ಟ್ರೋಲ್ ಕಾಮನ್, ಆದ್ರೆ ಹೆಣ್ಣುಮಕ್ಕಳೇ ಹೆಚ್ಚು ಸ್ಟ್ರಾಂಗ್: ಸುದೀಪ್ ತಿರುಗೇಟು ಬೆನ್ನಲ್ಲೇ ವಿಜಯಲಕ್ಷ್ಮಿ ಪೋಸ್ಟ್
ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಕಿಚ್ಚ ಸುದೀಪ್ ಪ್ರತ್ಯೇಕ ವೇದಿಕೆಗಳಲ್ಲಿ ಆಡಿದ ಮಾತುಗಳು ವಿವಾದಕ್ಕೆ ತಿರುಗಿದ್ದವು. ಮತ್ತೊಂದೆಡೆ ಸುದೀಪ್-ದರ್ಶನ್ ಫ್ಯಾನ್ ವಾರ್ ಕೂಡ ತಾರಕಕ್ಕೇರಿತ್ತು. ಕೆಲವರು ವಿಜಯಲಕ್ಷ್ಮಿ ಅವರ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಕೂಡ ಮಾಡಿದ್ದರು. ಇದರಿಂದ ಕೋಪಗೊಂಡ ಅವರು ಪೊಲೀಸರಿಗೆ ದೂರು ನೀಡುವ ಮೂಲಕ ಕಾನೂನು ಸಮರ ಸಾರಿದ್ದರು. ಬಳಿಕ 'ಕ್ಲಾಸ್ ಫ್ಯಾನ್ಸ್ಗೆ ಇದು ಎಚ್ಚರಿಕೆ' ಎಂದಿದ್ದರು. ಇದರ ತಿರುಗೇಟು ನೀಡಿದ್ದ ಸುದೀಪ್, 'ನಾವು ಕಪಾಳಕ್ಕೆ ಹೊಡೆಸಿಕೊಳ್ಳುವವರಲ್ಲ' ಎಂದು ಹೇಳಿದ್ದರು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು. ಇದರ ಸ್ಕ್ರೀನ್ಶಾಟ್ಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅವರು, ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಹ ನೀಡಿದ್ದರು. ಸ್ಕ್ರೀನ್ಶಾಟ್ಗಳಲ್ಲಿ ಕೆಲವರು ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದರು. ಈ ಬುಹತೇಕ ಐಡಿಗಳ ಹೆಸರಲ್ಲಿ ಕಿಚ್ಚ ಸುದೀಪ್ ಹೆಸರು ಇತ್ತು. ಮೇಲ್ನೋಟಕ್ಕೆ ಇದು ಸುದೀಪ್ ಅಭಿಮಾನಿಗಳು ಮಾಡಿರುವ ಕಾಮೆಂಟ್ ಎಂಬ ಆರೋಪವೂ ಕೇಳಿಬಂದಿದೆ.

ಸುಮಾರು 15 ಸೋಷಿಯಲ್ ಮೀಡಿಯಾ ಖಾತೆಗಳು, 150 ಪೋಸ್ಟ್ಗಳನ್ನು ಉಲ್ಲೇಖಿಸಿರುವ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸರಿಗೆ ಖುದ್ದಾಗಿ ತೆರಳಿ ದೂರು ನೀಡಿ ಬಂದಿದ್ದರು ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಬಂದ ವಿಜಯಲಕ್ಷ್ಮಿ ಅವರು ದೂರು ನೀಡಿದ್ದು, ಸದ್ಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಕ್ಲಾಸ್ ಫ್ಯಾನ್ಸ್ಗೆ ವಿಜಯಲಕ್ಷ್ಮಿ ವಾರ್ನಿಂಗ್
ವಿಜಯಲಕ್ಷ್ಮಿ ತಮ್ಮ ಪೋಸ್ಟ್ನಲ್ಲಿ, "ಕ್ಲಾಸ್ ಫ್ಯಾನ್ಸ್"ಗಳು ನಿಮ್ಮ ಸ್ಟ್ಯಾಂಡರ್ಡ್ಸ್ ತೋರಿಸಿದ್ದಕ್ಕೆ ಧನ್ಯವಾದ. ಈ ಖಾತೆಗಳ ವಿರುದ್ಧ ದೂರು ದಾಖಲಿಸಲಾಗಿದೆ. ಕಿರುಕುಳ ನೀಡುವುದನ್ನು ಇನ್ಮುಂದೆ ಅಭಿಮಾನ ಎಂದು ಕರೆಯಲು ಸಾಧ್ಯವಿಲ್ಲ, ಕೀಳು ಭಾಷೆ ಬಳಸುವ "ಕ್ಲಾಸಿ" ಹುಡುಗಿಯರಿಗೆ ವಿಶೇಷ ಚಪ್ಪಾಳೆ, ಆಕಾಶದಿಂದ ಇಳಿದಂತಿರುವ "ಕ್ಲಾಸಿ" ಹುಡುಗರಿಗೆ ಇದಕ್ಕೆ ಇನ್ನಷ್ಟು ವಿವರಣೆ ಬೇಡ. ಇದನ್ನೆಲ್ಲ ಸಾಮಾನ್ಯವೆಂದು ಮೌನವಾಗಿ ಒಪ್ಪಿಕೊಳ್ಳುವವಳಲ್ಲ ನಾನು. ಪ್ರತಿ ಮಹಿಳೆಯೂ ಗೌರವಕ್ಕೆ ಅರ್ಹಳು ಎಂಬುದನ್ನು ನೆನಪಿಸುವ ಸಂದೇಶ ಇದು ಎಂದು ಎಚ್ಚರಿಕೆ ನೀಡಿದ್ದರು.
ಕ್ಲಾಸ್ ಫ್ಯಾನ್ಸ್ ಎಂದು ವಿಜಯಲಕ್ಷ್ಮಿ ಅವರು ಉಲ್ಲೇಖಿಸಿ ದೂರು ನೀಡಿರುವ ಬಗ್ಗೆ ಮಾತನಾಡಿದ ಕಿಚ್ಚ, ನೀವು ಕಪಾಳಕ್ಕೆ ಹೊಡೆದರೆ ಸುಮ್ಮನೆ ಹೊಡೆಸಿಕೊಳ್ಳುವವನು ನಾನಲ್ಲ. ಪ್ರೀತಿಯಿಂದ ತಾಯಿ ಹೊಡೆಯುವ ಏಟುಗಳೇ ಬೇರೆ, ಪಕ್ಕದ ಮನೆಯವರು ಹೊಡೆಯುವ ಏಟುಗಳೇ ಬೇರೆ. ಅವರಿಗೆ ನಮ್ಮ ಮೇಲೆ ಒಲವು ಇರುತ್ತೆ, ಹಾಗಂತ ಅವರು ಯಾವುದೇ ಫೇಕ್ ಐಡಿಯಿಂದ ಮಾಡಿಲ್ವಲ್ಲಾ? ಎಂದು ಕೌಂಟರ್ ನೀಡಿದ್ದರು. ಇದರ ಬೆನ್ನಲ್ಲೇ ದರ್ಶನ್ ಪತ್ನಿಯ ಪೋಸ್ಟ್ ಗಮನ ಸೆಳೆದಿದೆ.
ಟ್ರೋಲ್ಗಳಿಗೆ ಟಕ್ಕರ್
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ದರ್ಶನ್, "ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಇಂತಹ ಮೀಮ್ಸ್ ಮೂಲಕ ಟ್ರೋಲ್ ಮಾಡುವುದು ಸಾಮಾನ್ಯ. ಆದರೆ ಮಹಿಳೆಯರು ಹೆಚ್ಚು ಬಲಿಷ್ಠರು" (Nowdays its normal to troll women by such memes. but womenʼs are strongest) ಎಂಬ ಸಂದೇಶವಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ಮೇಲಿನ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications