Toxic: ಟಾಕ್ಸಿಕ್ ಸಿನಿಮಾ ರಿಲೀಸ್ ಪದೇ ಪದೇ ಮುಂದೂಡಲು ಅಸಲಿ ಕಾರಣ ಬಿಚ್ವಿಟ್ಟ ನಟ ಯಶ್

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಪಾತ್ರರಾಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಸ್ಯಾಂಡಲ್‌ವುಡ್‌ನ ಅತ್ಯಂತ ಭರವಸೆಯ ಹಾಗೂ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' (Toxic) ಸದ್ಯ ಚಿತ್ರಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆದರೆ, ಸಿನಿಮಾ ಬಿಡುಗಡೆಯ ದಿನಾಂಕ ಪದೇ ಪದೇ ಮುಂದೂಡಲ್ಪಡುತ್ತಿರುವುದು ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮತ್ತು ಬೇಸರವನ್ನು ಉಂಟುಮಾಡಿದೆ. ಈ ನಿರಂತರ ವಿಳಂಬವನ್ನು ಭಾರತೀಯ ಚಿತ್ರಪ್ರೇಮಿಗಳು ಹೇಗೆ ಸ್ವೀಕರಿಸುತ್ತಾರೆ? ಎಂಬ ಪ್ರಶ್ನೆಗೆ ನಟ ಯಶ್ ಇತ್ತೀಚಿನ ಅಂತರರಾಷ್ಟ್ರೀಯ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ.

ಭಾರತೀಯ ಪ್ರೇಕ್ಷಕರು ಬೇಸರ ಮಾಡಿಕೊಳ್ಳುವುದು ಸಹಜ

ಜಾಗತಿಕ ವಿತರಕರನ್ನು ತಲುಪುವ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರವನ್ನು ಏಕಕಾಲಕ್ಕೆ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ ಖ್ಯಾತ ಅಂತರರಾಷ್ಟ್ರೀಯ ನಿಯತಕಾಲಿಕೆ 'ವೆರೈಟಿ'ಗೆ (Variety) ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಯಶ್, ಭಾರತೀಯ ಪ್ರೇಕ್ಷಕರ ಸಿನಿಮಾ ನೋಡುವ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

Toxic

"ಸಿನಿಮಾ ವಿಳಂಬವಾಗುತ್ತಿರುವುದು ನನ್ನ ಅಭಿಮಾನಿಗಳಿಗೆ ಅಥವಾ ಭಾರತದ ಜನರಿಗೆ ಖಂಡಿತವಾಗಿಯೂ ಇಷ್ಟವಾಗುವುದಿಲ್ಲ. ಅವರು ನಿಜಕ್ಕೂ ಬೇಸರ ಮಾಡಿಕೊಳ್ಳಲಿದ್ದಾರೆ. ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಒಮ್ಮೆ ಸಿನಿಮಾದ ಮುಹೂರ್ತ ಮುಗಿದು ಶೂಟಿಂಗ್ ಆರಂಭವಾಯಿತೆಂದರೆ, ಪ್ರೇಕ್ಷಕರು ತಮ್ಮ ಮನಸ್ಸಿನಲ್ಲೇ ಸಿನಿಮಾ ಬಿಡುಗಡೆಗೆ ಒಂದು ಟೈಮ್‌ಲೈನ್ ನಿಗದಿಪಡಿಸಿಕೊಂಡು ಕಾಯುತ್ತಿರುತ್ತಾರೆ. ಆದರೆ ಜಾಗತಿಕ ಮಾರುಕಟ್ಟೆಯನ್ನು ತಲುಪಲು ನಾವು ತೆಗೆದುಕೊಳ್ಳುತ್ತಿರುವ ಈ ನಿರ್ಧಾರ ಅವರಿಗೆ ನಿರಾಸೆ ತರಬಹುದು" ಎಂದು ಯಶ್ ಹೇಳಿದ್ದಾರೆ.

ನಾನು ಸೋತೆ, ಚೆನ್ನೈ ಬಿಡುತ್ತಿದ್ದೇನೆ: ನಟ ರವಿ ಮೋಹನ್ ಸಂಸಾರ ಒಡೆದ ಆರೋಪಕ್ಕೆ ಬೇಸತ್ತು ಗಾಯಕಿ ಕೆನಿಶಾ ಪೋಸ್ಟ್‌
ನಾನು ಸೋತೆ, ಚೆನ್ನೈ ಬಿಡುತ್ತಿದ್ದೇನೆ: ನಟ ರವಿ ಮೋಹನ್ ಸಂಸಾರ ಒಡೆದ ಆರೋಪಕ್ಕೆ ಬೇಸತ್ತು ಗಾಯಕಿ ಕೆನಿಶಾ ಪೋಸ್ಟ್‌

ಭಾರತ & ಪಾಶ್ಚಿಮಾತ್ಯ ಸಿನಿಮಾ ಮಾರುಕಟ್ಟೆಯ ವ್ಯತ್ಯಾಸ

ಜಾಗತಿಕ ವಿತರಕರನ್ನು ಸೆಳೆಯಲು ಸಿನಿಮಾ ಬಿಡುಗಡೆಯನ್ನು ಮುಂದೂಡುತ್ತಿರುವ ತಂತ್ರದ ಹಿಂದೆ ಇರುವ ಕಾರಣವನ್ನು ಯಶ್ ಸ್ಪಷ್ಟಪಡಿಸಿದ್ದಾರೆ. ಹೊರದೇಶಗಳಲ್ಲಿ ಸಿನಿಮಾ ಪ್ರಕ್ರಿಯೆ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಅಲ್ಲಿ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಂಪೂರ್ಣವಾಗಿ ಮುಗಿದ ನಂತರವೇ ಸಿನಿಮಾದ ಮುಂದಿನ ವ್ಯವಹಾರಗಳು ಆರಂಭವಾಗುತ್ತವೆ. ವಿದೇಶಿ ಪ್ರೊಡ್ಯೂಸರ್ಸ್ ಅಥವಾ ವಿತರಕರು ಸಿನಿಮಾದಲ್ಲಿ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡುವುದರಿಂದ, ಅವರು ಮೊದಲು ಸಂಪೂರ್ಣ ಸಿನಿಮಾವನ್ನು ನೋಡಲು ಬಯಸುತ್ತಾರೆ ಎಂದು ವಿವರಿಸಿದ್ದಾರೆ.

ಭಾರತದಲ್ಲಿ ಸಿನಿಮಾ ಸೆಟ್‌ಗೆ ಹೋಗುತ್ತಿದ್ದಂತೆ ಅದರ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ಆರಂಭವಾಗಿಬಿಡುತ್ತದೆ. ನಾವು ಬಯಸದಿದ್ದರೂ ಮಾರ್ಕೆಟಿಂಗ್ ಮತ್ತು ಹೈಪ್ ಸೃಷ್ಟಿಯಾಗುತ್ತದೆ. ಚಿತ್ರೀಕರಣದ ಮೊದಲ ದಿನದಿಂದಲೇ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಅದರ ಬಗ್ಗೆ ಬರೆಯಲು ಪ್ರಾರಂಭಿಸುತ್ತಾರೆ. ಇದು ನಮಗೆ ದೊಡ್ಡ ಸವಾಲು ಎಂದಿದ್ದಾರೆ ಯಶ್. ನನಗೆ ನನ್ನ ಜನರ ಮೇಲೆ ಸಂಪೂರ್ಣ ನಂಬಿಕೆ ಇದೆ. ನಾವು ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾವನ್ನು ಪ್ರತಿನಿಧಿಸಲು ಮಾಡುತ್ತಿರುವ ಈ ಪ್ರಯತ್ನವನ್ನು ಅವರು ಖಂಡಿತವಾಗಿ ಅರ್ಥಮಾಡಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಟಾಕ್ಸಿಕ್' ಬಿಡುಗಡೆ ಪದೇ ಪದೇ ಮುಂದೂಡಿಕೆ

ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ 2023ರಲ್ಲಿ ಅಧಿಕೃತವಾಗಿ ಘೋಷಣೆಯಾಗಿ, 2024ರ ಅಕ್ಟೋಬರ್‌ನಲ್ಲಿ ಶೂಟಿಂಗ್ ಆರಂಭಿಸಿತ್ತು. ಅಂದಿನಿಂದ ಇಂದಿನವರೆಗೆ ಸಿನಿಮಾ ಹಲವು ಬಿಡುಗಡೆ ದಿನಾಂಕಗಳನ್ನು ಬದಲಾಯಿಸಿದೆ.

ಮೊದಲ ದಿನಾಂಕ ಏಪ್ರಿಲ್ 10. ಆರಂಭದಲ್ಲಿ ಈ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಚಿತ್ರೀಕರಣದ ವಿಳಂಬ ಹಾಗೂ ಅದ್ದೂರಿ ಮೇಕಿಂಗ್‌ನಿಂದಾಗಿ ಇದನ್ನು ಮುಂದೂಡಲಾಯಿತು. ನಂತರ ಜಾಗತಿಕ ಮಟ್ಟದಲ್ಲಿ ಉಂಟಾದ ಯುಎಸ್-ಇರಾನ್ ಸಂಘರ್ಷ ಮತ್ತು ಮಧ್ಯಪ್ರಾಚ್ಯ ದೇಶಗಳ ರಾಜಕೀಯ ಉದ್ವಿಗ್ನತೆಯಿಂದಾಗಿ ಚಿತ್ರದ ವಿತರಣೆಗೆ ತೊಂದರೆಯಾಗುವ ಭೀತಿಯಿಂದ ಇದನ್ನು ಮತ್ತೆ ಮುಂದೂಡಲಾಯಿತು.

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಪ್ರಸಿದ್ಧ 'ಸಿನಿಮಾಕಾನ್' (CinemaCon) ಪ್ರದರ್ಶನದಲ್ಲಿ 'ಟಾಕ್ಸಿಕ್' ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದ ವಿತರಕರಿಂದ ಅಭೂತಪೂರ್ವ ಮತ್ತು ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರಿಂದಾಗಿ ಜಾಗತಿಕ ವಿತರಕರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮತ್ತು ವಿಶ್ವದಾದ್ಯಂತ ಏಕಕಾಲಕ್ಕೆ ಸೂಕ್ತವಾದ ದಿನಾಂಕದಂದು ಬಿಡುಗಡೆ ಮಾಡಲು ಜೂನ್ 4ರ ಬಿಡುಗಡೆಯನ್ನೂ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಚಿತ್ರತಂಡ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಶೀಘ್ರದಲ್ಲೇ ವಿಶ್ವದಾದ್ಯಂತ ಅನ್ವಯವಾಗುವ ಒಂದು ಜಾಗತಿಕ ದಿನಾಂಕವನ್ನು ಘೋಷಿಸಲಿದ್ದೇವೆ ಎಂದು ತಿಳಿಸಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಬರೆದು ಚಿತ್ರೀಕರಿಸಲಾಗುತ್ತಿದೆ. ಇದರೊಂದಿಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಚಿತ್ರದಲ್ಲಿ ಯಶ್ ಜೊತೆಗೆ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ಸ್ಯಾಂಡಲ್‌ವುಡ್‌ ನಟಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+