Fact Check: ಕೇಂದ್ರ ಸರ್ಕಾರವು 4 ಹಂತದಲ್ಲಿ ಕೋವಿಡ್ ಪರಿಹಾರ ನಿಧಿ ನೀಡುತ್ತಿದೆಯೇ?

ನವದೆಹಲಿ, ಜೂನ್ 04: ಕೇಂದ್ರ ಸರ್ಕಾರವು 4ನೇ ಹಂತದ ಕೋವಿಡ್ 19 ಪರಿಹಾರ ನಿಧಿಯನ್ನು ಒದಗಿಸುತ್ತಿದೆ ಎಂದು ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪಿಐಬಿ ಇಂಡಿಯಾದಲ್ಲಿ ಇದಕ್ಕೆ ಸ್ಪಷ್ಟನೆ ನೀಡಲಾಗಿದ್ದು, ಅಂತಹ ಫಾರ್ವರ್ಡ್ ಮಾಡಲಾಗಿರುವ ಸಂದೇಶವನ್ನು ನಂಬಬೇಡಿ ಇಂತಹ ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಎಂದೂ ಬಹಿರಂಗಪಡಿಸಬೇಡಿ ಎಂದು ಹೇಳಲಾಗಿದೆ.

ಸರ್ಕಾರ ನೀಡಲಿರುವ ಕೋವಿಡ್ ರಿಲೀಫ್‌ ಫಂಡ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ, ಈ ಅವಕಾಶವನ್ನು ಎಂದಿಗೂ ಮಿಸ್‌ಮಾಡಿಕೊಳ್ಳಬೇಡಿ ಎಂದು ಹೇಳುವ ಸಂದೇಶ ಒಂದು ಹರಿದಾಡುತ್ತಿದೆ ಅದರಲ್ಲಿ ಕೋವಿಡ್ ರಿಲೀಫ್ ಫಂಡ್ ಎನ್ನುವ ಲಿಂಕನ್ನು ಕೂಡ ನೀಡಲಾಗಿದೆ.

 WhatsApp Msg Claiming That The Government Is Providing Phase 4 Covid-19 Relief Fund Is Fake

ಭಾರತದಲ್ಲಿ ದೈನಂದಿನ ಕೊರೊನಾ ವೈರಸ್ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,32,364 ಕೇಸ್ ದಾಖಲಾಗಿವೆ. ಅಲ್ಲದೆ, 2,713 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,85,74,350ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 3,40,702ಕ್ಕೆ ತಲುಪಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 16,35,993ಕ್ಕೆ ಏರಿಕೆಯಾಗಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 2,07,071 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,65,97,655ಕ್ಕೆ ತಲುಪಿದೆ.

ಇನ್ನು ಭಾರತದಲ್ಲಿ ಒಂದೇ 20,75,428 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, 35,74,33,846 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

Fact Check

ಕ್ಲೇಮು

ಕೇಂದ್ರ ಸರ್ಕಾರವು 4ನೇ ಹಂತದಲ್ಲಿ ಕೋವಿಡ್ ಪರಿಹಾರ ನಿಧಿ ನೀಡುತ್ತಿದೆ

ಪರಿಸಮಾಪ್ತಿ

ಕೇಂದ್ರ ಸರ್ಕಾರ ಯಾವುದೇ ಪರಿಹಾರ ನಿಧಿ ನೀಡುತ್ತಿಲ್ಲ

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+