ಮುಂದಿನ ಸಿನಿಮಾ ಬಗ್ಗೆ ನಟ ಉಪ್ಪಿ ಕೊಟ್ರು ಬಿಗ್ ಅಪ್‌ಡೇಟ್!
ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ ನಟಿಸಿರುವ ಯುಐ ಸಿನಿಮಾದ ಮೇಲೆ ಫ್ಯಾನ್ಸ್ ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ. ಈ ಡಿಸೆಂಬರ್ 20ಕ್ಕೆ ಯುಐ ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ. ಇನ್ನು ಈ ಸಿನಿಮಾ ಪ್ರಮೋಷನ್ ವೇಳೆ ಉಪ್ಪಿ ಮಹತ್ವದ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ಉಪ್ಪಿ ಸುಳಿವು ನೀಡಿದ್ದಾರೆ.
ಹೌದು ಯುಐ ಸಿನಿಮಾದ ಪ್ರಚಾರದ ವೇಳೆ ಉಪೇಂದ್ರ ಅವರು ತಮ್ಮ ಮುಂದಿನ ಸಿನಿಮಾ ಹೇಗಿರಲಿದೆ? ಎಂದು ಮಾತನಾಡಿದ್ದಾರೆ. ನನಗೆ ಮೊದಲಿನಿಂದಲೂ ಒಬ್ಬ ನಿರ್ದೇಶಕನಾಗಿ ಸಿನಿಮಾ ಈ ರೀತಿ ಮಾಡಬೇಕು ಎನ್ನುವ ಆಸೆ ಇದೆ. ಸಿನಿಮಾದ ಯಾವುದೇ ಒಂದು ಸೀನ್ ಅನ್ನೂ ಮೊದಲೇ ರಿವೀಲ್ ಮಾಡದೆ, ಡೈರೆಕ್ಟಾಗಿ ಸಿನಿಮಾ ರಿಲೀಸ್ ಮಾಡಿ ಹಿಟ್ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಉಪ್ಪಿ ಸಿಹಿಸುದ್ದಿ ನೀಡಿದ್ದಾರೆ.

ಈ ಆಸೆಯನ್ನು ನಾನು ನನ್ನ ಮುಂದಿನ ಸಿನಿಮಾದಲ್ಲೇ ಮಾಡುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ. ಅಲ್ಲದೆ ಈಗಿನ ಸಿನಿಮಾ ಟ್ರೆಂಡ್ ಬಗ್ಗೆಯೂ ಅವರು ತುಸು ಬೇಸರ ಹಂಚಿಕೊಂಡಿದ್ದಾರೆ. ಈಗೆಲ್ಲ ಕಥೆಯನ್ನು ಮೊದಲೇ ರಿವೀಲ್ ಮಾಡಲಾಗುತ್ತಿದೆ. ಟ್ರೇಲರ್, ಟೀಸರ್‌ನಲ್ಲೇ ಕೆಲವು ದೃಶ್ಯಗಳು ರಿಲೀಸ್‌ಗೂ ಮುನ್ನವೇ ಪ್ರೇಕ್ಷಕರಿಗೆ ಗೊತ್ತಾಗುತ್ತಿದೆ ಎಂದು ಉಪೇಂದ್ರ ಬೇಸರ ತೋಡಿಕೊಂಡಿದ್ದಾರೆ.
ಹಾಗಾಗಿ ನನ್ನ ಮುಂದಿನ ಸಿನಿಮಾದಲ್ಲೇ ಈ ಪ್ರಯತ್ನ ಮಾಡುತ್ತೇನೆ. ಚಿತ್ರದ ಯಾವುದೇ ಒಂದು ಸೀನ್ ರಿವೀಲ್ ಮಾಡದೆ, ನೇರವಾಗಿ ಸಿನಿಮಾ ರಿಲೀಸ್ ಮಾಡಿ, ಅದನ್ನು ಹಿಟ್ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ ಎಂದು ಉಪೇಂದ್ರ ಹೇಳಿದ್ದು, ಸದ್ಯದಲ್ಲೇ ಅವರು ಮುಂದಿನ ಸಿನಿಮಾಗೆ ರೆಡಿಯಾಗಿದ್ದಾರೆ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.

ಇನ್ನು ಉಪ್ಪಿ ಅವರ ಯುಐ ಸಿನಿಮಾದ ವಾರ್ನರ್ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಎಂದಿನಂತೆ ಉಪ್ಪಿ ತಮ್ಮ ನಿರ್ದೇಶನದ ಝಲಕ್ ತೋರಿದ್ದಾರೆ. ಈ ವೇಳೆ ಉಪೇಂದ್ರ ಅವರಿಗೆ ರಿಯಲ್ ಪವರ್ ಸಿಕ್ಕರೆ ಏನು ಮಾಡುತ್ತಾರೆ? ಎಂದು ಪ್ರಶ್ನೆಗೂ ಅವರು ಶಾಕಿಂಗ್ ಉತ್ತರ ನೀಡಿದ್ದಾರೆ. ನನಗೆ ಅಧಿಕಾರ ಸಿಕ್ಕರೆ ಏನು ಮಾಡುತ್ತೇನೆ ಎಂದು ಟ್ರೇಲರ್‌ನಲ್ಲೇ ತೋರಿಸಿದ್ದೇನಲ್ಲ? ಎಂದು ಉಪೇಂದ್ರ ಹೇಳಿದ್ದಾರೆ.
ನಂಗೆ ಅಧಿಕಾರ ಸಿಕ್ಕರೆ ಅಷ್ಟೇ..! ಎಂದು ಗನ್ ಹಿಡಿದುಕೊಂಡ ರೀತಿ ಪೋಸ್ ನೀಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇಷ್ಟಕ್ಕೂ ಟ್ರೈಲರ್‌ನಲ್ಲಿ ಮುಂದೆ ಜಗತ್ತು ಹೇಗಿರಲಿದೆ? ಎಂಬುದನ್ನು ಉಪ್ಪಿ ಕಥೆ ಕಟ್ಟಿಕೊಟ್ಟಿದ್ದಾರೆ. ವಾರ್ನರ್ ಟ್ರೇಲರ್‌ನಲ್ಲಿ ಉಪೇಂದ್ರ ಅವರು ಬರುವಾಗ ಕೆಲ ಸಾರ್ವಜನಿಕರು ಪುಟಗೋಸಿಯಲ್ಲಿ ಬಂದು ಧಿಕ್ಕಾರ ಕೂಗುತ್ತಾರೆ.
ಈ ವೇಳೆ ಉಪೇಂದ್ರ, ಥೂ...ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂಬ ಡೈಲಾಗ್ ಹೇಳಿ, ಗನ್‌ನಲ್ಲಿ ಅವರಿಗೆಲ್ಲ ಶೂಟ್ ಮಾಡಿರುವ ದೃಶ್ಯವಿದೆ. ನನಗೆ ನಿಜವಾಗಿ ಅಧಿಕಾರ ಸಿಕ್ಕರೆ ಇದನ್ನೇ ಮಾಡುತ್ತೇನೆ ಎಂದು ನಟ ಉಪೇಂದ್ರ ಪರೋಕ್ಷವಾಗಿ ಹೇಳಿದ್ದಾರೆ.












Click it and Unblock the Notifications