Fact Check: ವೈರಲ್ ಆಗ್ತಿದೆ ರಶ್ಮಿಕಾ ಮಂದಣ್ಣ ಮದುವೆ ಫೋಟೋ, ನಿಜವೇನು? ಇಲ್ಲಿದೆ ಉತ್ತರ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವಕೊಂಡ ಅವರ ಮದುವೆ ಫೋಟೋಗಳು ವೈರಲ್ ಆಗುತ್ತಿವೆ. ಇತ್ತೀಚೆಗೆ ಅವರು ಹೈದರಾಬಾದ್‌ನಲ್ಲಿ ವಿವಾಹ ಆಗಿದ್ದರು ಎನ್ನುವುದಕ್ಕೆ ಅವರು ಧರಿಸಿದ್ದ ಉಂಗುರುದ ಫೋಟೋಗಳು ಹರಿದಾಡಿದ್ದವು. ಅದರ ಬೆನ್ನಲ್ಲೆ ಈ ಜೋಡಿ ಜನವರಿ 26ರಂದು ತಾರಾ ಸಮಾಗಮದ ಸಾಕ್ಷಿಯಾಗಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ ಎನ್ನಲಾಗಿದ್ದು. ಅದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವ ವದಂತಿ ವರ್ಷಗಳಿಂದ ಕೇಳಿ ಬರುತ್ತಿವೆ. ಇದೇ ಜೋಡಿ ಮುಂದಿನ ಫೆಬ್ರವರಿ 14ರ ಪ್ರೇಮಿಗಳ ದಿನದಂದು ವಿವಾಹವಾಗಲಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಬಗ್ಗೆ ಎಲ್ಲಿಯೂ ಅವರ ಮುಕ್ತವಾಗಿ ಮಾತನಾಡಿಲ್ಲ. ಮದುವೆ ದಿನಾಂಕ ತಿಳಿಸಿಲ್ಲ. ಪರೋಕ್ಷವಾಗಿ ಸಂದರ್ಶನ ವೇಳೆ ಅವರು ಒಪ್ಪಿಕೊಂಡಿದ್ದಾರೆ. ಇದೆಲ್ಲ ಬೆಳವಣಿಗೆ ಮಧ್ಯ ವಿಜಯ್ ಹಾಗೂ ರಶ್ಮಿಕಾ ವಧು-ವರರ ಉಡುಪಿನಲ್ಲಿ ಹಸೆಮಣೆ ಏರಿರುವ ಫೊಟೋಗಳು ಹರಿದಾಡುತ್ತಿವೆ. ಇದು ಈ ಜೋಡಿ ಮದುವೆಗೆ ಕಾಯುತ್ತಿರುವ ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ.

ಮದುವೆ ಫೋಟೋದಲ್ಲಿ ಟಾಲಿವುಡ್ ಸೆಲೆಬ್ರೆಟಿಗಳು
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಜಯ್-ರಶ್ಮಿಕಾ ಮದುವೆ ಸಮಾರಂಭದ ಫೋಟೋದಲ್ಲಿ ನಟರಾದ ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್, ಕರಣ್ ಜೋಹರ್, ನಟಿಯರಾದ ಮೃಣಾಲ್ ಠಾಕೂರ್, ಶ್ರೀಲೀಲಾ, ಸಮಂತಾ ಹಾಗೂ ಇತರ ಸೆಲೆಬ್ರೆಟಿಗಳು ಇದ್ದಾರೆ. ಅವರು ನವ ಜೋಡಿಗೆ ಆಶೀರ್ವದಿಸಲು ಆಗಮಿಸಿದ್ದಾರೆ ಎಂದು ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ ತಿಳಿಸಲಾಗಿದೆ. ಈ ವಿವಾಹವು ಜನವರಿ 26 ರಂದು ಸೋಮವಾರ ಹೈದರಾಬಾದ್‌ನಲ್ಲಿ ನಡೆದಿದೆ ಅಂತಲೂ ತಿಳಿಸಲಾಗಿದೆ. ನವ ಜೋಡಿಯು ಅತ್ಯಾಪ್ತರ ಸಮ್ಮುಖದಲ್ಲಿ ಹೊಸ ಜೀವನ ಆರಂಭಿಸಿದ್ದಾರೆ ಎಂದು ಫೋಟೋಗಳು ಬಿಂಬಿಸುತ್ತಿವೆ.
ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ಸೆಲೆಬ್ರಿಟಿಗಳ ವಿವಾಹ ಪೈಕಿ ಈ ಮದುವೆ ಪ್ರಮುಖವಾದದ್ದು. ಇದಕ್ಕೆ ನಟ, ನಟಿಯರು ಸಾಕ್ಷಿಯಾಗಿದ್ದಾರೆ. ಆದರೆ ಈ ಮದುವೆ ಸಮಾರಂಭ ಬಗ್ಗೆ ಯಾವುದೇ ಸೆಲೆಬ್ರೆಟಿಗಳು ಸಹ ತಮ್ಮ ಸೋಷಿಯಲ್ ಮೀಡಿಯಾಗಳ ಖಾತೆಗಳಲ್ಲಿ ಹಂಚಿಕೊಂಡು ಶುಭಾಷಯ ಕೋರಿಲ್ಲ. ಈ ಬಗ್ಗೆ ಯಾರು ದೃಢಪಡಿಸಿಲ್ಲ. ಈ ಫೋಟೋಗಳ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿವೆ.
ರಶ್ಮಿಕಾ-ವಿಜಯ್ ಮದುವೆ ನಿಜವೋ ಅಥವಾ ನಕಲಿಯೋ?
ಸದರಿ ಫೋಟೋ ನಕಲಿಯಾಗಿದೆ. ಈ ಇಬ್ಬರು ಟಾಲಿವುಡ್ ಸೆಲೆಬ್ರೆಟಿಗಳ ತಮ್ಮ ಮದುವೆ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಫೋಟೋ ಹಂಚಿಕೊಂಡಿಲ್ಲ. ಚಿತ್ರರಂಗದ ಅವರ ಇತರ ಸ್ನೇಹಿತರು ಈ ಬಗ್ಗೆ ಸ್ಪಷ್ಟಪಡಿಸಿಲ್ಲ, ಎಲ್ಲಿಯೂ ಖಚಿತಪಡಿಸಿಲ್ಲ. ಬೇರೆಲ್ಲಿಯೂ ಈ ಮದುವೆ ಪೋಸ್ಟ್ ಅಧಿಕೃತ ಪೋಸ್ಟ್ ಹಂಚಿಕೊಳ್ಳಲಾಗಿದೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಆಗಿಲ್ಲ. ಈ ಫೋಟೋವು ಆರ್ಟಿಫಿಸಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನದಿಂದ ಮಾಡಲ್ಪಟ್ಟಿದೆ ಎಂದು ಗೊತ್ತಾಗಿದೆ. ಇದು ಕೇವಲ ಮನರಂಜನಾ ಉದ್ದೇಶಕ್ಕೆ, ಈ ಜೋಡಿ ಮದುವೆ ಇಷ್ಟಪಡುವ ಅಭಿಮಾನಿಗಳು ಮಾಡಿದ್ದಾರೆ. ಇದರಿಂದ ಆ ಇಬ್ಬರು ಸೆಲೆಬ್ರೆಟಿಗಳ ಗೌರವಕ್ಕೆ ಧಕ್ಕೆ ತರುವ ಉದ್ದೇಶ ಇಲ್ಲ ಎಂಬುದು ಗೊತ್ತಾಗಿದೆ.
ಸತ್ಯ ಪರಿಶೀಲನೆ
ಹಕ್ಕು
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಫೋಟೋ.
ತೀರ್ಮಾನ
ಈ ವೈರಲ್ ಫೋಟೋ ಎಐನಿಂದ ರಚಿಸಲಾದ ಫೋಟೋ ಆಗಿದೆ.
ರೇಟಿಂಗ್
ನಕಲಿ
ವಾಸ್ತವ ಪರಿಶೀಲನೆಗಾಗಿ ನಿಮ್ಮ ವಿನಂತಿಯನ್ನು ಸಲ್ಲಿಸಿ. [email protected] ನಲ್ಲಿ ನಮಗೆ ಮೇಲ್ ಮಾಡಿ












Click it and Unblock the Notifications