Shine Shetty: ಲವ್‌ ಬ್ರೇಕಪ್‌ನಿಂದ ಬಿಗ್‌ ಬಾಸ್‌ ವಿನ್ನರ್‌ ಶೈನ್‌ ಶೆಟ್ಟಿ ಕಲಿತಿದ್ದೇನು..?

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ಅಮರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜಸ್ಟ್ ಮ್ಯಾರೀಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕಿರುತೆರೆ-ಬೆಳ್ಳಿ ತೆರೆ ಎರಡರಲ್ಲೂ ಈಗಾಗಲೇ ಮಿಂಚಿರುವ ಶೈನ್ ಶೆಟ್ಟಿ ಅವರ ಜಸ್ಟ್ ಮ್ಯಾರೀಡ್ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಸಿನಿಮಾದಲ್ಲಿ ಜಸ್ಟ್ ಮ್ಯಾರೀಡ್ ಎಂದಿರುವ ಶೈನ್ ಶೆಟ್ಟಿ ನಿಜ ಜೀವನದಲ್ಲಿ ಸ್ಟಿಲ್‌ ಬ್ಯಾಚುಲರ್‌. ಹೀಗಾಗಿ ಶೆಟ್ರು ಮದುವೆ ಬಗ್ಗೆ ಯಾವಾಗ ಗುಡ್‌ನ್ಯೂಸ್‌ ಕೊಡ್ತಾರೆ ಕಾದು ನೋಡಬೇಕಿದೆ. ಆದರೆ ತಮ್ಮ ಜೀವನದಲ್ಲಿ ಆದ ಪ್ರೀತಿ, ಬ್ರೇಕಪ್‌ ಬಗ್ಗೆ ಶೈನ್ ಶೆಟ್ಟಿ ಮಾತನಾಡಿದ್ದಾರೆ.

What Did Bigg Boss Winner Shine Shetty Learn From Love Breakup

ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಶೈನ್ ಶೆಟ್ಟಿ, 'ಈ ಪ್ರೀತಿ-ಪ್ರೇಮದ ವಿಚಾರದಲ್ಲಿ ಎಲ್ಲಿ ತಪ್ಪಾಗುತ್ತದೆ ಎಂದರೆ ಇಲ್ಲಿ ಎಲ್ಲಾ ಹೇಳಿಕೊಂಡು ಬಿಡಬೇಕು. ಇಲ್ಲಿ ಎಲ್ಲಾ ಒಪನ್‌ ಆಗಿ ಇದ್ದು ಬಿಡಬೇಕು. ನೆಲದಲ್ಲಿ ಹಾವಿನ ರೀತಿ ಉರುಳಾಡಿದರೂ ಪರವಾಗಿಲ್ಲ ಜುಟ್ಟು ಕೊಟ್ಟು ಬಿಡಬೇಕು ಎನ್ನುವುದು ತಪ್ಪು. ನಾನು ಮಾತ್ರವಲ್ಲ. ಹುಡುಗಿ ಕೂಡ ಅದನ್ನು ಮಾಡಬಾರದು ಎನ್ನುವುದು ನನ್ನ ಭಾವನೆ' ಎಂದರು.

'ಆ ಲೆವೆಲ್‌ಗೆ ಎಲ್ಲವನ್ನೂ ಹೇಳಿಕೊಳ್ಳುವುದು ಸರಿಯಲ್ಲ. ಮೊದಲ ರಿಲೆಷನ್‌ಶಿಪ್‌ನಲ್ಲಿದ್ದಾಗ ಇಗೋ, ಸೆಲ್ಫ್‌ ರೆಸ್ಪೆಕ್ಟ್‌, ಆ್ಯಟಿಟ್ಯೂಡ್‌ ನಮ್ಮಿಬ್ಬರ ಮಧ್ಯೆ ಬೇಡ. ಅದು ಪ್ರಪಂಚದಲ್ಲಿ ಎಲ್ಲಿದ್ದರೂ ಪರವಾಗಿಲ್ಲ ಎನ್ನುವ ರೀತಿ ಇದ್ದೆ. ಆದರೆ ಅಹಂ, ಆ್ಯಟಿಟ್ಯೂಡ್‌ ಬೇಡ ಆದರೆ ಆತ್ಮಗೌರವ ಎನ್ನುವುದು ಇರಲೇಬೇಕು.

ಒಂದು ಹಂತಕ್ಕೆ ಹೋದಾಗ ನಿನ್ನ ಜೊತೆ ನನಗೆ ಎಂತಾ ಆತ್ಮಗೌರವ ಅನಿಸುತ್ತದೆ. ಆದರೆ ಒಂದು ದಿನ ಅದೇ ವಾಪಸ್‌ ಬರುತ್ತದೆ. ಅದೇ ಒಂದು ಸಂಬಂಧವನ್ನು ಹಾಳು ಮಾಡಿಬಿಡುತ್ತದೆ. ನಾನೇನು ಹೇಳಿಕೊಳ್ಳಬೇಕು, ಏನು ಹೇಳಿಕೊಳ್ಳಬಾರದು ಎನ್ನುವುದರ ಬಗ್ಗೆ ಎಚ್ಚರಿಕೆ ನಮಗೆ ಇರಬೇಕು. ಆದರೆ ಅಲ್ಲಿ ಇಂತಹ ಎಚ್ಚರಿಕೆ ಇರುವುದಿಲ್ಲ' ಎಂದು ಹೇಳಿದರು.

What Did Bigg Boss Winner Shine Shetty Learn From Love Breakup

ನೀವು ಎಲ್ಲಾ ವಸ್ತುವನ್ನು ಎಲ್ಲಾ ಮಿಷಿನ್‌ಗೆ ಹಾಕಿದರೆ ಅದು ರುಬ್ಬಲು ಆಗುವುದಿಲ್ಲ. ಯಾವ ವಸ್ತು ಎಲ್ಲಿ ಹಾಕಬೇಕು ಅಲ್ಲಿಯೇ ಹಾಕಬೇಕು. ಅಲ್ಲೇ ಅದು ರುಬ್ಬುತ್ತದೆ ಅಂದರಿಂದಲೇ ಹಿಟ್ಟು ಬರಲು ಸಾಧ್ಯ. ಅದೇ ರೀತಿ ಸಂಬಂಧಗಳಲ್ಲಿಯೂ ಆಗದ ವಿಚಾರಗಳನ್ನು ಹಾಕಿದರೆ ಅದು ಹಾಳಾಗುತ್ತದೆ. ಇನ್ನು ಪ್ರೀತಿಯಲ್ಲಿ ಅವಲಂಬನೆ ಇರಬಾರದು, ಬದಲಿಗೆ ಒಬ್ಬರಿಗೆ ಒಬ್ಬರು ಸಲಹೆ ಕೊಡಬೇಕು. ಏನೇ ಇದ್ದರೂ ಅಂತಿಮವಾಗಿ ನೀನೇ ನಿರ್ಧರಿಸಬೇಕು. ಎಲ್ಲವೂ ಅವರ ಆಯ್ಕೆಗೆ ಬಿಡುವುದು ಸರಿಯಲ್ಲ ಎಂದು ಶೈನ್‌ ಶೆಟ್ಟಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+