CCL: ಬಿಗ್‌ ಬಾಸ್‌ ಮುಗಿಸಿರುವ ತ್ರಿವಿಕ್ರಮ್ಗೆ ಸುದೀಪ್‌ ತಂಡದಲ್ಲಿ ಚಾನ್ಸ್‌ ಇದ್ಯಾ? ಇಲ್ವಾ?

ಕ್ರಿಕೆಟ್‌ ಹಾಗೂ ಸಿನಿ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಫೆಬ್ರವರಿ 8ರಿಂದ ಆರಂಭವಾಗಲಿದೆ. 11ನೇ ವರ್ಷದ ಸಿಸಿಎಲ್‌ಗೆ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದ್ದು, ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರ ಹೆಸರನ್ನು ಈಗಾಗಲೇ ಘೋಷಣೆ ಮಾಡಲಾಗಿದೆ.

ಉದ್ಯಮಿ ಅಶೋಕ್ ಖೇಣಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಮಾಲೀಕರಾಗಿದ್ದು, ನಟ ಕಿಚ್ಚ ಸುದೀಪ್‌ ನೇತೃತ್ವದಲ್ಲಿ ತಂಡ ಮುನ್ನಡೆಯಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅಶೋಕ್ ಖೇಣಿ ಹಾಗೂ ಕಿಚ್ಚ ಸುದೀಪ್‌ ಕರ್ನಾಟಕ ಬುಲ್ಡೋಜರ್ಸ್ ತಂಡದ ಜಿರ್ಸಿ ಬಿಡುಗಡೆ ಮಾಡಿದ್ದಾರೆ.

Trivikram Joins Karnataka Bulldozers for Celebrity Cricket League 2025

ಈ ಬಾರಿ ಕಿಚ್ಚ ಸುದೀಪ್, ಗೋಲ್ಡನ್‌ ಸ್ಟಾರ್‌ ಗಣೇಶ್, ಡಾರ್ಲಿಂಗ್ ಕೃಷ್ಣ, ಸುನೀಲ್ ರಾವ್, ರಾಜೀವ್ ಹನು, ಕಾರ್ತಿಕ್ ಜಯರಾಮ್, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಸಾಗರ್ ಗೌಡ, ಮಂಜುನಾಥ್ ಗೌಡ, ಅಲಕಾನಂದ ಹಾಗೂ ಸಿದ್ದು ಮೂಲಿಮನೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರಾಗಿದ್ದಾರೆ.

ಈ ಬಾರಿ ಸಿಸಿಎಲ್‌ನ 11ನೇ ವರ್ಷದ ಟೂರ್ನಮೆಂಟ್‌ ನಡೆಯುತ್ತಿದ್ದು, ಕರ್ನಾಟಕ ಬುಲ್ಡೋಜರ್ಸ್ ಸೇರಿದಂತೆ ಭಾರತೀಯ ಚಿತ್ರರಂಗದ ಒಟ್ಟು ಏಳು ತಂಡಗಳು ಭಾಗವಹಿಸಲಿವೆ. ಕರ್ನಾಟಕ ಬುಲ್ಡೋಜರ್ಸ್, ಮುಂಬೈ ಹೀರೋಸ್, ತೆಲುಗು ವಾರಿಯರ್ಸ್, ಚೆನ್ನೈ ರೈನೋಸ್, ಭೋಜ್ಪುರಿ ದಬಾಂಗ್ಸ್, ಪಂಜಾಬ್ ಡಿ ಶೇರ್ ಹಾಗೂ ಬೆಂಗಾಲ್ ಟೈಗರ್ಸ್ ತಂಡಗಳು ಈ ಬಾರಿ ಕಣದಲ್ಲಿವೆ.

Trivikram Joins Karnataka Bulldozers for Celebrity Cricket League 2025

ಬಿಗ್‌ ಬಾಸ್‌ ರನ್ನರ್‌ ಅಪ್‌ ತ್ರಿವಿಕ್ರಮ್‌ಗೆ ಚಾನ್ಸ್‌ ಸಿಗುತ್ತಾ? ಇಲ್ವಾ?

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಬಿಗ್ಬಾಸ್ನ ರನ್ನರ್ ಅಪ್ ತ್ರಿವಿಕ್ರಮ್ ಅವರಿಗೆ ಸ್ಥಾನ ಸಿಕ್ಕಿದೆಯಾ ಇಲ್ಲವಾ ಎನ್ನುವುದರ ಬಗ್ಗೆ ಸ್ವತಃ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ. 'ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ತ್ರಿವಿಕ್ರಮ್ ಅವರಿಗೆ ಸ್ಥಾನ ನೀಡಲಾಗಿದೆ. ಅವರು ಒಬ್ಬ ಉತ್ತಮ ಕ್ರಿಕೆಟ್ ಆಟಗಾರ. ಹೀಗಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈಗಾಗಲೇ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ. ಬಹುಶಃ ನಾಳೆಯಿಂದ ಅವರು ಕೂಡ ಪ್ರಾಕ್ಟೀಸ್‌ ಮ್ಯಾಚ್‌ಗೆ ಬರುತ್ತಾರೆ' ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ. ಬಿಗ್ಬಾಸ್ನಲ್ಲಿ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ತ್ರಿವಿಕ್ರಮ್ ಅವರಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಅವಕಾಶ ಇರುವುದನ್ನು ಕೇಳಿ ಅವರ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+