• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶ ಕೇಂದ್ರದ ಹೊರಗೆ ಮೊದಲ ನಡಿಗೆ ಮಾಡಿದ್ದ ಚೀನಾ ಗಗನಯಾತ್ರಿಗಳು ಭೂಮಿಗೆ ವಾಪಾಸ್‌

|
Google Oneindia Kannada News

ಬೇಜಿಂಗ್‌, ಸೆಪ್ಟೆಂಬರ್‌ 17: ಹೊಸ ಕಕ್ಷೀಯ ಕೇಂದ್ರದ ಹೊರಗೆ ಮೊದಲ ಬಾರಿಗೆ ನಡೆದಾಡುವ ಮೂಲಕ ಸುದ್ದಿಯಾಗಿದ್ದ ಚೀನಾದ ಮೂವರು ಗಗನಯಾತ್ರಿಗಳು ಶುಕ್ರವಾರ ಭೂಮಿಗೆ ಹಿಂದಿರುಗಿ ಬಂದಿದ್ದಾರೆ. ಇದು ಸುಮಾರು ಮೂರು ತಿಂಗಳುಗಳು ಚೀನಾದ ಮಿಷನ್‌ ಆಗಿದ್ದು, ಹೊಸ ಕಕ್ಷೀಯ ಕೇಂದ್ರದ ಹೊರಗೆ ನಡೆದಾಡುವ ಮೂಲಕ ಈ ಗಗನ ಯಾತ್ರಿಗಳು ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ. ಹಾಗೆಯೇ ಇದು ಚೀನಾದ ಅತೀ ಹೆಚ್ಚಿನ ಕಾಲದ ಯೋಜನೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಚೀನಾದ ಇಬ್ಬರು ಗಗನಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗೆ ಮೊದಲ ಬಾರಿಗೆ ನಡೆದಾಡಿದ್ದು, 15 ಮೀಟರ್ (50 ಅಡಿ) ಉದ್ದದ ರೊಬೋಟಿಕ್ ಆರ್ಮ್ ಅನ್ನು ಸರಿಪಡಿಸುವ ಕಾರ್ಯ ನಡೆಸಿದ್ದರು. ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೋ ಈ ಇಬ್ಬರು ಗಗನ ಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗೆ ಇದ್ದರೆ ತಂಡದ ಮತ್ತೋರ್ವ ಸದಸ್ಯ ಕಮಾಂಡರ್ ನೀ ಹೈಶೆಂಗ್ ಕೇಂದ್ರದ ಒಳಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಈ ಮೂಲಕ ಈ ಮೂವರು ಗಗನ ಯಾತ್ರಿಗಳು ದಾಖಲೆ ಸೃಷ್ಟಿ ಮಾಡಿದ್ದರು.

ಚೀನಾ ಗಗನಯಾತ್ರಿಗಳಿಂದ ಬಾಹ್ಯಾಕಾಶ ಕೇಂದ್ರದ ಹೊರಗೆ ಮೊದಲ ನಡಿಗೆಚೀನಾ ಗಗನಯಾತ್ರಿಗಳಿಂದ ಬಾಹ್ಯಾಕಾಶ ಕೇಂದ್ರದ ಹೊರಗೆ ಮೊದಲ ನಡಿಗೆ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಚೀನಾದ ಬಾಹ್ಯಾಕಾಶ ಸಂಸ್ಥೆ (ಸಿಎಮ್‌ಎಸ್‌ಎ), "ಉತ್ತರ ಚೀನಾದ ಒಳ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಡಾಂಗ್‌ಫೆಂಗ್‌ ಲ್ಯಾಂಡಿಂಗ್‌ ಸೈಟ್‌ನಲ್ಲಿ ಗಗನಯಾತ್ರಿಗಳಾದ ನೀ ಹೈಶೆಂಗ್‌, ಲಿಯು ಬೊಮಿಂಗ್‌ ಮತ್ತು ಟ್ಯಾಂಗ್ ಹಾಂಗ್ಬೋ ಹೊತ್ತಿರುವ ಶೆಂಗೌ-12 ಮಾನವಸಹಿತ ಗಗನ ನೌಕೆ ವಾಪಾಸ್‌ ಬಂದಿದೆ," ಎಂದು ತಿಳಿಸಿದೆ.

ಶೆಂಗೌ-12 ಸ್ಥಳೀಯ ಸಮಯ ಮಧ್ಯಾಹ್ನ ಒಂದು ಗಂಟೆಗೆ ಬೇರ್ಪಡಿಸಲಾಗಿದೆ. ಅದರ ಪ್ರೊಪೆಲೆಂಟ್‌ ಭೂಮಿಗೆ ಬಂದ ಬಳಿಕ ಸುಟ್ಟು ಹೋಗಿದೆ ಎಂದು ವರದಿಯಾಗಿದೆ. ಇನ್ನು ಬಗ್ಗೆ ವರದಿ ಮಾಡಿರುವ ಗ್ಲೋಬಲ್‌ ಟೈಮ್ಸ್‌, "ಎಲ್ಲಾ ಪ್ರಕ್ರಿಯೆಗಳನ್ನು ಬಹಳ ಸುಲಭ, ಸರಳವಾಗಿ ನಡೆದಿದೆ. ಈ ಪ್ರಕ್ರಿಯೆ ಎಷ್ಟು ಸುಲಲಿತವಾಗಿ ನಡೆದಿದೆ ಎಂದು ಹೇಳಿದರೆ, ಗಗನ ಯಾತ್ರಿಗಳಲ್ಲಿ ಒಬ್ಬರಾದ ಟ್ಯಾಂಗ್ ಹಾಂಗ್ಬೋ ಭೂಮಿಗೆ ವಾಪಾಸ್‌ ಬರುವ ಸಂದರ್ಭದಲ್ಲಿ ಪೆನ್ನಿನಲ್ಲಿ ಆಟವಾಡುತ್ತಿದ್ದರು," ಎಂದು ವರದಿ ಮಾಡಿದೆ.

"ರಿಯಲ್‌ ಗೋಲ್ಡ್‌ ಫಿಯರ್‍ಸ್‌ ನೋ ಫಯರ್‌" ಎಂದು ನೀ ಹೈಶೆಂಗ್‌ ತನ್ನೊಂದಿಗೆ ಗಗನ ಯಾತ್ರೆಗೆ ಬಂದ ಇತರರು ಇಬ್ಬರ ಜೊತೆ ನಿಂತು ಹಾಸ್ಯ ಮಾಡಿದ್ದಾರೆ. "ರಿಯಲ್‌ ಗೋಲ್ಡ್‌ ಫಿಯರ್‍ಸ್‌ ನೋ ಫಯರ್‌" ಎಂಬ ನಾಣ್ನುಡಿಯು ಏಕತೆಯಲ್ಲಿ ಇರುವ ವ್ಯಕ್ತಿಯು ತೀವ್ರ ಪರೀಕ್ಷೆಗಳನ್ನು ಎದುರಿಸಬಹುದು ಎಂಬ ಅರ್ಥವನ್ನು ಹೊಂದಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನೌಕೆಯಲ್ಲಿ ತೇಲುತ್ತಿರುವ ಫಿಜ್ಜಾ ಸವಿದು ಸಂಭ್ರಮಿಸಿದ ಗಗನಯಾತ್ರಿಗಳು!ಅಂತರಾಷ್ಟ್ರೀಯ ಬಾಹ್ಯಾಕಾಶ ನೌಕೆಯಲ್ಲಿ ತೇಲುತ್ತಿರುವ ಫಿಜ್ಜಾ ಸವಿದು ಸಂಭ್ರಮಿಸಿದ ಗಗನಯಾತ್ರಿಗಳು!

ಜೂನ್‌ನಲ್ಲಿ ಚೀನಾವು ಈ ಮಾನವ ಸಹಿತ ಗಗನ ನೌಕೆ ಶೆಂಗೌ-12 ಅನ್ನು ಉಡಾವಣೆ ಮಾಡಿದೆ. ಈ ಗಗನ ನೌಕೆಯಲ್ಲಿ ಮೂವರು ಗಗನಯಾತ್ರಿಗಳಾದ ನೀ ಹೈಶೆಂಗ್‌, ಲಿಯು ಬೊಮಿಂಗ್‌ ಮತ್ತು ಟ್ಯಾಂಗ್ ಹಾಂಗ್ಬೋ ಇದ್ದರು. ಇದು ಚೀನಾದ ಏಳನೇ ಮಿಷನ್‌ ಆಗಿದೆ. 2016 ರಲ್ಲಿ ದೇಶದ ಕೊನೆಯ ಮಾನವಸಹಿತ ಕಾರ್ಯಾಚರಣೆಯ ನಂತರ ಸುಮಾರು ಐದು ವರ್ಷಗಳಲ್ಲಿ ಇದು ಮೊದಲ ಮಾನವಸಹಿತ ಮಿಷನ್‌ ಆಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಆಡಳಿತರೂಢ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ 100 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ನಡುವೆ ಈ ಮಿಷನ್‌ ಕೈಗೊಳ್ಳಲಾಗಿದೆ. ನಿಲ್ದಾಣದ ಮೊದಲ ಮಾದರಿ ಟಿಯಾನೆ ಅನ್ನು ಏಪ್ರಿಲ್ 29 ರಂದು ಪ್ರಾರಂಭಿಸಲಾಯಿತು. ತದನಂತರ ಆಹಾರ ಮತ್ತು ಇಂಧನವನ್ನು ಹೊತ್ತ ಸ್ವಯಂಚಾಲಿಯ ಅಂತರಿಕ್ಷ ನೌಕೆಯನ್ನು ಕಳುಹಿಸಲಾಗಿತ್ತು. ಲಿಯು, ನಿ ಮತ್ತು ಟ್ಯಾಂಗ್ ಎಂಬ ಮೂವರು ಗಗನಯಾತ್ರಿಗಳು ಜೂನ್‌ 17ರಂದು ಬಾಹ್ಯಾಕಾಶ ಕೇಂದ್ರವನ್ನು ಆಗಮಿಸಿದರು.

ರಾಷ್ಟ್ರ ಮಾಧ್ಯಮದ ಪ್ರಕಾರ, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೋ ಕಕ್ಷೀಯ ಕೇಂದ್ರದ ಉಳಿದ ಭಾಗವನ್ನು ಜೋಡಿಸಲು ಬಳಸಲಾಗುವ ರೋಬಾಟ್ ಸ್ಥಾಪನೆಯ ಕಾರ್ಯ ಪೂರ್ಣಗೊಳಿಸುವ ಕಾರ್ಯ ಮಾಡಿದ್ದಾರೆ. ಅಗತ್ಯವಿದ್ದಲ್ಲಿ ಆರು ಗಂಟೆಗಳ ಕಾಲ ಇಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಅವರ ಬಾಹ್ಯಾಕಾಶ ಸೂಟ್‌ಗಳನ್ನು ವಿನ್ಯಾಸಗೊಳಿಸಲಾಗಿತ್ತು ಎಂದು ವರದಿ ಮಾಡಿದೆ. ಚೀನಾ ಮುಂದಿನ ವರ್ಷದ ಅಂತ್ಯದ ವೇಳೆಗೆ 11 ಅಂತರಿಕ್ಷ ನೌಕೆ ಉಡಾವಣೆ ಮಾಡುವ ಉದ್ದೇಶ ಹೊಂದಿದೆ.

(ಒನ್‌ ಇಂಡಿಯಾ ಸುದ್ದಿ)

English summary
Three Chinese astronauts, the first to be sent to orbit for space station-construction, returned to Earth after 90 days in space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X