Year End Special: 2024ರಲ್ಲಿ ಬಾಕ್ಸಾಫೀಸ್‌ ಶೇಕ್‌ ಮಾಡಿದ ಕನ್ನಡದ ಟಾಪ್‌ ಸಿನಿಮಾಗಳು ಯಾವುವು?

ಸ್ಯಾಂಡಲ್‌ವುಡ್‌ನಲ್ಲಿ 2024ರಲ್ಲಿ ಹಲವು ಸಿನಿಮಾಗಳು ತೆರೆ ಕಂಡು ಹಿಟ್‌ ಆಗಿವೆ. ಪ್ರೇಕ್ಷಕರ ಮನಗೆದ್ದಿರುವ ಕೆಲವು ಸಿನಿಮಾಗಳು ಕಲೆಕ್ಷನ್‌ ವಿಚಾರದಲ್ಲೂ ಸಖತ್‌ ಸೌಂಡ್‌ ಮಾಡಿವೆ. ಈ ಪೈಕಿ ಕೆಲವು ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿದ್ದು, ವಿಶ್ವದಾದ್ಯಂತ ಈವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರಗಳು ಈ ಕೆಳಗಿನಂತಿವೆ..

1. ಬಘೀರ (Bagheera): ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ಅಭಿನಯದ 'ಬಘೀರ' ಸಿನಿಮಾ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿರುವ ಕನ್ನಡ ಸಿನಿಮಾಗಳ ಪೈಕಿ ಮುಂಚೂಣಿಯಲ್ಲಿದೆ. ವರದಿಗಳ ಪ್ರಕಾರ ಈ ಸಿನಿಮಾ 29 ಕೋಟಿಗೂ ಮೀರಿ ಬಾಚಿಕೊಂಡಿದೆ ಎನ್ನಲಾಗಿದೆ. ಸದ್ಯ ಈ ಸಿನಿಮಾ ಇನ್ನು ಪ್ರದರ್ಶನ ಕಾಣುತ್ತಿದೆ.

Top Kannada Movies Of 2024 Record-Breaking Box Office Hits

2. ಮಾರ್ಟಿನ್‌ (Martin): ಸ್ಯಾಂಡಲ್‌ವುಡ್‌ನ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್‌' ಸಿನಿಮಾ ಕೂಡ ಈ ವರ್ಷ ತೆರೆಕಂಡು ಸಖತದ ಸದ್ದು ಮಾಡಿತ್ತು. ಡಬಲ್‌ ರೋಲ್‌ನಲ್ಲಿ ಧ್ರುವ ಕಮಾಲ್‌ ಮಾಡಿದ್ದರು. ವಾಸವಿ ಎಂಟರ್‌ಪ್ರೈಸಸ್ ಉದಯ್ ಕೆ.ಮೆಹ್ತಾ ಫಿಲ್ಮ್ಸ್ ಅಡಿ ಮೂಡಿಬಂದಿದ್ದ ಈ ಸಿನಿಮಾ 25.30 ಕೋಟಿ ರೂಪಾಯಿಗೂ ಮೀರಿ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ.

3. ಕೃಷ್ಣಂ ಪ್ರಣಯ ಸಖಿ (Krishnam Pranaya Sakhi): ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಕೂಡ ಈ ವರ್ಷದ ಸ್ಯಾಂಡಲ್‌ವುಡ್‌ನ ಅತಿ ಹೆಚ್ಚು ಕಲೆಕ್ಷನ್‌ ಮಾಡಿರೋ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತ್ರಿಶೂಲ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ನಡಿ ಮೂಡಿಬಂದ ಈ ಸಿನಿಮಾದ ಕಲೆಕ್ಷನ್‌ 25 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

4. ಭೀಮ (Bheema): ಸ್ಯಾಂಡಲ್‌ವುಡ್‌ ಬ್ಲ್ಯಾಕ್ ಕೋಬ್ರಾ ಖ್ಯಾತಿಯ ನಟ ದುನಿಯಾ ವಿಜಯ್‌ ಅವರು ನಿರ್ದೇಶಿಸಿ ನಟಿಸಿದ್ದ 'ಭೀಮ' ಕೂಡ 2024ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಡ್ರಗ್ಸ್‌ ಹಾಗೂ ಸಾಮಾಜಿಕ ಕಳಕಳಿಯುಳ್ಳ ಸಂದೇಶ ನೀಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 23 ಕೋಟಿಗೂ ಮೀರಿ ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ.

Top Kannada Movies Of 2024 Record-Breaking Box Office Hits

5. ಭೈರತಿ ರಣಗಲ್‌ (Bhairathi Ranagal): ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಅಭಿನಯಿಸಿದ್ದ 'ಭೈರತಿ ರಣಗಲ್‌' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ತಮ್ಮದೇ ಗೀತಾ ಪಿಕ್ಚರ್ಸ್‌ ಬ್ಯಾನರ್‌ನಡಿ ಮೂಡಿ ಬಂದಿದ್ದ ಈ ಸಿನಿಮಾ ಕೂಡ 20.94 ಕೋಟಿ ರೂಪಾಯಿ ಗಳಿಕೆ ಕಂಡು, ಟಾಪ್‌ ಐದನೇ ಸ್ಥಾನದಲ್ಲಿದೆ.

6. ಯುವ (Yuva): ನಟ ಯುವ ರಾಜ್‌ಕುಮಾರ್‌ ಅಭಿನಯದ 'ಯುವ' ಸಿನಿಮಾ ಈ ವರ್ಷ ತೆರೆಕಂಡ ಅತ್ಯುತ್ತಮ ಕನ್ನಡ ಸಿನಿಮಾಗಳ ಪೈಕಿ ಸ್ಥಾನ ಪಡೆದುಕೊಂಡಿದೆ. ಸಂತೋಷ್‌ ಆನಂದ್‌ ರಾಮ್‌ ಅವರ ನಿರ್ದೇಶನ ಹಾಗೂ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಡಿ ತೆರೆ ಕಂಡ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 10.80 ಕೋಟಿ ರೂಪಾಯಿ ಬಾಚಿಕೊಂಡಿದೆ.

7. ಉಪಾಧ್ಯಕ್ಷ (Upadhyaksha): ಹಾಸ್ಯ ನಟ ಚಿಕ್ಕಣ್ಣ ಅವರು ನಾಯಕ ನಟನಾಗಿ ಅಭಿನಯಿಸಿದ 'ಉಪಾಧ್ಯಕ್ಷ' ಸಿನಿಮಾ ಕೂಡ ಈ ವರ್ಷ ತೆರೆ ಕಂಡು ಅತ್ಯುತ್ತಮ ಗಳಿಕೆ ಕಂಡ ಕನ್ನಡ ಸಿನಿಮಾಗಳ ಪೈಕಿ ಸ್ಥಾನ ಪಡೆದಿದೆ. ಡಿಎನ್‌ ಸಿನಿಮಾಸ್‌ ಉಮಾಪತಿ ಫಿಲ್ಮ್ಸ್‌ನಡಿ ತೆರೆಕಂಡ ಈ ಸಿನಿಮಾವು ಒಟ್ಟಾರೆ 8.05 ಕೋಟಿ ರೂಪಾಯಿಗೂ ಮೀರಿ ಗಳಿಸಿದೆ ಎಂದು ವರದಿಯಾಗಿದೆ.

Top Kannada Movies Of 2024 Record-Breaking Box Office Hits

8. ಕರಟಕ ದಮನಕ (Karataka Damanaka): ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಹಾಗೂ ಡ್ಯಾನ್ಸರ್‌ ಪ್ರಭುದೇವ ತಾರಾಗಣದಲ್ಲಿ ಮೂಡಿಬಂದ ಈ 'ಕರಟಕ ದಮನಕ' ಸಿನಿಮಾ ಒಟ್ಟಾರೆ 2.86 ಕೋಟಿಗೂ ಮೀರಿ ಗಳಿಕೆ ಮಾಡಿದೆ ಎಂದು ದಾಖಲಾಗಿದೆ.

9. ಬ್ಯಾಚುಲರ್‌ ಪಾರ್ಟಿ (Bachelor Party): ಪರಂವಾ ಸ್ಟುಡಿಯೋಸ್ ಬ್ಯಾನರ್‌ನಡಿ ತೆರೆಕಂಡ 'ಬ್ಯಾಚುಲರ್‌ ಪಾರ್ಟಿ' ಸಿನಿಮಾ ಕೂಡ ಗಲ್ಲಾಪೆಟ್ಟಿಗೆ ಸದ್ದು ಮಾಡಿದೆ. ನಟ ದಿಗಂತ್‌, ಲೂಸ್‌ ಮಾದ ಯೋಗೇಶ್‌ ಹಾಗೂ ಅಚ್ಯುತ್‌ ಕುಮಾರ್‌ ತಾರಾಗಣದ ಈ ಸಿನಿಮಾ 1.58 ಕೋಟಿಗೂ ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ. ಈ ಸಿನಿಮಾಗಳಲ್ಲಿ ಕೆಲವು ಇನ್ನೂ ಪ್ರದರ್ಶನ ಕಾಣುತ್ತಿದ್ದು, ಈವರೆಗೆ ಗಳಿಕೆ ಕಂಡ ಅಂಕಿಅಂಶಗಳನ್ನು ಉಲ್ಲೇಖಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+