Justice for biryani: 'ಪಾರ್ಲೆ-ಜಿ' ಬಿರಿಯಾನಿ ತಯಾರಿಸಿದ ಯುವತಿ! ನೆಟ್ಟಿಗರು ಏನಂದ್ರು ಗೊತ್ತಾ?
ಭಾರತದಲ್ಲಿ ಘಮಘಮಿಸುವ ಬಿರಿಯಾನಿಗೆ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ. ಹಲವರ ಫೇವರೇಟ್ ಫುಡ್ ಕೂಡ ಬಿರಿಯಾನಿ ಎನ್ನುತ್ತಾರೆ. ಜಾಗತಿಕವಾಗಿಯೂ ಬಿರಿಯಾನಿಗೆ ಹೆಚ್ಚು ಮನ್ನಣೆ ಪಡೆದಿದೆ. ಸದ್ಯ ಹೋಟೆಲ್‌ಗಳಲ್ಲಿ ವೈವಿಧ್ಯಮಯ ಬಿರಿಯಾನಿಗಳು ಆಹಾರಪ್ರಿಯರ ಬಾಯಲ್ಲಿ ನೀರೂರಿಸುತ್ತಿವೆ. ಆದರೆ ಹೊಸ ವೆರೈಟಿಯ ಬಿರಿಯಾನಿಯೊಂದು ಆಹಾರಪ್ರಿಯರಲ್ಲಿ ಗಾಬರಿ ತರಿಸಿದೆ.
ಸಾಮಾನ್ಯವಾಗಿ ಬೆಂಗಳೂರು ದೊನ್ನೆ ಬಿರಿಯಾನಿ, ಹೈದರಾಬಾದಿ ಬಿರಿಯಾನಿ, ಆಂಧ್ರ ಬಿರಿಯಾನಿ ಹಾಗೂ ಅಂಬೂರ್ ಬಿರಿಯಾನಿಗಳು ಹೆಚ್ಚು ಫೇಮಸ್ ಆಗಿವೆ. ಆದರೆ, ಇದೀಗ ಪಾರ್ಲೆ ಜಿ ಬಿರಿಯಾನಿ ಸಖತ್ ಸದ್ದು ಮಾಡುತ್ತಿದೆ. ನಾವೆಲ್ಲ ಚಿಕ್ಕಂದಿನಿಂದ ತಿಂದು ಬೆಳೆದ ಪಾರ್ಲೆ ಜಿ ಬಿಸ್ಕೆಟ್ ಯಾರಿಗೆ ತಾನೆ ಗೊತ್ತಿಲ್ಲ? ಈಗ ಅದರಿಂದಲೇ ಬಿರಿಯಾನಿ ತಯಾರಿಸುವ ಮಹಾಸಾಹಸಕ್ಕೆ ಯುವತಿಯೊಬ್ಬರು ಕೈಹಾಕಿದ್ದಾರೆ.

ಇದಕ್ಕೆ ಪಾರ್ಲೆ ಜಿ ಬಿರಿಯಾನಿ ಎಂದೇ ಹೆಸರಿಟ್ಟು, ಬಿರಿಯಾನಿ ಪ್ರಿಯರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು #Justice for biryani ಎನ್ನುವ ಅಭಿಯಾನಕ್ಕೂ ಕರೆ ನೀಡಿದೆ. ಬಿರಿಯಾನಿಯನ್ನು ಇಂತಹ ದುಸ್ಥಿತಿಗೆ ತಂದಿರೋ ಈಕೆಯ ವಿರುದ್ಧ ಕಠಿಣ ಕ್ರಮ ಆಗಲೇಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
ಜೀವನವು ನಿಮಗೆ ಪಾರ್ಲೆ ಜಿಯನ್ನು ನೀಡಿದಾಗ, ಅದನ್ನು ಚಾಯ್‌ನಲ್ಲಿ ಮುಳುಗಬೇಡಿ, ಅದರಿಂದ ಬಿರಿಯಾನಿ ಮಾಡಿ ಎಂದು ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಮೇಲೆ ನನಗೆ ಬಿರಿಯಾನಿ ಮೇಲಿದ್ದ ವ್ಯಾಮೋಹವೇ ಹೋಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಪಾರ್ಲೆ ಜಿಗೂ ಬಿರಿಯಾನಿಗೂ ಏನ್ರೀ ಸಂಬಂಧ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ವಿಡಿಯೋದಲ್ಲಿ ಯುವತಿ ಪಾರ್ಲೆ ಜಿ ಬಿರಿಯಾನಿ ತಯಾರಿಸಿರೋ ಪಾತ್ರೆಯನ್ನು ಪ್ರದರ್ಶಿಸಿದ್ದಾರೆ. ಅದರೊಳಗೆ ಚಿಕನ್ ಪೀಸ್‌ನಂತೆ ಪಾರ್ಲೆ ಜಿ ಬಿಸ್ಕಟ್‌ಗಳೇ ಕಣ್ಣಿಗೆ ರಾಚುತ್ತಿದ್ದು, ಇದನ್ನು ಉಣಬಡಿಸಲು ನಾನು ಎಕ್ಸೈಟ್ ಆಗಿದ್ದೇನೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಇದಕ್ಕೆ ಒಳ್ಳೆಯ ಮಸಾಲೆಗಳನ್ನು ಹಾಕಿದ್ದೇನೆ. ಬಿರಿಯಾನಿ ಅದ್ಭುತವಾಗಿ ತಯಾರಾಗಿದೆ ಎಂದು ಬೆನ್ನುತಟ್ಟಿಕೊಂಡಿದ್ದಾಳೆ. ಸದ್ಯ ಭಾನುವಾರ ಬಿರಿಯಾನಿ ತಿನ್ನಬೇಕು ಅಂದುಕೊಂಡಿದ್ದವರು ಈ ವಿಡಿಯೋ ನೋಡಿ ಪ್ಲ್ಯಾನ್ ಕ್ಯಾನ್ಸಲ್ ಮಾಡಿಕೊಂಡಿರೋದಂತೂ ಸತ್ಯ!.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ರೀಲ್‌ನಲ್ಲಿ, ಯುವತಿ ಬಿರಿಯಾನಿ ತಿನ್ನಲು ಉತ್ಸಾಹವನ್ನು ತೋರಿದ್ದಾರೆ. ಪಾರ್ಲೆ-ಜಿ ಬಿಸ್ಕತ್ತುಗಳೊಂದಿಗೆ ಬಿರಿಯಾನಿ ಮಸಾಲಾದಲ್ಲಿ ಕೂಡ ತುಂಬಿದೆ ಎಂದು ಅವರು ಹೇಳಿದ್ದಾರೆ. ಮಸಾಲಾ ಸ್ಪಷ್ಟವಾಗಿ ಗೋಚರಿಸದಿದ್ದರೂ, ಬಿಸ್ಕತ್ತುಗಳನ್ನು ಸುಮ್ಮನೆ ಮೇಲ್ನೋಟಕ್ಕೆ ಅದರ ಮೇಲೆ ಜೋಡಿಸಿದಂತಿದೆ. ಇದು ವ್ಯೂವ್ಸ್‌ಗಾಗಿ ಮಾಡಿರೋ ಟ್ರಿಕ್ ಕೂಡ ಇರಬಹುದು ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವೀಡಿಯೊ ಬರೋಬ್ಬರಿ 3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಆದರೆ ಬಹುತೇಕರು ಈ ವಿಡಿಯೋ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕಾಮೆಂಟ್‌ಗಳಲ್ಲಿ ಕೂಡ ಯುವತಿಯ ದುಸ್ಸಾಹಸದ ಬಗ್ಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳು ಬಂದಿದೆ. ಕೆಲವರು ಈ ಬಗ್ಗೆ ಹಾಸ್ಯ ಕೂಡ ಮಾಡಿದ್ದಾರೆ. ಬಿರಿಯಾನಿ ಪ್ರಿಯರಿಗಂತೂ ಇದು ನೆಮ್ಮದಿ ಕಸಿದಿದೆ.












Click it and Unblock the Notifications