Bigg Boss: ಮತ್ತೆ ಶುರುವಾಯ್ತು ಕಿಚ್ಚನ ಚಪ್ಪಾಳೆ, ಈ ವಾರದ ಚಪ್ಪಾಳೆ ಸಿಕ್ಕಿದ್ದು ಯಾರಿಗೆ ?

ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ ಅವರು ಮತ್ತೆ ಕಿಚ್ಚನ ಚಪ್ಪಾಳೆ ನೀಡುವುದಕ್ಕೆ ಶುರು ಮಾಡಿದ್ದಾರೆ. ಕಳೆದ ಹಲವು ಬಿಗ್‌ಬಾಸ್‌ಗಿಂತಲೂ ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್ ಹಲವು ಕಾರಣಕ್ಕೆ ಭಿನ್ನವಾಗಿದೆ. ಬಿಗ್‌ಬಾಸ್‌ನಲ್ಲಿ ಈ ಬಾರಿ ಹಲವು ಹೈಡ್ರಾಮಾಗಳು ಹಾಗೂ ಬದಲಾವಣೆಗಳು ಆದವು. ಬಿಗ್‌ಬಾಸ್‌ನಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟವರು ಹಾಗೂ ಏಕಾಏಕಿ ಹೊರಗೆ ಹೋದವರ ಸಂಖ್ಯೆ ಇದೀಗ ಸಮಾನವಾಗಿದೆ. ಈ ನಡುವೆ ಬಿಗ್‌ಬಾಸ್‌ನಲ್ಲಿ ಕಳೆದ ಕೆಲವು ವಾರಗಳಿಂದ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಅವರು ಕೊಡುವ ಕಿಚ್ಚನ ಚಪ್ಪಾಳೆ ಯಾರಿಗೂ ಕೊಟ್ಟಿರಲಿಲ್ಲ. ಇದೀಗ ಕಿಚ್ಚನ ಚಪ್ಪಾಳೆಯನ್ನು ಭವ್ಯಾ ಗೌಡ ಅವರು ಪಡೆದುಕೊಂಡಿದ್ದಾರೆ. ಕಿಚ್ಚನ ಚಪ್ಪಾಳೆಗೆ ತೂಕವಿದೆ. ಕಿಚ್ಚ ಸುದೀಪ್‌ ವಾರಾಂತ್ಯದಲ್ಲಿ ಯಾರಿಗೆ ಚಪ್ಪಾಳೆ ಕೊಡ್ತಾರೆ ಅಂತ ವಾರವಿಡಿ ಪ್ರೇಕ್ಷಕರು ಹಾಗೂ ಸ್ಪರ್ಧಿಗಳು ಕಾಯುವುದಿದೆ.

ಇದೀಗ ಭವ್ಯಾ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು, ಅವರು ಖುಷಿಯಲ್ಲಿ ಕುಣಿದಾಡಿದ್ದಾರೆ. ಕೆಲವು ಕಾರಣಾಂತರಗಳಿಂದ ಕಿಚ್ಚ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಡುವುದನ್ನು ಕೆಲವು ವಾರಗಳಿಂದ ನಿಲ್ಲಿಸಿದ್ದರು. ಈ ಬಾರಿ ಬಿಗ್‌ಬಾಸ್‌ನಲ್ಲಿ ವಿವಾದಗಳೇ ಹೆಚ್ಚಾಗಿತ್ತು. ಗಲಾಟೆಯಿಂದಲೇ ಇಬ್ಬರು ಸ್ಪರ್ಧಿಗಳು ಗೇಮ್‌ನಿಂದ ಹೊರನಡೆದಿದ್ದರು. ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇದೀಗ ಎರಡನೇ ಬಾರಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಅವರು ಯಾರದೇ ಬೆಂಬಲ ಪಡೆಯದೆ ಅಥವಾ ಗುಂಪುಗಾರಿಕೆ ಮಾಡದೆ ಆಟವಾಡ್ತಿದ್ದಾರೆ. ಅಲ್ಲದೆ ಯಾರೊಂದಿಗೂ ಕೈಜೋಡಿಸದೆ ಸ್ವಂತ ಪರಿಶ್ರಮದಿಂದ ಕ್ಯಾಪ್ಟನ್ ಆಗುವಲ್ಲಿ ಸಕ್ಸಸ್ ಆಗಿದ್ದಾರೆ.

This week special Kiccha Sudeep claps Bhavya gowda Bigg Boss Kannada

ವಾರ ಪೂರ್ತಿ ಅವರು ಅವರಿಗೆ ಅನಿಸಿದ್ದನ್ನೇ ಹೇಳಿದ್ದರು. ಡಬ್ಬಲ್‌ ಗೇಮ್‌ ಆಡಿರಲಿಲ್ಲ. ಅವರ ಆಟ ಸ್ಪಷ್ಟವಾಗಿತ್ತು. ಈ ಎಲ್ಲಾ ಕಾರಣಕ್ಕಾಗಿ ಅವರಿಗೆ ಈ ವಾರ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಕಿಚ್ಚನ ಚಪ್ಪಾಳೆ ಸಿಕ್ಕಿರುವುದಕ್ಕೆ ಭವ್ಯಾ ಗೌಡ ಅವರು ಖುಷಿಯಾಗಿದ್ದಾರೆ. ಹೋದವಾರ ನಾನು ಕಿಚ್ಚನ ಚಪ್ಪಾಳೆ ಮತ್ತೆ ಕೊಡಿ ಅಂತ ರಿಕ್ವೆಸ್ಟ್‌ ಮಾಡಿದ್ದೆ. ಈಗ ಚಪ್ಪಾಳೆ ನನಗೇ ಸಿಕ್ಕಿರೋದಕ್ಕೆ ಖುಷಿ ಆಗಿದೆ ಅಂತ ಅವರು ಹೇಳಿದ್ದಾರೆ.

ಹನುಮಂತಗೆ ಕಿಚ್ಚ ಕ್ಲಾಸ್‌: ಇನ್ನು ಬಿಗ್‌ಬಾಸ್‌ನಲ್ಲಿ ಈ ವಾರ ಅಚ್ಚರಿಯ ಬೆಳವಣಿಗೆ ಸಹ ನಡೆದಿದೆ. ಕಿಚ್ಚಾ ಸುದೀಪ್‌ ಅವರು ಹನುಮಂತಗೆ ಕ್ಲಾಸ್‌ ತೆಗೆದುಕೊಂಡಿದ್ದರು. ಹನುಮಂತ ಮೊದಲಿನಿಂದಲೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದೇ ಹೆಚ್ಚು. ಕಿಚ್ಚ ಸುದೀಪ್‌ ಅವರು ಸಹ ಹನುಮಂತ ಮೇಲೆ ಕೋಪಮಾಡಿಕೊಂಡಿರಲಿಲ್ಲ. ಇದೀಗ ಈ ವಾರ ಹನುಮಂತಗೂ ಸುದೀಪ್‌ ಅವರು ಸಿಕ್ಕಾಪಟ್ಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಈ ವಾರ ನಡೆದ ಟಾಸ್ಕ್‌ನಲ್ಲಿ ಹನುಮಂತ ಅವರು ಟಾಸ್ಕ್‌ ಕ್ಯಾನ್ಸಲ್‌ ಆದರೂ ಪರವಾಗಿಲ್ಲ ಎನ್ನುತ್ತಿದ್ದರು. ಇದು ಕಿಚ್ಚ ಅವರು ಸಿಟ್ಟಾಗಲು ಕಾರಣವಾಗಿದೆ. ಈ ರೀತಿ ನೀವು ಮಾತನಾಡಿದರೆ ನಿಮ್ಮನ್ನು ಹೊರಗೆ ಕಳುಹಿಸುವ ಜವಾಬ್ದಾರಿ ನನ್ನದು ಅಂತ ಕಿಚ್ಚ ಅವರು ಹೇಳಿದ್ದಾರೆ. ಇನ್ನು ಬಿಗ್‌ಬಾಸ್‌ ರೋಚಕ ಘಟ್ಟವನ್ನು ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಟಾಪ್‌ 5 ಹಂತ ಬರಲಿದ್ದು, ಟಾಪ್‌ 5ನಲ್ಲಿ ಯಾರು ಉಳಿದಿಕೊಳ್ಳಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+