Fact Check: ಕೊರೊನಾ ಲಸಿಕೆ ಮನುಷ್ಯನ ಡಿಎನ್‌ಎ ಬದಲಾಯಿಸುತ್ತದೆಯೇ?
ನವದೆಹಲಿ, ನವೆಂಬರ್ 25: ಕೊರೊನಾ ಲಸಿಕೆಯು ಮನುಷ್ಯದ ಡಿಎನ್‌ಎಯನ್ನು ಬದಲಾಯಿಸುತ್ತದೆ ಎನ್ನುವ ಸಂದೇಶದ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ.
ಲಸಿಕೆಯು ದೇಹದಲ್ಲಿ mRNA ಅಣುವನ್ನು ಪರಿಚಯಿಸುತ್ತದೆ ಅದು ಮನುಷ್ಯನ ಡಿಎನ್‌ಎಯನ್ನು ಬದಲಾಯಿಸುತ್ತದೆ ಎಂದು ಹೇಳಲಾಗಿದೆ.
ಈ ಹಿಂದೆ ದಿ ಓಪ್ರಾ ಶೋನಲ್ಲಿ ಆರೋಗ್ಯ ತಜ್ಞರಾಗಿ ಕಾಣಿಸಿಕೊಂಡಿದ್ದ ಪ್ರಸೂತಿ, ಸ್ತ್ರೀರೋಗ ತಜ್ಞ ಡಾ. ನಾರ್ಥಪ್ ಅವರು ಮುಂಬರುವ ಕೊವಿಡ್ ಲಸಿಕೆ ಮಾನವನ ಡಿಎನ್‌ಎಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದರು.

ಹಾಗೂ ನಮ್ಮ ಚಲನಚಲನಗಳನ್ನು ನಿಯಂತ್ರಿಸಲು ಸಜ್ಜಾಗಿದೆ ಎಂದು ಕೂಡ ಅವರು ಮಾಹಿತಿ ನೀಡಿದ್ದರು.37 ನಿಮಿಷಗಳ ಸುದೀರ್ಘ ಸಂದರ್ಶನದ 4 ನಿಮಿಷಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ನಾರ್ಥಪ್ ತಾವು ಹೇಳುವುದೇ ಸತ್ಯ ಎಂಬುದಕ್ಕೆ ಯಾವುದೇ ಪುರಾವೆಯನ್ನು ನೀಡಿಲ್ಲ.
ಎಂಆರ್‌ಎನ್‌ಎ ಲಸಿಕೆಗಳು ನಿಮ್ಮ ದೇಹಕ್ಕೆ ಆರ್‌ಎನ್‌ಎ ಅಣುವನ್ನು ಪರಿಚಯಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ.
ಇದು ಸಾರ್ಸ್ ಕೋವ್ 2 ಅನ್ನು ರೂಪಿಸುವ ವೈರಲ್ ಪ್ರೋಟಿನ್‌ಗಳಿಗೆ ಹೋಲುವ ಪ್ರೋಟಿನ್ ಅನ್ನು ಉತ್ಪಾದಿಸುತ್ತದೆ. ರೋಗ ನಿರೋಧಕ ಕೋಶಗಳು ನಂತರ ಈ ವೈರಲ್ ಪ್ರೋಟಿನ್ ಅನ್ನು ಗುರುತಿಸುತ್ತವೆ.
ಮುಖ್ಯವಾಗಿ ವೈರಲ್ ಪ್ರೋಟಿನ್‌ಗಳನ್ನು ಗುರುತಿಸುವ ಪ್ರತಿಕಾಯಗಳ(Antibody)ನ್ನು ಉತ್ಪಾದಿಸುವ ಮೂಲಕ ಅದರ ವಿರುದ್ಧ ಪ್ರತಿರಕ್ಷಣಾ ಪ್ರಕ್ರಿಯೆಯನ್ನು ಉಂಟು ಮಾಡುತ್ತದೆ.
ಕೊರೊನಾ ಲಸಿಕೆಗಳು ಮನುಷ್ಯನ ದೇಹದಲ್ಲಿರುವ ಡಿಎನ್‌ಎಯನ್ನು ಬದಲಾಯಿಸುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Fact Check
ಕ್ಲೇಮು
ಕೊರೊನಾ ಲಸಿಕೆ ಮನುಷ್ಯನ ಡಿಎನ್‌ಎಯನ್ನು ಬದಲಾಯಿಸುತ್ತದೆ
ಪರಿಸಮಾಪ್ತಿ
ಕೊರೊನಾ ಲಸಿಕೆಗಳು ಮನುಷ್ಯನ ಡಿಎನ್‌ಎಯನ್ನು ಬದಲಾಯಿಸುವುದಿಲ್ಲ












Click it and Unblock the Notifications