Aishwarya Shindogi: ಐಶ್ವರ್ಯಾ-ನಮ್ರತಾ ಗೌಡ ಸ್ನೇಹ ಮುರಿದು ಬೀಳಲು ಕಾರಣವೇನು?
ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಹಾಗೂ ಬಿಗ್ ಬಾಸ್ ಕನ್ನಡ ಸೀಜನ್ 10ರ ಸ್ಪರ್ಧಿ ನಮ್ರತಾ ಗೌಡ ತುಂಬಾ ಒಳ್ಳೆ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾಕೆಂದರೆ ಇವರಿಬ್ಬರೇ ಟ್ರಿಪ್‌ಗಳಿಗೂ ಕೂಡ ಜೊತೆಯಾಗಿ ಹೋಗಿದ್ದರು. ಆದರೆ ನಮ್ರತಾ ಗೌಡ ಬಿಗ್ ಬಾಸ್ ಮನೆಗೆ ಬಂದಾಗ ಐಶ್ವರ್ಯಾ ಅಷ್ಟರ ಮಟ್ಟಿಗೆ ಖುಷಿ ವ್ಯಕ್ತಪಡಿಸಿರಲಿಲ್ಲ. ಇದರಿಂದ ಇವರಿಬ್ಬರ ಫ್ರೆಂಡ್‌ಶಿಪ್‌ನಲ್ಲಿ ಏನೋ ಆಗಿದೆ ಎನ್ನುವುದು ಪ್ರೇಕ್ಷಕರಿಗೆ ತಿಳಿದು ಬಂದಿತ್ತು. ಈ ಬಗ್ಗೆ ಸ್ವತಃ ಐಶ್ವರ್ಯಾ ಸಿಂಧೋಗಿಯೇ ಸ್ಪಷ್ಟನೆ ನೀಡಿದ್ದಾರೆ.
'ನಿಜ ಹೇಳಬೇಕು ಅಂದರೆ ಕೆಲವು ತಿಂಗಳುಗಳಿಂದ ಬಹುಶಃ ಒಂದು ವರ್ಷ ಆಗಿರಬಹುದು ನಾನು ನಮ್ರತಾ ಮಾತನಾಡುತ್ತಿರಲಿಲ್ಲ. ನಾವಿಬ್ಬರು ಒಂದು ಟ್ರಿಪ್ ಹೋಗಿದ್ದೇವಲ್ಲಾ, ಆ ಟ್ರಿಪ್ ಹೋಗಿ ಬಂದ ಮೇಲೆ ಮಾತನಾಡುತ್ತಿರಲಿಲ್ಲ. ನಮ್ಮ ಮಧ್ಯೆ ಸ್ವಲ್ಪ ಭಿನ್ನಾಭಿಪ್ರಾಯ ಬಂದಿತ್ತು. ಟ್ರಿಪ್‌ನಲ್ಲಿ ಅಲ್ಲ. ಬರಬೇಕಾದರೆ ಸಣ್ಣ ಭಿನ್ನಾಭಿಪ್ರಾಯ ಬಂತು'.

'ಒಂದು ಚಿಕ್ಕ ವಿಚಾರಕ್ಕೆ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಬಂದಿರುತ್ತದೆ. ವಾಪಸ್ ಬಂದ ಮೇಲಂತೂ ಮಾತನಾಡುವುದನ್ನೇ ಬಿಟ್ಟು ಬಿಡುತ್ತೇವೆ. ಆ ಭಿನ್ನಾಭಿಪ್ರಾಯಕ್ಕೆ ಇಬ್ಬರೂ ಕೂಡ ಕಾರಣ. ಅದು ಕೂಡ ಚಿಕ್ಕ ವಿಚಾರ. ನಿಜ ಅಂದರೆ ಮಾತೇ ಆಡುತ್ತಿರಲಿಲ್ಲ ನಾವು. ಎಷ್ಟರ ಮಟ್ಟಿಗೆ ಅಂದರೆ ಅವರ ಮನೆ ಗೃಹ ಪ್ರವೇಶಕ್ಕೂ ಕರೆದಿಲ್ಲ ನನ್ನನ್ನು. ನನಗೆ ಅದು ತುಂಬಾ ಬೇಜಾರಾಗಿದೆ' ಎಂದರು.
'ಆದರೆ ನಾನು ಪರೋಕ್ಷವಾಗಿ ಇನ್ನೊಬ್ಬರ ಕಡೆಯಿಂದ ಅವರಿಗೆ ವಿಶ್ ಕಳುಹಿಸಿದ್ದೆ. ಒಬ್ಬಳೇ ತುಂಬಾ ಕಷ್ಟಪಟ್ಟು ಮನೆ ತೆಗೆದುಕೊಂಡಿದ್ದಾಳೆ ಅವಳಿಗೆ ಒಳ್ಳೆಯದಾಗಲಿ ಅಂತಾ ವಿಶ್ ಕಳುಹಿಸಿದ್ದೆ. ಆದರೆ ಅವಳು ನನ್ನನ್ನು ಮನೆ ಗೃಹ ಪ್ರವೇಶಕ್ಕೂ ಕರೆದಿಲ್ಲ. ತುಂಬಾ ಬೇಜಾರು ಜೊತೆಗೆ ತುಂಬಾ ಕೋಪ ಕೂಡ ಬರುತ್ತದೆ ಅವಳ ಮೇಲೆ. ನಿಜ ಹೇಳಬೇಕು ಅಂದರೆ ಬಿಗ್ ಬಾಸ್ ಮನೆ ಸಂಬಂಧಗಳ ಬೆಲೆಯನ್ನು ತುಂಬಾ ಚೆನ್ನಾಗಿ ಕಲಿಸುತ್ತದೆ'.

'ಟ್ರಿಪ್‌ಯಿಂದ ಬಂದ ಮೇಲೆ ಇಬ್ಬರು ಬೇರೆ ಬೇರೆ ಹೋದೆವು. ನಾನು ಮಾತನಾಡಿಸಿದ್ದೆ ಫೋನ್ ಮಾಡಬೇಕಾ? ಡ್ರಾಪ್ ಮಾಡಬೇಕಾ? ಅಪ್ಪ-ಅಮ್ಮ ಬರ್ತಾರ ಅಂತೆಲ್ಲಾ ಮಾತನಾಡಿ ಆಮೇಲೆ ಬೇರೆ ಬೇರೆ ಹೋದೆವು. ಆದರೆ ಬಿಗ್ ಬಾಸ್ ಮನೆ ಸಂಬಂಧಗಳ ಬೆಲೆಯನ್ನು ತುಂಬಾ ಚೆನ್ನಾಗಿ ಕಲಿಸುತ್ತದೆ. ಹೊರಗಡೆ ಇರುವ ಫ್ರೆಂಡ್ಸ್ ನಮ್ಮನ್ನು ಎಷ್ಟು ಕಾಳಜಿ ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ ನಮ್ರತಾ ಬಂದಾಗ ತುಂಬಾ ಖುಷಿ ಆಯ್ತು' ಎಂದರು.
ಇನ್ನು 'ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ತುಂಬಾ ಒಳ್ಳೆ ಹುಡುಗಿ, ನನಗೆ ತುಂಬಾ ಒಳ್ಳೆ ಫ್ರೆಂಡ್ ಆಗಿದ್ದಳು. ನಾನು ಅವಳ ಹತ್ತಿರ ಮಾತನಾಡುತ್ತೇನೆ. ನಮ್ರತಾ ಬಿಗ್ ಬಾಸ್ ಮನೆಯೊಳಗಡೆ ಬಂದಾಗ ನನ್ನ ಕುಟುಂಬಸ್ಥರೇ ಬಂದಷ್ಟು ಖುಷಿ ಆಯ್ತು' ಎಂದು ಐಶ್ವರ್ಯಾ ಸಿಂಧೋಗಿ ನ್ಯೂಸ್ ಫಸ್ಟ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಂಡಿದ್ದಾರೆ.












Click it and Unblock the Notifications