UI ಸಿನಿಮಾದಲ್ಲಿ ಬಿಗ್‌ ಬಾಸ್‌ ಹಂಸ ಪಾತ್ರವೇನು? ಸೀಕ್ರೇಟ್‌ ಬಿಟ್ಟುಕೊಟ್ಟ ನಟಿ

ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್‌ ಉಪೇಂದ್ರ ನಟನೆಯ ಹಾಗೂ ನಿರ್ದೇಶನದ ಯುಐ ಸಿನಿಮಾ ಇದೇ ತಿಂಗಳು ಅಂದರೆ ಡಿಸೆಂಬರ್‌ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕೆಲವು ವರ್ಷಗಳ ಅಂತರದಲ್ಲಿ ಉಪೇಂದ್ರ ನಿರ್ದೇಶನ ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ಉಪ್ಪಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಯುಐ ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳಷ್ಟು ನಿರೀಕ್ಷೆಯಿದ್ದು, ಸಿನಿಮಾದ ಒಂದು ಭಾಗದ ಝಲಕ್ಅನ್ನು ಈಗಾಗಲೇ ತೋರಿಸಲಾಗಿದೆ. ಟ್ರೈಲರ್‌ ಬದಲಿಗೆ ಯುಐ ವಾರ್ನರ್‌ಅನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಗಿದ್ದು, ವಾರ್ನರೇ ಹೀಗಿದ್ದರೆ, ಇನ್ನು ಸಿನಿಮಾ ಹೇಗಿರಬಹುದು ಎಂದು ಪ್ರೇಕ್ಷಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

UI Movie Actress Hamsa Reveals Her Secret Role In Upcoming Film

ಯುಐ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ರೀಷ್ಮಾ ನಾಣಯ್ಯ, ಗುರು ಪ್ರಸಾದ್ ಸೇರಿದಂತೆ ದೊಡ್ಡ ತಾರಾ ಬಗಳವೇ ಇದ್ದು, ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಸ್ಪರ್ಧಿ ಕಿರುತೆರೆಯ ಜನಪ್ರಿಯ ನಟಿ ಹಂಸ ಕೂಡ ನಟಿಸಿದ್ದಾರೆ. ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಹಂಸ ಯುಐ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಹಂಸ ಮಾತನಾಡಿದ್ದಾರೆ.

ಯುಐ ಸಿನಿಮಾದ ಪ್ರೋಡಕ್ಷನ್‌ ಹೌಸ್‌ ಕಡೆಯವರಿಂದಲೇ ಕರೆ ಬಂತು. ಯುಐ ಸಿನಿಮಾದಲ್ಲಿ ಇಂತಹದೊಂದು ಪಾತ್ರ ಇದೆ ಮಾಡುತ್ತೀರಾ ಅಂತಾ ಕೇಳಿದರು. ನಾನು ಕೂಡಲೇ ಒಕೆ ಅಂತಾ ಹೇಳಿದೆ. ಒಂದು ದೊಡ್ಡ ಸಿನಿಮಾ, ಉಪೇಂದ್ರ ಸರ್‌ ನಿರ್ದೇಶನ, ಅವರು ಕೂಡ ನಟನೆ ಮಾಡುತ್ತಿದ್ದಾರೆ ಈ ಸಿನಿಮಾಗೆ ಅಂದಾಗ ಖಂಡಿತವಾಗಿಯೂ ಕೆಲಸ ಮಾಡಲು ಖುಷಿ ಇರುತ್ತದೆ. ಹಾಗೆ ಪಾತ್ರನೂ ಚೆನ್ನಾಗಿತ್ತು ಎಂದು ಹಂಸ ಹೇಳಿದ್ದಾರೆ.

UI Movie Actress Hamsa Reveals Her Secret Role In Upcoming Film

ಮಾತು ಮುಂದುವರಿಸಿದ ಅವರು, ಯುಐ ಸಿನಿಮಾದಲ್ಲಿ ಉಪೇಂದ್ರ ಅವರ ಪರಿಚಯದ ಸೀನ್‌ನಲ್ಲಿ ನನ್ನ ಪಾತ್ರ ಬರುತ್ತದೆ. ಆ ಪಾತ್ರ ಉಪೇಂದ್ರ ಅವರ ಪರಿಚಯವನ್ನು ಮುನ್ನೆಡೆಸುತ್ತದೆ. ಹಾಗಾಗಿ ಖುಷಿ ಆಯ್ತು ಪಾತ್ರ ಒಪ್ಪಿಕೊಳ್ಳಲು ಎನ್ನುವ ಮೂಲಕ ಹಂಸ ಸಿನಿಮಾದಲ್ಲಿ ತಮ್ಮ ಪಾತ್ರದ ಬಗೆಗಿನ ಸೀಕ್ರೇಟ್‌ ಬಿಟ್ಟುಕೊಟ್ಟಿದ್ದಾರೆ.

ಇನ್ನು ಮೊದಲು ಯುಐ ಸಿನಿಮಾದ ಪ್ರೋಡಕ್ಷನ್‌ ಹೌಸ್‌ ಕಡೆಯವರಿಂದಲೇ ಕರೆ ಬಂತು. ಆಮೇಲೆ ಉಪೇಂದ್ರ ಸರ್‌ ಅವರನ್ನು ಒಂದು ಸಲ ಭೇಟಿ ಮಾಡಿದೆ. ಅವರು ಪಾತ್ರವನ್ನು ವಿವರಿಸಿದರು. ನನಗೂ ಆ ಪಾತ್ರ ಒಕೆ ಅನಿಸಿತು. ಹಾಗಾಗಿ ಮಾಡಿದ್ದೇನೆ ಎಂದು ಬಿಗ್‌ ಬಾಸ್‌ ಸೀಜನ್‌ 11ರ ಸ್ಪರ್ಧಿ ಹಂಸ ಯುಐ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ ಸುದ್ದಿ ಮನೆ ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+