Dwarakish: ಪತ್ನಿ ಅಗಲಿದ ದಿನವೇ ನಿಧನರಾದ ನಟ ದ್ವಾರಕೀಶ್‌ ಅಂತ್ಯಕ್ರಿಯೆ ಎಲ್ಲಿ? ಯಾವಾಗ?

ಬೆಂಗಳೂರು, ಏಪ್ರಿಲ್‌ 16: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇಂದು ವಿಧವಶರಾಗಿದ್ದು, ಇವರ ಅಂತ್ಯಕ್ರಿಯೆ ನಾಳೆ ಅಂದರೆ ಏಪ್ರಿಲ್‌ 17 ಬುಧವಾರ ಚಾಮರಾಜಪೇಟೆ ಕೆ.ಆರ್ ಮಿಲ್‌ ಬಳಿ ಇರುವ ಬ್ರಾಹ್ಮಣರ ಚಿತಾಗಾರದಲ್ಲಿ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದ್ವಾರಕೀಶ ಅವರ ಪಾರ್ಥೀವ ಶರೀರವು ಬುಧವಾರ ಬೆಳಗಿನ ಜಾವದವರೆಗೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಅವರ ನಿವಾಸದಲ್ಲಿಯೇ ಇರಲಿದ್ದು, ಗಣ್ಯರ ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬಳಿಕ ಬೆಳಗ್ಗೆ 7.30 ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಬಳಿಕ ಪಾರ್ಥೀವ ಶರೀರವು ಚಾಮರಾಜಪೇಟೆಗೆ ರವಾನೆಯಾಗಲಿದೆ.

Where Is The Funeral Of Sandalwood Senior Actor Dwarakish

ದ್ವಾರಕೀಶ್ ಅವರು ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಲೂಸ್ ಮೋಷನ್ ಆಯ್ತು. ಹೀಗಾಗಿ ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ ಎಂದು ಪುತ್ರ ಯೋಗಿ, ದ್ವಾರಕೀಶ್ ಅವರ ಅಂತಿಮ ಕ್ಷಣಗಳ ಬಗ್ಗೆ ವಿವರಿಸಿದ್ದಾರೆ.

ಇನ್ನು ದ್ವಾರಕೀಶ್ ಪತ್ನಿ ಕೂಡ ಇದೇ ದಿನದಂದು ವಿಧಿವಶರಾಗಿದ್ದರು. ತಾಯಿ ಹಾಗೂ ತಂದೆ ಒಂದೇ ದಿನ ಇಹಲೋಕ ತ್ಯಜಿಸಿದ್ದಾರೆ. ತಾಯಿ ಅಂಬುಜ ಏಪ್ರಿಲ್ 16, 2021 ರಂದು ಮುಂಜಾನೆ 9.45 ಕ್ಕೆ ಸಾವನ್ನಪ್ಪಿದ್ದರು. ತಂದೆ ಏಪ್ರಿಲ್ 16 2024 ಇಂದು ಮುಂಜಾನೆ 9.45 ಕ್ಕೆ ಇಹ ಲೋಕ ತ್ಯಜಿಸಿದ್ದಾರೆ ಎಂದು ಯೋಗಿ ತಿಳಿಸಿದ್ದಾರೆ. ಇನ್ನು ಹಿರಿಯ ನಟ ದ್ವಾರಕೀಶ್ ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+