Fact Check: ಶ್ರೀಲಂಕಾದಲ್ಲಿ ಬಿಜೆಪಿ ತನ್ನ ನೂತನ ಘಟಕ ಆರಂಭಿಸಿದೆಯೇ?

ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಬಿಜೆಪಿ ತನ್ನ ಘಟಕ ಆರಂಭಿಸಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಾಗೆಯೇ ಮುತ್ತುಸ್ವಾಮಿ ಎಂಬುವವರನ್ನು ಪಕ್ಷದ ಶ್ರೀಲಂಕಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಾಸ್ತವದಲ್ಲಿ ಶ್ರೀಲಂಕಾ ಬಿಜೆಪಿ ಆರಂಭವಾಗಿದ್ದು ಕೂಡಾ ಸತ್ಯ ಹಾಗಿದ್ದರೆ ನರೇಂದ್ರ ಮೋದಿ, ಅಮಿತ್ ಶಾ ಜೋಡಿಯು ಶ್ರೀಲಂಕಾದಲ್ಲಿ ತನ್ನ ಕಾರ್ಯ ಆರಂಭಿಸಿತೇ ಎನ್ನುವ ಪ್ರಶ್ನೆಗಳು ಕಾಡುತ್ತಿರಬಹುದು.

ಶ್ರೀಲಂಕಾ ಬಿಜೆಪಿ ಆರಂಭವಾಗಿದ್ದೇನೋ ನಿಜ ಆದರೆ, ಆ ಬಿಜೆಪಿಯು ಭಾರತದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ.ಶ್ರೀಲಂಕಾದಲ್ಲಿನ ತಮಿಳರ ಹಕ್ಕು ರಕ್ಷಣೆ ಹಾಗೂ ಅಭಿವೃದ್ಧಿಗಾಗಿ IBJK ಅಥವಾ ಶ್ರೀಲಂಕಾ ಬಿಜೆಪಿ ಪಕ್ಷ ಆರಂಭಿಸಲಾಗಿದೆ.

Fact Check: Did The BJP Really Start A Sri Lanka Unit? Find Out Here

ಶ್ರೀಲಂಕಾ ಸರ್ಕಾರದ ನೆರವು ಪಡೆದು ತಮಿಳರ ಶಿಕ್ಷಣ ಹಾಗೂ ಕ್ರೀಡಾಕ್ಷೇತ್ರದಲ್ಲಿನ ಅಭಿವೃದ್ಧಿಯೇ ಪಕ್ಷದ ಪ್ರಮುಖ ಗುರಿ ಎಂದು ಅಧ್ಯಕ್ಷ ಮುತ್ತುಸ್ವಾಮಿ ತಿಳಿಸಿದ್ದಾರೆ. ಈ ಮುತ್ತುಸ್ವಾಮಿ ಭಾರತೀಯ ಮೂಲದ ತಮಿಳು ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಅವರೇ ಹೇಳುವ ಪ್ರಕಾರ ಭಾರತದಲ್ಲಿರುವ ಬಿಜೆಪಿಗೂ ಶ್ರೀಲಂಕಾದಲ್ಲಿ ಆರಂಭವಾಗಿರುವ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಶ್ರೀಲಂಕಾಗೆ ಸೀಮಿತವಾಗಿರುವ ಪ್ರತ್ಯೇಕ ಪಕ್ಷವಾಗಿದೆ, ಈ ಬಗ್ಗೆ ಯಾರೂ ಅಪ ಪ್ರಚಾರ ಮಾಡಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

Fact Check

ಕ್ಲೇಮು

ಶ್ರೀಲಂಕಾದಲ್ಲಿ ಬಿಜೆಪಿ ತನ್ನ ಹೊಸ ಘಟಕವನ್ನು ಆರೋಂಬಿಸಿದೆ

ಪರಿಸಮಾಪ್ತಿ

ಶ್ರೀಲಂಕಾದಲ್ಲಿ ಬಿಜೆಪಿ ಪಕ್ಷ ಹುಟ್ಟಿಕೊಂಡಿರುವುದು ನಿಜ ಆದರೆ ಭಾರತದಲ್ಲಿರುವ ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+