌ಗಳಿಗೆ ಹಾಸಿಗೆ ರೂಪ ನೀಡಿದ್ದೇವೆ. ಬಾಕ್ಸ್‌ಗಳನ್ನು ಹಾಸಿಗೆಗಳಾಗಿ ಮರುರೂಪಿಸುವ ಮೂಲಕ ಮಹಾಕುಂಭ ಮೇಳಕ್ಕೆ ಬರುವವರಿಗೆ ಅಗತ್ಯ ಸೌಕರ್ಯ ಕಲ್ಪಿಸಿದ್ದೇವೆ ಎಂದು ಅಮೆಜಾನ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕಿ ಪ್ರಜ್ಞಾ ಶರ್ಮಾ ಹೇಳಿದ್ದಾರೆ.
ಮಹಾಕುಂಭ ಮೇಳ ಮುಗಿದ ನಂತರ ಅಮೆಜಾನ್ ಇಂಡಿಯಾವು ಈ ಬಳಕೆಯಾಗದ ಹಾಸಿಗೆಗಳನ್ನು ವಿಲೇವಾರಿ ಮಾಡಲು ಕೂಡ ಯೋಜನೆ ರೂಪಿಸಿದೆ. ಬಳಸಬಹುದಾದ ಹಾಸಿಗೆಗಳನ್ನು ನಗರದ ಎನ್‌ಜಿಒಗಳಿಗೆ ವಿತರಿಸುವುದಾಗಿ ಹೇಳಿದೆ. ಆಪ್ಕಿ ಸುವಿಧಾ ಕೆ ಲಿಯೇ, ಆರಾಮ್ ಕಿ ಡೆಲಿವರಿ; Amazon-Dibbon Se Badhkar ಎನ್ನುವ ಉಪಕ್ರಮದಡಿ ಈ ವಿಭಿನ್ನ ಸೌಲಭ್ಯ ನೀಡಿದ್ದು, ಡೆಲಿವರಿ ಬಾಕ್ಸ್‌ಗಳಂತಹ ದೈನಂದಿನ ವಸ್ತುಗಳನ್ನ ಸಮಾಜಕ್ಕೆ ಹೇಗೆ ಮರಳಿ ನೀಡಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿಕೊಂಡಿದೆ.

ಮಹಾಕುಂಭಮೇಳದಲ್ಲಿ ಚಾಟ್‌ಬಾಟ್: ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರಿಗಾಗಿ AI ಆಧಾರಿತ ಚಾಟ್‌ಬಾಟ್ ವ್ಯವಸ್ಥೆ ಕೂಡ ಇದೆ. ಲಕ್ಷಾಂತರ ಜನರಿಗೆ ಅನುಕೂಲಕರವಾಗಿಸುವ ಉದ್ದೇಶದಿಂದ ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಚಾಟ್‌ಬಾಟ್ ಬಳಕೆದಾರರ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪಾರ್ಕಿಂಗ್, ಫುಡ್ ಕೋರ್ಟ್‌ಗಳು ಮತ್ತು ಆಸ್ಪತ್ರೆಗಳ ಬಗ್ಗೆ ನೈಜ-ಸಮಯದ ಮಾಹಿತಿಯನ್ನು ಒದಗಿಸಲಿದೆ. ಇದರಿಂದ ಜನರಿಗೆ ಸಮಯ ಉಳಿಯುವುದು ಮಾತ್ರವಲ್ಲದೆ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.
ಪಾರ್ಕಿಂಗ್, ಸಾರಿಗೆ, ಬ್ಯಾಂಕಿಂಗ್ ಸೇವೆಗಳು ಮತ್ತು ಸಾರ್ವಜನಿಕ ನೀರಿನ ಎಟಿಎಂಗಳಂತಹ ಮಾಹಿತಿಯನ್ನು ಸೆಕೆಂಡ್‌ಗಳಲ್ಲಿ ಚಾಟ್‌ಬಾಟ್ ತ್ವರಿತವಾಗಿ ನೀಡುತ್ತದೆ. ಚಾಟ್‌ಬಾಟ್‌ನ ಹೊಸ ಕಾರ್ಯವು ಬಳಕೆದಾರರಿಗೆ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ನೈಜ-ಸಮಯದ ಪಿಡಿಎಫ್‌ಗಳನ್ನು ಕೂಡ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲದೆ ಭಕ್ತರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ನಿರ್ದಿಷ್ಟ ವಿವರಗಳಿಗೆ ಕ್ಯುಆರ್ ಕೋಡ್‌ಗಳನ್ನು ಸ್ಕ್ಯಾನ್ ಕೂಡ ಮಾಡಬಹುದಾಗಿದೆ.












Click it and Unblock the Notifications