'ಜಸ್ಟ್ ಆಸ್ಕಿಂಗ್' ಬಹುಭಾಷಾ ನಟ ಪ್ರಕಾಶ್ ರೈ ಆಸ್ತಿ ಎಷ್ಟು?
Recommended Video

ಬೆಂಗಳೂರು, ಮಾರ್ಚ್ 22: ಬಹುಭಾಷಾ ನಟ ಪ್ರಕಾಶ್ ರೈ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಂದು ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರದ ಜೊತೆಗೆ ತಮ್ಮ ಆಸ್ತಿ ವಿವರವನ್ನು ಪ್ರಕಾಶ್ ರೈ ಘೋಷಿಸಿಕೊಂಡಿದ್ದಾರೆ. ಬಹುಭಾಷಾ ನಟರಾಗಿರುವ ಅವರು ಸಂಪಾದಿಸಿರುವ ಆಸ್ತಿ ಎಷ್ಟು ಎಂಬುದನ್ನು ಇಲ್ಲಿ ಪಟ್ಟಿ ಮಾಡಿ ನೀಡಲಾಗಿದೆ.
ಪ್ರಕಾಶ್ ಸಲ್ಲಿಸಿರುವ ಸ್ವವಿವರದ ಪ್ರಕಾರ ಅವರು ದ್ವಿತೀಯ ಪಿಯುಸಿ ವರೆಗೆ ಶಿಕ್ಷಣ ಮುಗಿಸಿದ್ದಾರೆ. ಬಿ.ಕಾಂ ಅನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಪ್ರಕಾಶ್ ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪೂರ್ವದ ವರೆಗೆ ಕಲಿತಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಪ್ರಕಾಶ್ ರೈ ಅವರು ತಮ್ಮ ಹಾಗೂ ತಮ್ಮ ಮಡದಿಯ ಆಸ್ತಿ ವಿವರ, ಆದಾಯದ ವಿವರವನ್ನು ನಾಮಪತ್ರದ ಜೊತೆಗೆ ಸಲ್ಲಿಸಿದ್ದಾರೆ. ಮಕ್ಕಳು ಮತ್ತು ಪೋಷಕರಿಗೆ ಯಾವುದೇ ಆದಾಯ ಇಲ್ಲವೆಂದು ಘೋಷಿಸಿದ್ದಾರೆ.

ಈ ವರ್ಷದ ಆದಾಯ 2.40 ಕೋಟಿ
ಪ್ರಕಾಶ್ ರೈ ಅವರು 2018-19ನೇ ಸಾಲಿನಲ್ಲಿ ಘೋಷಿಸಿರುವ ಆದಾಯ 2.40 ಕೋಟಿ ರೂಪಾಯಿಗಳು. ಅವರ ಮಡದಿ ರಶ್ಮಿ ವರ್ಮಾ ಘೋಷಿಸಿರುವ ಆದಾಯ 6,05,780 ರೂಪಾಯಿಗಳು. ಪ್ರಕಾಶ್ ರೈ ಅವರ ಬಳಿ 25,000 ಸಾವಿರ ನಗದು ಇದೆ. 3.19 ಲಕ್ಷ ಹಣ ಬ್ಯಾಂಕಿನಲ್ಲಿದೆ. ಪ್ರಸ್ತುತ ಸಿನಿಮಾ ಒಂದರ ಮೇಲೆ 1.68 ಕೋಟಿ ಬಂಡವಾಳ ಹೂಡಿದ್ದಾರೆ.ಪ್ರಕಾಶ್ ರೈ ಪತ್ನಿಯನ್ನು ಪೋನಿ ವರ್ಮ ಎಂದು ಕರೆಯಲಾಗುತ್ತದೆ, ಆದರೆ ಪ್ರಕಾಶ್ ರೈ ಚುನಾವಣಾ ಆಯೋಗಕ್ಕೆ ನೀಡಿರುವ ದಾಖಲೆಯಲ್ಲಿ ಪತ್ನಿಯ ಹೆಸರು ರಶ್ಮಿ ವರ್ಮಾ ಎಂತಲೇ ಇದೆ.

1.16 ಕೋಟಿ ಸಾಲ ನೀಡಿದ್ದಾರೆ
ಸಂಡ್ರಿ ಡೆಬ್ಟರ್ಸ್‌ಗೆ ಪ್ರಕಾಶ್ ರೈ ಅವರು 1.16 ಕೋಟಿ ಸಾಲ ನೀಡಿದ್ದಾರೆ. 6.30 ಲಕ್ಷ ಲೀಸ್ ಒಪ್ಪಂದಕ್ಕಾಗಿ ನೀಡಿದ್ದಾರೆ. ಪ್ರತಿ ತಿಂಗಳು ಪ್ರಕಾಶ್ ರೈಗೆ ಪ್ರತಿ ತಿಂಗಳು 25,000 ಬಾಡಿಗೆ ಸಹ ಬರುತ್ತಿದೆ. ಮಡದಿಗೆ ಪ್ರತಿ ತಿಂಗಳು 19,000 ಬಾಡಿಗೆ ಬರುತ್ತದೆ.

ಹಲವು ಕಾರಿವೆ ಪ್ರಕಾಶ್ ರೈ ಬಳಿ
ಪ್ರಕಾಶ್ ರೈ ಅವರ ಬಳಿ ಐದು ಐಶಾರಾಮಿ ಕಾರುಗಳಿವೆ. ಒಂದು ಬೊಲೆರೊ ಹಾಗೂ ಒಂದು ವೆಸ್ಪಾ ಸ್ಟೂಟರ್ ಇವೆ. 17.31 ಲಕ್ಷ ಬೆಲೆಯ ಇನ್ನೊವಾ , 45 ಲಕ್ಷ ಬೆಲೆಯ ಬಿಎಂಡಬ್ಲು, 15.77 ಲಕ್ಷ ಬೆಲೆಯ ಇಸುಜು, 40.65 ಲಕ್ಷ ಬೆಲೆಯ ಆಡಿ, 63.37 ಲಕ್ಷ ಬೆಲೆಯ ಬೆಂಜ್ ಇದೆ. ಜೊತೆಗೆ 5.46 ಲಕ್ಷದ ಬೊಲೆರೊ, 70 ಸಾವಿರಗಳ ಒಂದು ವೆಸ್ಪಾ ಸ್ಕೂಟರ್ ಇದೆ. ಮಡದಿ ರಶ್ಮಿ ವರ್ಮಾ ಬಳಿ ಯಾವುದೇ ವಾಹನಗಳಿಲ್ಲ.

ಪ್ರಕಾಶ್ ರೈ ಬಳಿ ಚಿನ್ನವಿಲ್ಲ
ಪ್ರಕಾಶ್ ರೈ ಅವರ ಬಳಿ ಚಿನ್ನ ಇಲ್ಲ, ಪತ್ನಿ ಬಳಿ 18 ಲಕ್ಷ ಬೆಲೆಯ ಆಭರಣ ಇದೆ, ತಾಯಿ ಬಳಿ 6 ಲಕ್ಷ ಮೌಲ್ಯದ ಚಿನ್ನ ಇದೆ. ಏರ್ ಕಂಡಿಷನರ್, ಫ್ರಿಡ್ಜ್, ಪ್ರೊಜೆಕ್ಟರ್ ಈ ರೀತಿಯ ಚರಾಸ್ಥಿ 7 ಲಕ್ಷ ಮೌಲ್ಯದ್ದಿದೆ. ಪ್ರಕಾಶ್ ರೈ ಅವರ ಬಳಿ ಕೃಷಿ ಹಾಗೂ ಕೃಷಿಯೇತರ ಜಮೀನು ಇದೆ. ಅದರ ಜೊತೆಗೆ ಎರಡು ಫಾರ್ಮ್ ಹೌಸ್‌ಗಳಿದೆ. ಜೊತೆಗೆ ಮೂರು ರೆಸಿಡೆನ್ಶಿಯಲ್ ಬಿಲ್ಡಿಂಗ್‌ಗಳಿವೆ. ಇವೆಲ್ಲವುಗಳ ಒಟ್ಟು ಮೌಲ್ಯ 26.59 ಕೋಟಿ ಆಗುತ್ತದೆ.

ಪ್ರಕಾಶ್ ಅವರ ಒಟ್ಟು ಆಸ್ತಿಯ ಮೌಲ್ಯವೆಷ್ಟು?
ಪ್ರಕಾಶ್ ರೈ ಅವರ ಮೇಲೆ ಕಾರು ಸಾಲ, ಖಾಸಗಿ ಸಾಲಗಳು ಇವೆ. ಎಲ್ಲ ಒಟ್ಟು ಸೇರಿ 3.83 ಕೋಟಿ ರೂಪಾಯಿ ಸಾಲ ಇದೆ. ಇದರ ಜೊತೆಗೆ 4.25 ಕೋಟಿ ಸಾಲದ ಹಣ ತಕರಾರಿನಲ್ಲಿದೆ. ಪ್ರಕಾಶ್ ರೈ ಅವರ ಸ್ಥಿರ ಹಾಗೂ ಚರಾಸ್ತಿಯ ಒಟ್ಟು ಮೌಲ್ಯ 30,09,756,797 ರೂಪಾಯಿ ಆಗುತ್ತದೆ. ಇದರ ಜೊತೆಗೆ 3.85 ಕೋಟಿ ಸಾಲ ಸಹ ಇದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications