'ಅಪ್ಪ ಸತ್ತ ಹಿಂದಿನ ದಿನ ಮಲ್ಲಿಗೆ ವಾಸನೆ ಬರುತ್ತೆ' ಅಶ್ವಿತಿ-ಅದ್ವಿತಿ ಮನೆಯಲ್ಲಿ ನಡೆಯುವ ಪವಾಡವೇನು?

ಕೊರಗಜ್ಜನ ಮೂಲ ಸ್ಥಳಗಳಲ್ಲಿ ಒಂದಾಗಿರುವ ಗುತ್ತನ್ನು ನಮ್ಮ ಕುಟುಂಬದವರು ನೋಡಿಕೊಳ್ಳುತ್ತಾರೆ. ನಮಗೆ ಚಿಕ್ಕವಯಸ್ಸಿನಿಂದಲೂ ಕೊರಗಜ್ಜ ಗೊತ್ತು. ನಮಗೆ ಕೊರಗಜ್ಜ ಅವರ ಬಗ್ಗೆ ಗೊತ್ತು ಅಂದರೆ ಕಾರಣ ಅಣ್ಣ. ಅವರು ಯಾವಾಗಲೂ ಹೇಳುವವರು ನಾನು ಹೇಳುತ್ತೇನೆ, ನಂಬುತ್ತೇನೆ ಅಂತಾ ನೀವು ನಂಬಬೇಡಿ ನೀವು ಮನಸಾರೆ ನಂಬಿ ಅಂತಾ. ಕೊರಗಜ್ಜ ಎನ್ನುವವರು ನಮ್ಮಂತೆ ಮನುಷ್ಯರಾಗಿದ್ದರು ಬಳಿಕ ಅವರಲ್ಲಿ ಶಕ್ತಿ ಇದೆ ಅಂತಾ ಗೊತ್ತಾಗಿ ಪೂಜಿಸಲು ಶುರು ಮಾಡಿರುವುದು ಎಂದು ಕನ್ನಡ ಚಿತ್ರರಂಗದ ಅವಳಿ ಸಹೋದರಿಯರು ನಟಿ ಅಶ್ವಿತಿ ಮತ್ತು ಅದ್ವಿತಿ ಶೆಟ್ಟಿ ಕೊರಗಜ್ಜನ ಮಹಿಮೆ ಬಗ್ಗೆ ಮಾತನಾಡಿದ್ದಾರೆ.

ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, ಕೊರಗಜ್ಜ ದೇವಸ್ಥಾನದಲ್ಲಿ ಭಕ್ತರು ದೀಪ ಹಚ್ಚುವಂತಿಲ್ಲ. ಅಲ್ಲಿ ಕತ್ತಲು ಇರಬೇಕು. ಕೊರಗಜ್ಜ ದೇವಸ್ಥಾನದಲ್ಲಿ ಸಂಜೆ ಆರು ಗಂಟೆ ನಂತರ ಮಹಿಳೆಯರಿಗೆ ಪ್ರವೇಶ ಇಲ್ಲ. ಕೆಲವೊಂದು ಕಡೆಗಳಲ್ಲಿ ಅವರ ಮೂರ್ತಿ ಇಡುತ್ತಾರೆ. ಆದರೆ ನಮ್ಮ ಗುತ್ತದಲ್ಲಿ ಅಜ್ಜ ಎಲ್ಲಿ ಮಾಯವಾದರು ಆ ಕಲ್ಲನ್ನೇ ನಾವು ಅಲ್ಲಿ ಇಟ್ಟಿದ್ದೇವೆ. ಅಲ್ಲಿ ಇರುವ ಇತರ ಕಲ್ಲುಗಳು ಕೋಲದ ಸಮಯದಲ್ಲಿ ಕೋಲ ಕಟ್ಟುವವರು ಕೂರಲು ಹಾಗೂ ಊಟ ಮಾಡಲು ಇರುವ ಕಲ್ಲುಗಳು.

What Miracle Happens In The Kannada Actress Ashwiti-Adviti House

ಗುತ್ತದಲ್ಲಿ ಕೊರಗಜ್ಜ ಭೂತಕೋಲ ನೇಮಕ್ಕೆ ಹೆಣ್ಣು ಮಕ್ಕಳನ್ನು ಬಿಡುವುದೇ ಇಲ್ಲ. ಅದೇ ಕುಟುಂಬದವರಾಗಿ ನಾವು ಎಷ್ಟೋ ಸಲ ಬೇಡಿಕೊಂಡಿದ್ದೇವೆ ಆದರೆ ಯಾವತ್ತೂ ಬಿಟ್ಟಿಲ್ಲ. ನಮ್ಮ ನೇಮದಲ್ಲಿ ಒಂದು ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕು ನೋಡಲು ಸಾಧ್ಯವೇ ಇಲ್ಲ. ಅಜ್ಜ ಇದ್ದಾರೆ ಅದನ್ನು ನಾವು ನಂಬುತ್ತೇವೆ. ಎಷ್ಟೋ ಸಲ ಕೊರಗಜ್ಜ ಅವರ ರೂಪದಲ್ಲಿ ಬರಲಿಲ್ಲ ಅಂದರೂ ಅಜ್ಜಿ ಅಥವಾ ಬೇರೆ ಅಜ್ಜನ ರೀತಿ ಕೋಲು ಹಿಡಿದುಕೊಂಡು ಬಂದೇ ಬರುತ್ತಾರೆ ಎಂದರು.

ನಮ್ಮಿಬ್ಬರ ಬದುಕಲ್ಲಿ ಅಜ್ಜ ತುಂಬಾ ಸಲ ಪವಾಡ ಮಾಡಿದ್ದಾರೆ. ಒಂದು ಸಲ ಹೊನ್ನಾವರದಲ್ಲಿ ಶೂಟಿಂಗ್‌ ಸಮಯದಲ್ಲಿ ಸೆಟ್‌ನಲ್ಲಿ ಕೊರಗಜ್ಜ ಬಗ್ಗೆ ಗೊತ್ತಾಗಿದ್ದೇ ನನ್ನಿಂದ. ಅವರನ್ನು ನೆನಪಿಸಿಕೊಳ್ಳುತ್ತಿದ್ದಂತೆ ಅಲ್ಲಿ ಏನು ಬೇಕೋ ಅದು ಆಗುತ್ತಿತ್ತು. ಒಂದು ಸಲ ಸಂಜೆ ಸಮುದ್ರದಲ್ಲಿ ಶೂಟ್‌ ಆಗುತ್ತಿತ್ತು. ಅಲೆ ಜಾಸ್ತಿ ಆಗಿ ಬಂದು ಹೊಡೆಯುತ್ತಿತ್ತು. ನನಗೆ ನೀರು ಅಂದರೆ ಭಯ ನಾನು ಒಂದು ಸಲ ಕೊರಗಜ್ಜ ಅಲೆ ನಿಲ್ಲಿಸಿಬಿಡಿ ಅಂದೆ ಐದು ನಿಮಿಷದಲ್ಲಿ ಅಲೆಗಳು ಬರುವುದೇ ನಿಂತು ಹೋಯಿತು. ಅದರಿಂದ ನಮ್ಮ ಶೂಟಿಂಗ್‌ ಅಲ್ಲಿ ಇರುವವರಿಗೆ ಎಲ್ಲರಿಗೂ ಅಚ್ಚರಿ ಆಗಿತ್ತು ಎಂದು ಹೇಳಿದರು.

ಇನ್ನು ನಮ್ಮ ಮನೆಯಲ್ಲಿ ತುಂಬಾ ಸಲ ಮಲ್ಲಿಗೆ ಹೂವಿನ ಪರಿಮಳ ಬರುತ್ತದೆ. ಅಜ್ಜ ಇದ್ದಾರೆ ಅಂದರೆ ಗಾಳಿ, ಬೆತ್ತದ ಸದ್ದು ಇಲ್ಲಾ, ಮಲ್ಲಿಗೆ ಪರಿಮಳ ಬರುತ್ತದೆ ಅಂತಾ ಹೇಳುತ್ತಾರೆ. ಅದು ಬಂದಿದೆ ಕೂಡ. ನಮ್ಮ ಅಪ್ಪ ತೀರಿ ಹೋದ ದಿನದ ಹಿಂದಿನ ದಿನ ನಮ್ಮ ಮನೆಯಲ್ಲಿ ಮಲ್ಲಿಗೆ ಹೂವಿನ ಪರಿಮಳ ಬಂದೆ ಬರುತ್ತದೆ. ಆಗ ನಮಗೆ ಅಪ್ಪ ಬಂದಿದ್ದಾರಾ? ಅಜ್ಜ ಬಂದಿದ್ದಾರಾ ಎನ್ನುವ ಗೊಂದಲ. ಎಷ್ಟೋ ಸಲ ನಮಗೆ ಕೊರಗಜ್ಜ ಜೊತೆಗೆ ಇರುವ ಅನುಭವಾಗಿದೆ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ ಎಂದು ಕೊರಗಜ್ಜನ ಪವಾಡದ ಬಗ್ಗೆ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+