ಬೈಕ್ ಆಯ್ತು ಈಗ ಕಾರ್‌ ಸರದಿ: ಸನ್‌ರೂಫ್‌ನಲ್ಲಿ ಯುವ ಜೋಡಿಯ ರೋಮ್ಯಾನ್ಸ್!

ಕೆಲ ದಿನಗಳ ಹಿಂದೆಯಷ್ಟೇ ಛತ್ತೀಸ್‌ಗಢದ ದುರ್ಗ್ ಪ್ರದೇಶದಲ್ಲಿ ಪ್ರೇಮಿಗಳು ಬೈಕ್‌ನಲ್ಲಿ ಮೈಮರೆತ ವಿಡಿಯೋವೊಂದು ವೈರಲ್ ಆಗಿತ್ತು. ಈಗ ಕಾರ ಸರದಿ ಶುರುವಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಛತ್ತೀಸ್‌ಗಢದ ದುರ್ಗ್ ಪ್ರದೇಶದಲ್ಲಿ ಪ್ರೇಮಿಗಳು ಬೈಕ್‌ನಲ್ಲಿ ಮೈಮರೆತ ವಿಡಿಯೋವೊಂದು ವೈರಲ್ ಆಗಿತ್ತು. ಬೈಕ್ ಸರದಿ ಮುಗಿದ ಬಳಿಕ ಸದ್ಯ ಕಾರ ಸರದಿ ಶುರುವಾಗಿದೆ. ಲಕ್ನೋದ ಐಷಾರಾಮಿ ಪ್ರದೇಶವಾದ ಲೋಹಿಯಾ ಪಥ್‌ನಲ್ಲಿ ಮತ್ತೊಂದು ಜೋಡಿಯು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿರುವುದು ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿ ದಂಪತಿಗಳು ಕಾರಿನ ಸನ್‌ರೂಫ್‌ನಲ್ಲಿ ರೋಮ್ಯಾನ್ಸ್ ಮಾಡುವುದನ್ನು ಕಾಣಬಹುದು.

ಅವರ ಹಿಂದೆ ಚಲಿಸುತ್ತಿದ್ದ ವಾಹನದಿಂದ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಹುಡುಗಿಯನ್ನು ಟೀಕಿಸುವುದು ಮತ್ತು ಸ್ತ್ರೀದ್ವೇಷದ ಕಾಮೆಂಟ್ಗಳನ್ನು ಸಹ ಕೇಳಬಹುದು.

After bikes now its the cars turn: A young couples romance on the sunroof!

ಯುಪಿ ಪೊಲೀಸರು ಹರ್ಟ್-ಬ್ರೇಕ್ ವಿಡಿಯೋ

'ಎಂಬ್ರೇಸ್ ಸೇಫ್ ರೈಡಿಂಗ್' ಎಂಬ ಶೀರ್ಷಿಕೆಯೊಂದಿಗೆ ಯುವ ಪೀಳಿಗೆಗೆ ರಾಶ್ ಡ್ರೈವಿಂಗ್ ಅಪಾಯಗಳ ವಿರುದ್ಧ ಎಚ್ಚರಿಕೆ ನೀಡುವ ವಿಡಿಯೋವನ್ನು ಉತ್ತರಪ್ರದೇಶ ಪೊಲೀಸರು ಹಂಚಿಕೊಂಡಿದ್ದಾರೆ. ರಸ್ತೆ ಸುರಕ್ಷತೆಯ ಕುರಿತು ಯುಪಿ ಪೊಲೀಸರು 16 ಸೆಕೆಂಡುಗಳ ಅನಿಮೇಟೆಡ್ ವಿಡಿಯೊವನ್ನು ಪೋಸ್ಟ್ ಮಾಡಿದ ಕೆಲವು ದಿನಗಳ ನಂತರ ಈ ವಿಡಿಯೋ ವೈರಲ್ ಆಗಿದೆ. ರಸ್ತೆ ಸುರಕ್ಷತಾ ಮಾನದಂಡಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಯುಪಿ ಪೊಲೀಸರು ಜನವರಿ 5 ರಿಂದ ಫೆಬ್ರವರಿ 4 ರವರೆಗೆ 'ರಸ್ತೆ ಸುರಕ್ಷತಾ ತಿಂಗಳು' ನಡೆಸುತ್ತಿದ್ದಾರೆ.

ಚಾಲನೆ ಮಾಡುವಾಗ ನೀವು ಕಾರಿನ ಸನ್‌ರೂಫ್ ಮೂಲಕ ನಿಲ್ಲಬಹುದೇ?

ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಮೋಟಾರು ವಾಹನ ಕಾಯ್ದೆ ಪ್ರಕಾರ ಇದು ಕಾನೂನು ಬಾಹಿರ.

After bikes now its the cars turn: A young couples romance on the sunroof!

ಮೂಲಭೂತವಾಗಿ ಸೆಕ್ಷನ್ 184 (ಎಫ್) ನಲ್ಲಿನ ಕಾಯಿದೆಯು ಹೇಳುತ್ತದೆ- "ಯಾರು ವಾಹನದಲ್ಲಿ ಸಾರ್ವಜನಿಕರಿಗೆ ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡುತ್ತಾರೋ, ಪ್ರಕರಣದ ಸ್ವರೂಪ, ಸ್ಥಿತಿ ಮತ್ತು ಬಳಕೆ ಸೇರಿದಂತೆ ಎಲ್ಲಾ ಸಂದರ್ಭಗಳನ್ನು ಪರಿಗಣಿಸಿ, ವಾಹನವನ್ನು ಚಲಾಯಿಸುವ ಸ್ಥಳ ಮತ್ತು ಆ ಸಮಯದಲ್ಲಿ ಇರುವ ದಟ್ಟಣೆಯ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿ, ಅಪರಾಧಕ್ಕೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಸ್ತರಿಸಬಹುದು ಅಥವಾ ದಂಡದೊಂದಿಗೆ ಶಿಕ್ಷೆ ವಿಧಿಸಬಹುದು. ಈ ದಂಡ ಒಂದು ಸಾವಿರ ರೂಪಾಯಿಗಳಿಗೆ ಹಾಕಬಹುದು. ಮೂರು ವರ್ಷಗಳೊಳಗೆ ಅಪರಾಧ ಮತ್ತೆ ಮಾಡಿರುವುದು ಕಂಡು ಬಂದರೆ ಎರಡನೇ ಅಥವಾ ನಂತರದ ಅಪರಾಧಕ್ಕೆ ಎರಡು ವರ್ಷಗಳವರೆಗೆ ಶಿಕ್ಷೆ ವಿಸ್ತರಿಸಬಹುದು ಮತ್ತು ದಂಡವನ್ನು ಎರಡು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾಗಿದೆ''

ಕದ್ದ ಬೈಕ್‌ನಲ್ಲಿ ಮೈಮರೆತ ಯುವ ಜೋಡಿ

ಛತ್ತೀಸ್‌ಗಢದ ದುರ್ಗ್ ಪ್ರದೇಶದಲ್ಲಿ ಪ್ರೇಮಿಗಳು ಬೈಕ್‌ನಲ್ಲಿ ಮೈಮರೆತ ವಿಡಿಯೋವೊಂದು ವೈರಲ್ ಆಗಿತ್ತು. ಅಸಭ್ಯ ವರ್ತನೆ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಪ್ರೇಮಿಗಳ ಬಂಧನದ ಬಳಿಕ ಸವಾರಿ ಮಾಡಿದ ಬೈಕ್ ಕದ್ದಿದ್ದು ಎಂದು ತಿಳಿದುಬಂದಿದೆ. ಛತ್ತೀಸ್‌ಗಢ ಪೊಲೀಸರು ಕ್ರಮ ಕೈಗೊಂಡಿದ್ದು, ಅಂತರ್ಜಾಲದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿ ಬೈಕ್ ಓಡಿಸುವಾಗ ರೊಮ್ಯಾಂಟಿಕ್ ದೃಶ್ಯ ಕಂಡು ಬಂದಿದೆ. ಹುಡುಗ ಬೈಕ್ ಓಡಿಸುತ್ತಿರುವಾಗ ಹುಡುಗಿ ಬೈಕ್‌ನ ಟ್ಯಾಂಕ್ ಮೇಲೆ ಹುಡುಗನ ಎದುರು ಕುಳಿತಿದ್ದಾಳೆ. ಕದ್ದ ಬೈಕ್‌ನಲ್ಲಿ ಈ ಜೋಡಿ ಅಸಭ್ಯವಾಗಿ ವರ್ತಿಸಿದ್ದು ಹಿಂಬದಿ ಸವಾರರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಹುಡುಗಿ ಸವಾರನನ್ನು ತಬ್ಬಿಕೊಳ್ಳುತ್ತಿರುವುದನ್ನು ನೋಡಬಹುದು. ಈ ವೇಳೆ ಸವಾರ ಬೈಕ್ ಓಡಿಸುತ್ತಿದ್ದು ಇಬ್ಬರೂ ಕೂಡ ಹೆಲ್ಮೆಡ್‌ ಅನ್ನು ಧರಿಸಿಲ್ಲ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+