Whiskies: ಹೊಸ ವರ್ಷದ ಪಾರ್ಟಿ ಗುಂಗು ಹೆಚ್ಚಿಸುವುದಕ್ಕೆ ಇಲ್ಲಿದೆ ಬೆಸ್ಟ್ 7 ವಿಸ್ಕಿ ಲಿಸ್ಟ್
ಹೊಸ ವರ್ಷವನ್ನು ಪಾರ್ಟಿ ಮಾಡುವ ಮೂಲಕ ಹಲವರು ಆಹ್ವಾನಿಸುತ್ತಾರೆ. ಹೊಸ ವರ್ಷದ ಗುಂಗು ಶುರುವಾಗಿದೆ. ಹೊಸ ವರ್ಷದಲ್ಲಿ ಪಾರ್ಟಿ ಎಂಜಾಯ್ ಮಾಡುವುದಕ್ಕೆ ಕೆಲವೊಂದು ಪ್ರಮುಖ ವಿಸ್ಕಿ ಹಾಗೂ ಡ್ರಿಂಕ್ಸ್‌ಗಳಿವೆ. ಈ ಡ್ರಿಂಕ್ಸ್‌ಗಳು ಕೊಡುವ ಕಿಕ್ ಬೇರೆ. ಕಡಿಮೆ ಬೆಲೆಯ ಹಾಗೂ ಒಳ್ಳೆಯ ಅನುಭವ ನೀಡುವ ಪ್ರಮುಖ ವಿಸ್ಕಿ ಬ್ರ್ಯಾಂಡ್, ಅವುಗಳ ಬೆಲೆ ಹಾಗೂ ವಿಶೇಷತೆಯ ಪರಿಚಯ ಇಲ್ಲಿದೆ.
* ಜೇಮ್ಸನ್ ಐರಿಶ್ ವಿಸ್ಕಿ: ಜೇಮ್ಸನ್ ವಿಸ್ಕಿಯಲ್ಲಿ ಹಲವು ಸ್ವಾದಗಳು ಇವೆ. ಕೆಲವೇ ಕೆಲವು ಪ್ರಮುಖ ವಿಸ್ಕಿಗಳಲ್ಲಿ ಈ ರೀತಿಯ ಟೇಸ್ಟ್ ಇರುತ್ತದೆ. ತಾಜಾ ಹಣ್ಣುಗಳು ಮತ್ತು ವೆನಿಲ್ಲಾ ಸೇರಿದಂತೆ ಹಲವು ಪ್ರಮುಖ ವಸ್ತುಗಳನ್ನು ಸೇರಿ ಈ ವಿಸ್ಕಿ ತಯಾರಿಸಲಾಗುತ್ತದೆ. ಜೇನುತುಪ್ಪ ಹಾಗೂ ಖಾರ ಎರಡು ರುಚಿ ಇದರಲ್ಲಿ ಇದೆ. ಇದೇ ಕಾರಣಕ್ಕೆ ಈ ವಿಸ್ಕಿ ಟೇಸ್ಟ್ ಡಿಫರೆಂಟ್ ಆಗಿದೆ. ಈ ವಿಸ್ಕಿಯ ಬೆಲೆಯು 2,800 ರೂಪಾಯಿಂದ ಪ್ರಾರಂಭವಾಗುತ್ತದೆ.

* ಜಾನಿ ವಾಕರ್ ಬ್ಲ್ಯಾಕ್ ಲೇಬಲ್: ಸ್ಕಾಚ್ ವಿಸ್ಕಿಯಲ್ಲಿ ಜಾನಿ ವಾಕರ್ ಬ್ಲ್ಯಾಕ್ ಲೇಬಲ್ ವಿಸ್ಕಿಯು ಮದ್ಯ ಪ್ರಿಯರ ಆಯ್ಕೆಗಳಲ್ಲಿ ಒಂದಾಗಿದೆ. ಸಿಹಿ ಹಾಗೂ ಮಸಾಲೆಯುಕ್ತ ಪರಿಮಳವನ್ನು ಇದು ಒಳಗೊಂಡಿದೆ. ಈ ವಿಸ್ಕಿಗೆ ಅದರದೇ ಆದ ಅಭಿಮಾನಿಗಳು ಇದ್ದಾರೆ. 1820ರಿಂದಲೂ ಈ ವಿಸ್ಕಿ ಮಾರುಕಟ್ಟೆಯಲ್ಲಿದ್ದು, ಅತ್ಯಂತ ಹಳೆಯ ಹಾಗೂ ಪ್ರಮುಖ ವಿಸ್ಕಿಗಳಲ್ಲಿ ಒಂದು ಎನ್ನುವ ಖ್ಯಾತಿಯನ್ನು ಗಳಿಸಿದೆ. ಈ ವಿಸ್ಕಿಯ ಬೆಲೆಯು 5,800 ರೂಪಾಯಿ ಇದೆ.
* ಗ್ರಾಂಟ್ಸ್ ಟ್ರಿಪಲ್‌ವುಡ್: ಗ್ರಾಂಟ್ಸ್ ಟ್ರಿಪಲ್‌ವುಡ್ ವಿಸ್ಕಿಯು ಹೆಸರೇ ಹೇಳುವಂತೆ ಮೂರು ಹಣ್ಣುಗಳ ಸಮ್ಮಿಶ್ರಣದಿಂದ ಆಗಿರುವ ವಿಸ್ಕಿ ಆಗಿದೆ. ಈ ವಿಸ್ಕಿಯ ವಾಸನೆಯು ಮಸಾಲೆಯುಕ್ತವಾಗಿದ್ದು, ಉಳಿದ ವಿಸ್ಕಿಗಳಿಗಿಂತಲೂ ಭಿನ್ನವಾಗಿದೆ. ಮಸಾಲೆಯುಕ್ತ ಹಾಗೂ ತಿಳಿ ಸಿಹಿಯನ್ನು ಒಳಗೊಂಡಿರುವ ವಿಸ್ಕಿ ಇದಾಗಿದೆ. ಮಾಗಿದ ಪೇರಳೆ ಹಾಗೂ ಬೇಸಿಗೆ ಕಾಲದಲ್ಲಿ ದೇಹದ ತಂಪಿಗಾಗಿ ತಿನ್ನುವ ಹಣ್ಣುಗಳನ್ನು ಸೇರಿಸಿ ಈ ವಿಸ್ಕಿ ತಯಾರಿಸಲಾಗುತ್ತದೆ. ಪರಿಮಳ ಹಾಗೂ ಕಿಕ್ ಎರಡೂ ವಿಚಾರದಲ್ಲೂ ಇದು ಒಳ್ಳೆಯ ವಿಸ್ಕಿ ಆಗಿದೆ. ಅಂದಾಜು 2,000 ಸಾವಿರ ರೂಪಾಯಿಯಿಂದ ಈ ವಿಸ್ಕಿ ಸಿಗುತ್ತದೆ.

* ಅಮೃತ್ ಇಂಡಿಯನ್ ಸಿಂಗಲ್ ಮಾಲ್ಟ್: ಅಮೃತ್ ವಿಸ್ಕಿ ಸಹ ಭಿನ್ನ ರುಚಿಯಿಂದ ಕೂಡಿದೆ. ಈ ವಿಸ್ಕಿಯಲ್ಲಿ ಒಣಗಿದ ಹಣ್ಣುಗಳು, ಜೇನುತುಪ್ಪ ಮತ್ತು ಡಾರ್ಕ್ ಚಾಕೊಲೇಟ್‌ಗಳನ್ನು ಬಳಸಲಾಗುತ್ತದೆ. ಈ ವಿಸ್ಕಿಗೂ ಸಹ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅಲ್ಲದೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಹಾಗೂ ಪ್ರಮುಖ ವಿಸ್ಕಿಗಳಲ್ಲಿ ಇದು ಸಹ ಒಂದಾಗಿದೆ. ಇನ್ನು ಈ ವಿಸ್ಕಿಯ ಬೆಲೆಯು 4,500 ರೂ. ಆಗಿದೆ.
* ಇಂದ್ರಿ ಟ್ರಿನಿ: ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇರುವ ವಿಸ್ಕಿಗಳಲ್ಲಿ ಇಂದ್ರಿ ಟ್ರಿನಿ ವಿಸ್ಕಿ ಸಹ ಒಂದು. ಭಾರತದ ಪ್ರಮುಖ ವಿಸ್ಕಿಗಳಲ್ಲಿ ಇದು ಒಂದಾಗಿದೆ. ಒಣದ್ರಾಕ್ಷಿ, ಬ್ಲ್ಯಾಕ್ ಟೀ, ಕ್ಯಾರಮೆಲೈಸ್ಡ್ ಅನಾನಸ್, ಓಕ್, ವೆನಿಲ್ಲಾ ಹಾಗೂ ಜೇನುತುಪ್ಪದ ಮಿಶ್ರಣದೊಂದಿಗೆ ಈ ವಿಸ್ಕಿಯನ್ನು ತಯಾರಿಸಲಾಗುತ್ತದೆ. ವಿಶೇಷವೆಂದರೆ ಈ ವಿಸ್ಕಿಯ ವಿಶೇಷತೆಗೆ ಇಲ್ಲಿಯ ವರೆಗೆ 14 ಕ್ಕೂ ಹೆಚ್ಚು ಜಾಗತಿಕ ಮಟ್ಟದ ಪ್ರಶಸ್ತಿಗಳು ಸಹ ಬಂದಿವೆ. ಈ ವಿಸ್ಕಿಯ ಬೆಲೆಯು 3,000 ಸಾವಿರ ರೂಪಾಯಿಂದ ಪ್ರಾರಂಭವಾಗುತ್ತದೆ. ಒಂದೊಂದು ರಾಜ್ಯದಲ್ಲೂ ಈ ವಿಸ್ಕಿಯ ಬೆಲೆಯಲ್ಲಿ ಸಲ್ಪ ವ್ಯತ್ಯಾಸ ಇದೆ.

* ಪಾಲ್ ಜಾನ್ ಸಿಂಗಲ್ ಮಾಲ್ಟ್ ಮಿಥುನ್: ಇದು ಪ್ರೀಮಿಯಂ ಇಂಡಿಯನ್ ವಿಸ್ಕಿಯಾಗಿದೆ. ಇದರಲ್ಲಿ ಜೇನುತುಪ್ಪ, ವೆನಿಲ್ಲಾ, ಕಾಫಿ, ಡಾರ್ಕ್ ಚಾಕೊಲೇಟ್, ಶುಂಠಿ, ಮೆಣಸು ಮತ್ತು ದಾಲ್ಚಿನ್ನಿಗಳನ್ನು ಬಳಸುತ್ತಾರೆ. ಸ್ವಲ್ಪ ಖಾರ, ಸ್ವಲ್ಪ ಹುಳಿ ಹಾಗೂ ಸ್ವಲ್ಪ ಸಿಹಿಯನ್ನು ಈ ವಿಸ್ಕಿ ಒಳಗೊಂಡಿದೆ. ಇದರ ಬೆಲೆಯು 6 ಸಾವಿರ ರೂಪಾಯಿಯಿಂದ ಪ್ರಾರಂಭವಾಗುತ್ತೆ.
* ಅಮೃತ್ ಫ್ಯೂಷನ್: ಇದು ಭಾರತದ ಪ್ರಮುಖ ವಿಸ್ಕಿಗಳಲ್ಲಿ ಒಂದಾಗಿದೆ. ವಿದೇಶಿ ಹಾಗೂ ಭಾರತದ ಪ್ರಮುಖ ವಸ್ತುಗಳ ಮಿಶ್ರಣದೊಂದಿಗೆ ಈ ವಿಸ್ಕಿಯನ್ನು ತಯಾರಿಸಲಾಗುತ್ತದೆ. ಡಾರ್ಕ್ ಚಾಕೊಲೇಟ್, ಒಣಗಿದ ಹಣ್ಣುಗಳು ಹಾಗೂ ಮಸಾಲೆಗಳನ್ನು ಸೇರಿಸುವ ಮೂಲಕ ಈ ವಿಸ್ಕಿಯನ್ನು ತಯಾರಿಸಲಾಗುತ್ತದೆ. ಇದರ ಬೆಲೆ 4,500 ರೂಪಾಯಿಗಳಿಂದ ಶುರುವಾಗುತ್ತದೆ.












Click it and Unblock the Notifications