Mokshitha Pai: ಭವ್ಯಾಗಿಂತ ಮೋಕ್ಷಿತಾನೇ ಚಂದ ಎಂದು ಒಪ್ಪಿಕೊಂಡ ತ್ರಿವಿಕ್ರಮ್
ಬಿಗ್ ಬಾಸ್ ಸೀಜನ್ 11ರ ಗ್ರ್ಯಾಂಡ್ ಫಿನಾಲೆ ಮುಗಿದು ಒಂದು ವಾರ ಕಳೆದಿದ್ದು, ಕಾರ್ಯಕ್ರಮ ಮುಗಿದರೂ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿ ಆಗಿಲ್ಲ. ಬಿಗ್ ಬಾಸ್ ಮನೆಯೊಳಗಿಂದ ಹೊರ ಬಂದಿರುವ ಆರು ಫಿನಾಲೆ ಸ್ಪರ್ಧಿಗಳು ಇದೀಗ ಸಂದರ್ಶನಗಳಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ದೇವಸ್ಥಾನ, ವಿವಿಧೆಡೆ ರೋಡ್ ಶೋ ಸೇರಿದಂತೆ ತಮ್ಮದೇ ಸಂಭ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಬಿಗ್ ಬಾಸ್ ಸೀಜನ್ 11ರಲ್ಲಿ ವಲ್ಡ್ ಕಾರ್ಡ್ ಎಂಟ್ರಿ ಪಡೆದ ಹಾಡುಗಾರ ಹನುಮಂತ ಬಿಗ್ ಬಾಸ್ ಟ್ರೋಫಿ ಗೆದಿದ್ದು, ನಟ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ತ್ರಿವಿಕ್ರಮ್ ಬಿಗ್ ಬಾಸ್‌ನಲ್ಲಿ ಎರಡನೇ ಸ್ಥಾನ ಪಡೆದರೂ ಕೂಡ ನಿರೀಕ್ಷೆಗೂ ಮೀರಿದ ಜನಪ್ರಿಯತೆ ಗಳಿಸಿದ್ದಾರೆ. ಈ ಒಂದು ಶೋನಿಂದ ತ್ರಿವಿಕ್ರಮ್ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಈ ಬಾರಿಯ ಬಿಗ್ ಬಾಸ್‌ನಲ್ಲಿ ತ್ರಿವಿಕ್ರಮ್ ಒಂದು ರೀತಿ ಕ್ರೇಜ್ ಆದ್ರೆ, ತ್ರಿಮೋಕ್ಷಿ ಎನ್ನುವುದು ನೆಕ್ಸ್ಟ್ ಲೆವೆಲ್ ಕ್ರೇಜ್ ಆಗಿದೆ. ಬಿಗ್ ಬಾಸ್ ಸ್ಪರ್ಧಿಗಳಾದ ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಹೆಸರನ್ನು ಒಟ್ಟಾಗಿ ತ್ರಿಮೋಕ್ಷಿ ಎಂದು ಹ್ಯಾಷ್‌ಟ್ಯಾಗ್ ರಚಿಸಿರುವ ಅಭಿಮಾನಿಗಳು, ಅವರಿಬ್ಬರು ಜೊತೆಯಾಗಿರುವ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು.
ಇದೇ ವಿಡಿಯೋಗಳನ್ನು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯ ವೇದಿಕೆಯ ಮೇಲೆ ತೋರಿಸಲಾಗಿತ್ತು. ಅಪರೂಪಕ್ಕೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಜೋಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಹೀಗಾಗಿ ಮೋಕ್ಷಿತಾ ಅವರ ಬಗ್ಗೆ, ತ್ರಿವಿಕ್ರಮ್ ಬಳಿ, ತ್ರಿವಿಕ್ರಮ್ ಅವರ ಬಗ್ಗೆ ಮೋಕ್ಷಿತಾ ಬಳಿ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಇದೀಗ ತ್ರಿವಿಕ್ರಮ್ ನೂರು ದಿನಗಳು ತಮ್ಮ ಜೊತೆಯಲ್ಲಿದ್ದ ಭವ್ಯಾಗಿಂತ ಮೋಕ್ಷಿತಾ ಅವರೇ ಚಂದ ಎಂದು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

ಹೌದು ಬಿಗ್ ಬಾಸ್ ಮನೆಯಿಂದ ಹೊರಬಂದ ತ್ರಿವಿಕ್ರಮ್ ಮಾಧ್ಯಮಗಳ ಸಂದರ್ಶನಗಳಲ್ಲಿ ಬ್ಯೂಸಿಯಾಗಿದ್ದು, ಇತ್ತೀಚಿಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನಲ್ಲಿ ಹೌದು ಅಥವಾ ಇಲ್ಲ ಪ್ರಶ್ನೆಗೆ ನೇರವಾಗಿ ತ್ರಿವಿಕ್ರಮ್ ಉತ್ತರಿಸಿದ್ದಾರೆ. ಈ ವೇಳೆ ಭವ್ಯಾಗಿಂತ ಮೋಕ್ಷಿತಾ ಅವರೇ ಚಂದ ಎನ್ನುವ ಪ್ರಶ್ನೆಗೆ ತ್ರಿವಿಕ್ರಮ್ ಹೌದು ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ತ್ರಿಮೋಕ್ಷಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೇ ತ್ರಿಮೋಕ್ಷಿ ಫಾರ್ ಎವೆರ್ ಎಂದು ಕಮೆಂಟ್ ಹಾಕುತ್ತಿದ್ದಾರೆ.












Click it and Unblock the Notifications