Yuva Rajkumar Wife: ಕಳೆದ ಒಂದು ವರ್ಷದಲ್ಲಿ ನನ್ನ ಜೀವನದಲ್ಲಿ..: ಶ್ರೀದೇವಿ ಭೈರಪ್ಪ ಹೊಸ ಪೋಸ್ಟ್‌

ಕನ್ನಡ ಚಿತ್ರರಂಗ ನಟ ಯುವರಾಜ್ ಕುಮಾರ್ ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ಡಿವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿರುವುದು ಗೊತ್ತಿರುವ ವಿಚಾರ. ವಿದೇಶದಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಶ್ರೀದೇವಿ ಭೈರಪ್ಪ ಕಳೆದು ಒಂದು ವರ್ಷದಲ್ಲಿ ತಾವು ಕಂಡ ನೋವು ಹಾಗೂ ಗೊಂದಲದ ಬಗ್ಗೆ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ದೀಪಾವಳಿ ಹಬ್ಬದ ಸಮಯದಲ್ಲಿ ಕಪ್ಪು ಬಣ್ಣದ ಉಡುಗೆಯನ್ನು ಧರಿಸಿ ಕನ್ನಡ ಹಾಡಿನೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಬಟ್ಟೆ ಹಾಗೂ ಕನ್ನಡ ಹಾಡು ಎಂದು ಶ್ರೀದೇವಿ ಭೈರಪ್ಪ ಸ್ಟೋರಿ ಹಾಕಿದ್ದಾರೆ. ಜೊತೆಗೆ ಅದೇ ಡ್ರೆಸ್‌ನ ವಿಡಿಯೋ ಜೊತೆಗೆ ಸುಧೀರ್ಘ ಬರಹವೊಂದನ್ನು ಬರೆದಿದ್ದಾರೆ.

Yuva Rajkumar wife Sridevi Byrappa Shared Special Post On Deepavali

ಕಳೆದ ವರ್ಷ ನನ್ನ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ತುಂಬಾ ಹೋರಾಡಿದ್ದೇನೆ. ಎಷ್ಟೋ ಸಲ ಎಲ್ಲವೂ ಸಾಕು ಎನಿಸಿತ್ತು. ಆದರೆ ನನ್ನ ಕುಟುಂಬ, ಸ್ನೇಹಿತರು, ಉತ್ತಮ ಸ್ನೇಹಿತರು, ಶಿಕ್ಷಕರು, ಮಾರ್ಗದರ್ಶಕರು ಮತ್ತು ಲಂಡನ್‌ನ ನನ್ನ ಹುಡುಗಿ ಜೊತೆಗಿದ್ದರು. ಅವರು ಮತ್ತೆ ನಾನು ಮಾತನಾಡುವಂತೆ ಮಾಡಿದರು, ನನಗೆ ಸರಿಯಾದ ಸಮಯಕ್ಕೆ ಮುಖ್ಯವಾದ ಸಲಹೆಯನ್ನು ನೀಡಿದರು. ನಾನು ಎಲ್ಲರಿಗೂ ಕೃತಜ್ಞಳಾಗಿರುತ್ತೇನೆ ಎಂದಿರುವ ಶ್ರೀದೇವಿ ಭೈರಪ್ಪ ತಾವು ಧರಿಸಿರುವ ಡೆಸ್ರ್‌ ಬಗ್ಗೆ ಕೂಡ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.

ಅಪ್ಪಟ ಅಪ್ಪು ಅಭಿಮಾನಿ ಶ್ರೀದೇವಿ ಭೈರಪ್ಪ

ದೇವಿ ಬೈರಪ್ಪ ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಕೈಮೇಲೆ ಅಪ್ಪು ಹೆಸರಿನ ಹಚ್ಚೆ ಹಾಕಿಸಿಕೊಂಡಿರುವ ಅವರು ಅಪ್ಪು ಪುಣ್ಯ ಸ್ಮರಣೆಯ ದಿನ ಕೂಡ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದರು. ಪುನೀತ್ ರಾಜ್‌ ಕುಮಾರ್ ಸದಾ ಖುಷಿ, ಸಂತೋಷ, ನಗುವನ್ನೇ ಎಲ್ಲರಿಗೂ ಹಂಚುತ್ತಿದ್ದರು. ಸಣ್ಣ ಅಥವಾ ದೊಡ್ಡ ವಿಚಾರವಾಗಲಿ ನಿಮ್ಮ ಮಾರ್ಗದರ್ಶನ ಸರಿಯಾಗಿರುತ್ತಿತ್ತು. ನಿಮ್ಮ ಮಾತುಗಳು ಸ್ಫೂರ್ತಿದಾಯಕವಾಗಿದ್ದವು.

Yuva Rajkumar wife Sridevi Byrappa Shared Special Post On Deepavali

ಹೊಸ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳನ್ನು ಕಲಿಯಬೇಕು ಎಂದು ಪುನೀತ್ ರಾಜ್‌ಕುಮಾರ್‌ ಸದಾ ಹೇಳುತ್ತಿದ್ದರು. ಅಪ್ಪು ಅವರ ಈ ಮಾತು ಪಾಲಿಸಿದ್ದಕ್ಕೆ ಈ ವರ್ಷ ನನ್ನ ನಾನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಹುಡುಗಿಯರು ಮತ್ತು ಮಹಿಳೆಯರು ಆರ್ಥಿಕವಾಗಿ ಸ್ವತಂತ್ರ್ಯವಾಗಿರಬೇಕು ಎಂದು ನೀವು ಯಾವಾಗಲು ಸಲಹೆ ನೀಡುತ್ತಿದ್ದಿರಿ. ಅದಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರ ಉದಾಹರಣೆ ಕೊಟ್ಟು ಆಕೆಯ ರೀತಿ ಇರಿ ಎಂದು ಹೇಳುತ್ತಿದ್ದೀರಿ. ಆಗ ನನಗೆ ಅರ್ಥವಾಗಿರಲಿಲ್ಲ ಆದರೆ ಈಗ ಅರ್ಥವಾಗಿದೆ. ಫ್ಯಾಮೀಲಿಯಲ್ಲಿ ನಿಮ್ಮಂತೆ ಯಾರಿರಲು ಸಾಧ್ಯವಿಲ್ಲ ಎಂದು ಪೋಸ್ಟ್‌ ಹಂಚಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+