Shah Rukh Khan vs Salman Khan: RIP ಸಲ್ಮಾನ್ ಖಾನ್ vs RIP ಶಾರುಖ್ ಖಾನ್; ಫುಲ್ ಟ್ರೆಂಡಿಂಗ್
ಭಾರತದಲ್ಲಿ ಪ್ರತಿಯೊಂದು ಭಾಷೆಯ ಚಿತ್ರರಂಗದಲ್ಲಿ ಕೂಡ ಸೂಪರ್ ಸ್ಟಾರ್ ಗಳಿದ್ದಾರೆ. ಈ ಸೂಪರ್ ಸ್ಟಾರ್ ಗಳ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ಕೂಡ ಆಗಾಗ್ಗೆ ಸುದೀಪ್-ದರ್ಶನ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟಗಳು ನಡೆಯುತ್ತದೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು, ಮಲಯಳಾಂ ಚಿತ್ರರಂಗದಲ್ಲಿ ಕೂಡ ಈ ಫ್ಯಾನ್ ವಾರ್ ಸಾಮಾನ್ಯವಾಗಿದೆ. ಬಾಲಿವುಡ್‌ನಲ್ಲಿ ಇದು ಮತ್ತೊಂದು ಹಂತಕ್ಕೆ ಹೋಗಿದ್ದು, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅಭಿಮಾನಿಗಳ ಆನ್‌ಲೈನ್ ಸಮರ ತಾರಕಕ್ಕೇರಿದೆ.
ಇಂದು (ನವೆಂಬರ್, 2) ಶಾರುಖ್ ಖಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಅಭಿಮಾನಿಗಳು ಕೂಡ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ನಡುವೆಯೇ ಶಾರುಖ್ ಮತ್ತು ಸಲ್ಮಾನ್ ಅಭಿಮಾನಿಗಳ ನಡುವೆ ಜಗಳ ಶುರುವಾಗಿದ್ದು RIP ಶಾರುಖ್ ಖಾನ್ ಎಂದು ಸಲ್ಮಾನ್ ಖಾನ್ ಅಭಿಮಾನಿಗಳು ಟ್ರೆಂಡಿಂಗ್ ಶುರು ಮಾಡಿದ್ದರೆ, ಇದಕ್ಕೆ ಪ್ರತ್ಯುತ್ತರವಾಗಿ Rest in Peace ಸಲ್ಮಾನ್ ಖಾನ್ ಎಂದು ಶಾರುಖ್ ಅಭಿಮಾನಿಗಳು ಟ್ರೆಂಡಿಂಗ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಬ್ಬರು ಸೂಪರ್ ಸ್ಟಾರ್ ಅಭಿಮಾನಿಗಳ ಅಬ್ಬರ ನೋಡಿ ಸಿನಿಮಾ ಮಂದಿಯೇ ದಂಗಾಗಿದ್ದಾರೆ. ಇನ್ನೆಷ್ಟು ಕೆಳ ಮಟ್ಟಕ್ಕೆ ಇಳಿದು ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಾರೋ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ. ಅಭಿಮಾನ ಇರುವುದು ಒಳ್ಳೆಯದೇ ಆದರೆ ಈ ರೀತಿ ಇನ್ನೊಬ್ಬರ ಸಾವನ್ನು ಬಯಸುವಷ್ಟು ಅಂಧಾಭಿಮಾನ ಒಳ್ಳೆಯದಲ್ಲ ಎಂದು ಸಿನಿ ಪ್ರೇಮಿಗಳು ಸಿಟ್ಟಾಗಿದ್ದಾರೆ.
😂😂😂😂😂#RIP #salmankhan #RIPsalmankhan #lawreshbishnoi #hebhagwan pic.twitter.com/35DoCY6szX
— Bajrang (@Bajrangmaanju18) November 1, 2024
ಇಬ್ಬರೂ ಉತ್ತಮ ಸ್ನೇಹಿತರು!
ಅಭಿಮಾನಿಗಳು ಮಾತ್ರ ತಮ್ಮ ಹೀರೋ ಗ್ರೇಟ್ ಎಂದು ಕಿತ್ತಾಡಿಕೊಳ್ಳುತ್ತಿದ್ದರೆ, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರ ನಡುವೆ ಸಂಬಂಧ ಉತ್ತಮವಾಗಿದೆ. ಶಾರುಖ್ ಖಾನ್ ನಟನೆಯ ಇತ್ತೀಚಿನ ಸೂಪರ್ ಹಿಟ್ ಸಿನಿಮಾ 'ಪಠಾಣ್' ನಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದ ಕೊನೆಯಲ್ಲಿ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯನ್ನು ನಾವಿಬ್ಬರೇ ಮುನ್ನಡೆಸಬೇಕು ಎನ್ನುವ ಸಂಭಾಷಣೆ ಕೂಡ ಇದೆ. ಸಲ್ಮಾನ್‌ರ ಮುಂದಿನ ಸಿನಿಮಾದಲ್ಲಿ ಶಾರುಖ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ.
ಸ್ಯಾಂಡಲ್‌ವುಡ್‌ನಲ್ಲೂ ಇದೆ ಫ್ಯಾನ್‌ವಾರ್
ಕನ್ನಡ ಚಿತ್ರರಂಗದಲ್ಲಿ ಕೂಡ ಅಭಿಮಾನಿಗಳ ನಡುವಿನ ಕಿತ್ತಾಟಗಳೇನೂ ಕಡಿಮೆಯಿಲ್ಲ. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಆಗಾಗ್ಗೆ ಇಂತಹ ಕಿತ್ತಾಟಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ತಾನೆ ಧ್ರುವ ಸರ್ಜಾ ಮತ್ತು ದರ್ಶನ್ ಅಭಿಮಾನಿಗಳ ಆನ್‌ಲೈನ್ ಜಗಳ ತೀವ್ರವಾಗಿತ್ತು.
ಮೊದಲೇ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ, ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಚಿತ್ರರಂಗ ಉಳಿಸುವ ಕೆಲಸ ಮಾಡಬೇಕಿದೆ. ಅದು ಬಿಟ್ಟು ಈ ರೀತಿ ಫ್ಯಾನ್ ವಾರ್ ಮಾಡಿಕೊಂಡಿದ್ದರೆ ಚಿತ್ರರಂಗ ಉದ್ದಾರವಾಗಲ್ಲ, ಪರಭಾಷಾ ಸಿನಿಮಾಗಳ ಹಾವಳಿ ತಪ್ಪಲ್ಲ ಎಂದು ಕನ್ನಡ ಸಿನಿಮಾ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications