ಅಯ್ಯೋ! ಉಪ್ಪಿಯ ಈ ಹಾಡನ್ನ ನಾವ್ ಅನ್ಕೊಂಡಿದ್ದೇ ಬೇರೆ, ರಿಯಲ್ ಮೀನಿಂಗೇ ಬೇರೆ..
ರಿಯಲ್ ಸ್ಟಾರ್ ಉಪೇಂದ್ರ ಎಂದಾಕ್ಷಣ ಮೊದಲಿಗೆ ಎಲ್ಲರೂ ತಲೆಕೆಡಿಸಿಕೊಳ್ಳುವುದೇ ಹೆಚ್ಚು. ಏಕೆಂದರೆ ಉಪ್ಪಿ ಎಲ್ಲರ ತಲೆಗೆ ಹುಳ ಬಿಡೋದ್ರಲ್ಲಿ ಎತ್ತಿದ ಕೈ. ಸಸ್ಪೆನ್ಸ್, ಟ್ವಿಸ್ಟ್ ಅಲ್ಲಿ ಉಪ್ಪಿಯನ್ನ ಮೀರಿಸೋ ಬುದ್ಧಿವಂತ ಮತ್ತೊಬ್ಬರಿಲ್ಲ ಅನ್ನೋ ಟಾಕ್ ಕೂಡ ಇದೆ.
ಇವರು ನಿರ್ದೇಶನದ ಪ್ರತಿ ಸಿನಿಮಾದಲ್ಲೂ ಟ್ವಿಸ್ಟ್ ಇದ್ದೇ ಇರುತ್ತೆ. ಇದಕ್ಕಾಗಿಯೇ ಉಪೇಂದ್ರ ಅವರಿಗೆ ಫ್ಯಾನ್ಸ್ ಕೂಡ ದೊಡ್ಡಮಟ್ಟದಲ್ಲಿದ್ದಾರೆ. ಅಂದ ಹಾಗೆ ಇವತ್ತು ಉಪ್ಪಿ ಅವರು ನಟಿಸಿದ್ದ ಹಿಟ್ ಸಿನಿಮಾ ʼಉಪೇಂದ್ರʼ ರೀರಿಲೀಸ್ ಆಗಿದೆ. ಅಭಿಮಾನಿಗಳು ಕಿಕ್ಕಿರಿದು ಥಿಯೇಟರ್‌ಗಳಿಗೆ ನುಗ್ಗಿ, ದೊಡ್ಡ ಹಬ್ಬ ರೀತಿಯಲ್ಲೇ ಇದನ್ನು ಸೆಲೆಬ್ರೇಷನ್ ಮಾಡಿದ್ದಾರೆ.

1999ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಉಪ್ಪಿ ಅವರಿಗೆ ದೊಡ್ಡ ಹಿಟ್ ತಂದುಕೊಟ್ಟಿತ್ತು. ಅಲ್ಲದೆ ಈ ಸಿನಿಮಾದಿಂದ ಭಾರತದ ಚಿತ್ರರಂಗಕ್ಕೆ ಶೇಕ್ ಕೂಡ ಆಗಿತ್ತು. ಅಷ್ಟರಮಟ್ಟಿಗೆ ನಿರ್ದೇಶಿಸಿ, ನಟಿಸಿದ್ದರು ಉಪೇಂದ್ರ. ಇನ್ನು ಈ ಸಿನಿಮಾದ ಹಾಡುಗಳಂತೂ ಇಂದಿಗೂ ಹಿಟ್. ಯಾವ ಕಾರ್ಯಕ್ರಮ ಆದ್ರೂ ಮೊದಲ ಚಾಯ್ಸ್ ಉಪ್ಪಿಯ ಇದೇ ಸಿನಿಮಾದ್ದು.
ಅದರಲ್ಲೂ ಉಪ್ಪಿಗಿಂತ ರುಚಿ ಬೇರೆ ಇಲ್ಲ ಹಾಡಂತೂ ಪ್ರತಿ ವರ್ಷದ ಗಣೇಶ ಚತುರ್ಥಿಗೆ ಹೆಚ್ಚು ಬಳಕೆಯಾಗುವ ಹಾಡು. ಇದಕ್ಕೆ ಈಗಿನ ಕಾಲದ ಹುಡುಗರು ಕೂಡ ಫುಲ್ ಸ್ಟೆಪ್ ಹಾಕಿ ಮಜಾ ಮಾಡ್ತಾರೆ. ಆದರೆ, ಉಪ್ಪಿ ಈ ಹಾಡಿನಲ್ಲಿದ್ದ ಮತ್ತೊಂದು ಸೀಕ್ರೇಟ್ ಅನ್ನು ಇತ್ತೀಚೆಗೆ ರಿವೀಲ್ ಮಾಡಿ ಮತ್ತೊಂದು ಶಾಕ್ ನೀಡಿದ್ದಾರೆ.

ಅದೇನೆಂದರೆ, ಉಪ್ಪಿಗಿಂತ ರುಚಿ ಬೇರೆ ಇಲ್ಲ ಹಾಡಿನಲ್ಲಿ ಒಂದು ಬೀಟ್ ಹೆಚ್ಚಾಗಿ ಬರುತ್ತೆ. ಅದನ್ನ ನಾವೆಲ್ಲ ಇಲ್ಲಿವರೆಗೆ ಅಂದುಕೊಂಡಿದ್ದು, ದಾ... ದಿನಕ್ ದಿನ್ ದಾ...ಎಂದು. ಆದರೆ, ಉಪ್ಪಿ ನೀವು ಅಂದುಕೊಂಡಿದ್ದು ತಪ್ಪು ಎಂದು ಇಷ್ಟು ವರ್ಷಗಳ ನಂತರ ಶಾಕಿಂಗ್ ವಿಚಾರ ಹೇಳಿದ್ದು, ಅದರ ನಿಜವಾದ ಅರ್ಥವನ್ನೂ ವಿವರಿಸಿದ್ದಾರೆ. ಉಪ್ಪಿ ಹೇಳುವಂತೆ ಆ ಲಿರಿಕ್ ʼಬಾ.. ವಿ ಲವ್ ಯೂ ಬಾ...! ಎಂದು ವಿವರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಉಪ್ಪಿ, ಹುಡುಗರು ಈ ಲಿರಿಕ್ ಅನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ಅಸಲಿ ಅರ್ಥ ಇದೇನೆ. ತಮಾಷೆ ಅಂದ್ರೆ ಈ ಲಿರಿಕ್‌ಗೆ ಮನಬಂದಂತೆ ಸಾಲುಗಳನ್ನು ಹಾಡಿಕೊಳ್ಳುತ್ತಾರೆ ಎಂದು ಉಪ್ಪಿ ಹಾಸ್ಯ ಮಾಡಿದ್ದಾರೆ. ಇನ್ನು ಬುದ್ಧಿವಂತ ಸಿನಿಮಾದಲ್ಲೂ ಚಿತ್ರಾನ್ನ..ಚಿತ್ರಾನ್ನ.. ಎನ್ನುವ ಹಾಡು ಸಖತ್ ಹಿಟ್ ಆಗಿತ್ತು. ಇದೂ ಕೂಡ ತಪ್ಪು ಎಂದು ಉಪ್ಪಿ ಹೇಳಿದ್ದು. ಇದರ ಅರ್ಥ ಚಿತ್ರ ನಾ...ಚಿತ್ರ ನಾ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
ಇನ್ನು ವಿಚಾರ ಕೇಳಿ ಅಭಿಮಾನಿಗಳೆಲ್ಲ ದಂಗಾಗಿದ್ದಾರೆ. ಉಪ್ಪಿ ಅವರು ಸಿನಿಮಾದಲ್ಲಿ ಮಾತ್ರವೇ ಟ್ವಿಸ್ಟ್ ಕೊಡ್ತಾರೆ ಅನ್ಕೊಂಡಿದ್ವಿ. ನೋಡಿದ್ರೆ, ಹಾಡಲ್ಲೂ ಲಿರಿಕ್ಕಲ್ಲೂ ಟ್ವಿಸ್ಟ್ ಕೊಡ್ತಾರಲ್ಲ? ಎಂದು ತಲೆಕೆರೆದುಕೊಳ್ಳುತ್ತಿದ್ದಾರೆ. ಒಂದು ಜನರೇಷನ್ ಆಗೋವರ್ಗೂ ಇದು ನಮಗೆ ತಿಳಿಯಲೇ ಇಲ್ವಲ್ಲ ಎಂದೂ ಹಲವರು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಉಪ್ಪಿಯ ಈ ಟ್ವಿಸ್ಟ್‌ನಿಂದಾಗಿ ಅಭಿಮಾನಿಗಳು ಶಾಕ್ ಆಗಿರುವುದಂತೂ ನಿಜ..












Click it and Unblock the Notifications