ನಟ ವರುಣ್‌ ಮೇಲೆ ವರ್ಷ ಕಾವೇರಿ FIR ಹಾಕಿದ್ದೇಕೆ: ನಿಜವಾದ ಕಾರಣ ಇಲ್ಲಿದೆ..?

ಬೆಂಗಳೂರು, ಸೆಪ್ಟೆಂಬರ್‌ 13: ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ಮತ್ತು ಆತನ ಮಾಜಿ ಪ್ರೇಯಸಿ ವರ್ಷ ಕಾವೇರಿ ಸದ್ಯ ಸುದ್ದಿಯಲ್ಲಿದ್ದಾರೆ. ವರುಣ್ ಆರಾಧ್ಯ ವಿರುದ್ಧ ವರ್ಷ ಕಾವೇರಿ ಗಂಭೀರ ಆರೋಪ ಮಾಡಿದ್ದರು. ತಮ್ಮ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್​ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ದೂರು ನೀಡಿದ್ದು, ನಟನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ಈ ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ಸ್ವತಃ ವರ್ಷ ಕಾವೇರಿ ಸ್ಪಷ್ಟನೆ ನೀಡಿದ್ದಾರೆ. ನಟ ವರುಣ್ ಆರಾಧ್ಯ ವಿರುದ್ಧ ದೂರು ನೀಡಿದ್ದೇಕೆ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Why Varsha Kaveri Filed FIR Against Brindavana Serial Actor Varun Aradya

ಈ ಬಗ್ಗೆ ಸ್ಪೀಡ್‌ ಪ್ಲಸ್‌ ಕರ್ನಾಟಕ ಯೂಟ್ಯೂಬ್‌ ಚಾನೆಲ್‌ನೊಂದಿಗೆ ಮಾತನಾಡಿದ ವರ್ಷ, ಎಫ್‌ಐಆರ್‌ ಎನ್ನುವುದು ನನ್ನ ಭವಿಷ್ಯಕ್ಕೆ ಯಾವುದೇ ತೊಂದರೆ ಆಗಬಾರದು ಅಂತಾ ನಾನು ತೆಗೆದುಕೊಂಡಿರುವ ಮುನ್ನೆಚ್ಚರಿಕೆ. ನನಗೆ ಕಾನೂನು ಪ್ರಕಾರವೇ ಹೋಗಬೇಕಿತ್ತು. ಹೀಗಾಗಿ ದೂರು ಕೊಟ್ಟು ಎಫ್‌ಐಆರ್ ಮಾಡಿಸಿದೆ ಎಂದು ಹೇಳಿದ್ದಾರೆ.

ನಾವು ಪ್ರೀತಿಯಲ್ಲಿದ್ದಾಗ ಟ್ರಿಪ್‌ಗೆ ಹೋದಾಗ ಎಲ್ಲಾ ತೆಗೆದುಕೊಂಡಿರುವ ಫೋಟೋ ಅವರ ಮೊಬೈಲ್‌ನಲ್ಲಿ ಇತ್ತು. ಒಂದು ಸಲ ಸಂಬಂಧ ಬ್ರೇಕ್‌ ಆದ ಮೇಲೆ ಅವರ ಫೋನಿನಲ್ಲಿ ಹಾಗೂ ನನ್ನ ಫೋನಿನಲ್ಲಿ ನಮಗೆ ಸಂಬಂಧಪಟ್ಟಿದ್ದು ಏನೂ ಇರಬಾರದು. ಸೋಶಿಯಲ್‌ ಮೀಡಿಯಾದಲ್ಲಿ ಸಹ ಎನೂ ಇರಬಾರದು. ಈ ರೀತಿ ಇಬ್ಬರೂ ಒಪ್ಪಿ ಪ್ರತಿಯೊಂದು ಡಿಲೀಟ್‌ ಮಾಡಿದ್ದು, ಹೀಗಾಗಿ ನನ್ನ ಪ್ರೊಫೈಲ್‌ನಲ್ಲಿ ಏನೂ ಇಲ್ಲ. ಆದರೆ ಅವರ ಬಳಿ ಇದೆ.

Why Varsha Kaveri Filed FIR Against Brindavana Serial Actor Varun Aradya

ಕಾನೂನು ಪ್ರಕಾರ ಹೋಗುವ ಮುಂಚೆ ಅವರ ಗೆಳೆಯರ ಮೂಲಕ ವಿಡಿಯೋಗಳನ್ನು ಡಿಲೀಟ್‌ ಮಾಡುವಂತೆ ಹೇಳಿದ್ದೇನೆ. ಆದರೆ ಅವರು ನಾನು ಬ್ಯೂಸಿ ಇದ್ದೇನೆ. ಆ ವಿಡಿಯೋಗಳು ಎಲ್ಲಿದೆ ಗೊತ್ತಿಲ್ಲ ಅಂತಾ ಡಿಲೀಟ್‌ ಮಾಡಿಲ್ಲ. ಈ ರೀತಿ ಮೂರು ಬಾರಿ ಪ್ರಯತ್ನಿಸಿದ್ದೇನೆ. ಮುಂದೆ ನನ್ನ ಭವಿಷ್ಯಕ್ಕೆ ತೊಂದರೆ ಆಗ ಬಾರದು ಅಂತಾ ಅವರ ಬಳಿ ಕೇಳಿಕೊಂಡಿದ್ದೇನೆ. ಅವರು ಡಿಲೀಟ್‌ ಮಾಡಲ್ಲ ಎಂದು ಹೇಳಿದಕ್ಕೆ ನಾನು ಎಫ್‌ಐಆರ್‌ ಎನ್ನುವ ಕ್ರಮಕ್ಕೆ ಹೋದೆ ಎಂದು ಹೇಳಿದರು.

ಫ್ಯಾನ್‌ ಪೇಜ್‌ ಹಾಗೂ ಇತರರು ಅವರ ಪೇಜ್‌ನಿಂದ ವಿಡಿಯೋ ತೆಗೆದುಕೊಂಡು ಹಾಕುತ್ತಿದ್ದರು. ನಾನು ಕೇಳಿದಕ್ಕೆ ಅವರೇ ಹಾಕಿದ್ದಾರೆ ನಾವು ಯಾಕೆ ಹಾಕಬಾರದು ಅಂದರು. ಹಾಗಾಗಿ ಯಾರಿಗೂ ಹೇಳಲಾದೇ ನಾನು ಕಾನೂನು ಕ್ರಮಕ್ಕೆ ಹೋದೆ. ಕಾನೂನು ಪ್ರಕಾರ ನನಗೆ ಸಹಾಯ ಮಾಡಿ ಡಿಲೀಟ್‌ ಮಾಡಿಸಬಹುದು ಎಂದುಕೊಂಡಿದ್ದೆ. ಆದರೆ ಈಗ ಡಿಲೀಟ್‌ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದರು.

ನಾನು ಅಷ್ಟು ಮನವಿ ಮಾಡಿದರೂ ಡಿಲೀಟ್‌ ಮಾಡಿರಲಿಲ್ಲ ಹೀಗಾಗಿ ಕಾನೂನಿನ ಮೂಲಕ ಹೋದೆ. ಆದರೆ ಎಫ್‌ಐಆರ್‌ ಹಾಕಿರುವುದು ಮಾಧ್ಯಮಗಳಲ್ಲಿ ಬರುತ್ತದೆ ಅಂತಾ ನನಗೆ ಗೊತ್ತಿರಲಿಲ್ಲ. ಇದಲ್ಲ ಬರಲ್ಲಾ ಅಲ್ವಾ ಅಂತಾ ಮೊದಲು ಅಧಿಕಾರಿಗಳನ್ನು ಕೇಳಿದ್ದೆ. ಅವರು ಕೂಡ ಇಲ್ಲ ಅಂದಿದ್ದರು. ಆದರೆ ಈಗ ಅದು ಹೇಗೋ ವೈರಲ್‌ ಆಗಿದೆಯೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+