Shruti Haasan: ಫ್ಲಾಪ್ ಆದ 2 ಸಿನಿಮಾಗೂ ಒಬ್ಬನೇ ಹೀರೋ, ಆದ್ರೆ ನನ್ನ ಐರನ್ ಲೆಗ್ ಅಂದ್ರು!
ಸಿನಿಮಾರಂಗದಲ್ಲಿ ಹೇಗಂದ್ರೆ ಒಂದು ಅವಕಾಶ, ಒಂದು ಸಿನಿಮಾ, ಒಂದು ಪಾತ್ರ ಕಲಾವಿದರನ್ನೂ ಮುಗಿಲೆತ್ತರಕ್ಕೆ ಕರೆದೊಯ್ಯುವ ತಾಕತ್ ಇರುತ್ತದೆ. ಅದೇ ಕೆಲವರು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದರೂ ಅಷ್ಟಾಗಿ ಮನ್ನಣೆ ಸಿಗೋದೆ ಇಲ್ಲ. ಕೆಲವರು ಈ ಬಣ್ಣದ ಲೋಕದಲ್ಲಿ ಗೆದ್ದು ಸೋತರೆ, ಹಲವರು ಸೋತು ಗೆದ್ದಿರುವ ಉದಾಹರಣೆಗಳಿವೆ. ಇನ್ನು ಸಾಮಾನ್ಯವಾಗಿ ಸಿನಿಮಾಗಳು ಫ್ಲಾಪ್ ಆದಾಗ ನಟ, ನಟಿರಯನ್ನ "ಐರನ್ ಲೆಗ್" ಎಂದು ಕರೆಯುವ ಕೆಟ್ಟ ಮನಸ್ಥಿತಿ ಕೂಡ ಇದೆ. ವಿಚಿತ್ರವೆಂದರೆ ಹೆಚ್ಚಾಗಿ ಸಕ್ಸಸ್ ಕಾಣದ ಸಿನಿಮಾದ ಹೀರೋಯಿನ್‌ಗಳಿಗೆ ಈ ಪದ ಬಳಕೆ ಮಾಡ್ತಾರೆ. ಕೆಲವರು ಸಿನಿಕುಟುಂಬದ ಹಿನ್ನೆಲೆಯಿಂದ ಬಂದವರು ಅಷ್ಟಾಗಿ ಕಷ್ಟಪಡದೆ ಒಳ್ಳೆಯ ಹೆಸರು ಮಾಡಿದರೆ, ಕೆಲವರಿಗೆ ದೊಡ್ಡ ಸ್ಟಾರ್ ನಟರ ಮಕ್ಕಳಾಗಿದ್ದರೂ ಅದೃಷ್ಟ ಬೇಗನೆ ಕುಲಾಯಿಸಲ್ಲ. ಇದಕ್ಕೆ ನಾನೇ ಉದಾಹರಣೆ ಎಂದಿದ್ದಾರೆ ಸ್ಟಾರ್ ನಟ ಕಮಲ್ ಹಾಸನ್ ಪುತ್ರಿ ಹಾಗೂ ಬಹುಭಾಷಾ ನಟಿ ಶ್ರುತಿ ಹಾಸನ್.
ಹೌದು ಕಮಲ್ ಹಾಸನ್ ಅವರ ನಟನೆಗೆ ಇಡೀ ಭಾರತ ಚಿತ್ರರಂಗದಲ್ಲೇ ಒಂದು ದೊಡ್ಡ ಹೆಸರಿದೆ. ಹೀಗಿರುವಾಗ ಅವರ ಮಗಳು ಹೀರೋಯಿನ್ ಆಗೋದು ಏನ್ ದೊಡ್ಡ ವಿಷಯನಾ ಎಂದು ಹೇಳಬಹುದು. ಆದರೆ ನಿಜವಾಗಿ ಶ್ರುತಿ ಹಾಸನ್ ಚಿತ್ರರಂಗಕ್ಕೆ ಕಾಲಿಟ್ಟಾಗಲೇ ಐರನ್ ಲೆಗ್ ಎಂದು ಕರೆಸಿಕೊಂಡಿದ್ದಾಗಿ ಬೇಸರ ತೋಡಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಸಿನಿಮಾರಂಗದ ವಾಸ್ತವದ ವಿಚಾರಗಳನ್ನು ಅವರು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ.

ನಾನು ಆರಂಭದಲ್ಲಿ ಮಾಡಿದ ಎರಡು ಸಿನಿಮಾಗಳು ಕೂಡ ಯಶಸ್ಸು ಕಾಣಲಿಲ್ಲ. ಈ ಕಾರಣಕ್ಕೆ ನನ್ನನ್ನು ಐರನ್ ಲೆಗ್ ಎಂದು ಕರೆದಿದ್ದರು ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ. ಜನಪ್ರಿಯ ನಟಿ ಮತ್ತು ಗಾಯಕಿಯಾಗಿರುವ ಶ್ರುತಿ ಹಾಸನ್ ಅವರು ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ 'ಅನ್‌ಲಕಿ' ಹಾಗೂ 'ಐರನ್‌ಲೆಗ್' ಎಂಬ ಟ್ಯಾಗ್‌ಗಳನ್ನು ಎದುರಿಸಿದ ಕ್ಷಣಗಳನ್ನು ನೆನೆಸಿಕೊಂಡಿದ್ದಾರೆ. ಬಾಲ್ಯದಲ್ಲಿ ತಮಿಳು, ತೆಲುಗು ಸಿನಿಮಾಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟನೆ ಆರಂಭಿಸಿದ್ದ ಶ್ರುತಿ, ಕೆಲ ಮೊದಲ ಸಿನಿಮಾ ನಿರೀಕ್ಷೆಗಳಂತೆ ಗೆಲುವು ಸಾಧಿಸದ ಕಾರಣ, ಅವರನ್ನು ಗೇಲಿ ಮಾಡಿದ್ದನ್ನು ಹೇಳಿಕೊಂಡಿದ್ದಾರೆ.
ಭಾರತದ ಹೆಮ್ಮೆಯ ಮಹಾನ್ ನಟ ಕಮಲ್ ಹಾಸನ್ ಅವರ ಮಗಳು ತಂದೆಯ ಹಾದಿಯಲ್ಲಿಯೇ ಶ್ರುತಿ ಹಾಸನ್ ಹೇ ರಾಮ್ ಚಿತ್ರದಲ್ಲಿ ಬಾಲನಟಿಯ ಮಗಳಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ನಂತರ ಲಕ್ ಎಂಬ ಹಿಂದಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬದಲಾದರು. ಸ್ಟಾರ್ ಹೀರೋ ಮಗಳಾಗಿದ್ದರೂ ಅವರ ಜೀವನ ಅಂದುಕೊಂಡಂತೆ ಸುಗಮವಾಗಿ ಸಾಗಿರಲಿಲ್ಲ. ಆರಂಭಿಕ ದಿನಗಳಲ್ಲಿ ಅವರು ನಟಿಸಿದ ಚಿತ್ರಗಳು ಫ್ಲಾಪ್ ಆದಾಗ ಶ್ರುತಿ ಹಾಸನ್ ಅವರನ್ನ ಐರನ್ ಲೆಗ್ ಎಂದು ಕರೆದಿದ್ದರು. ಅವಮಾನಗಳನ್ನು ಎದುರಿಸಿ, ನಂತರ ಬ್ಲಾಕ್‌ಬಸ್ಟರ್ ಸಿನಿಮಾಗಳಿಂದ ಟಾಪ್ ನಟಿಯಾಗಿದ್ದೇ ರೋಚಕ. ಇದಾದ ಬಳಿಕ ಇವರನ್ನು ಚಿನ್ನದ ಕೈ ಎಂದು ಕರೆಯಲಾಯಿತು.
ಐರನ್ ಅಲ್ಲ, ಗೋಲ್ಡನ್ ಲೆಗ್ ಅಂದ್ರು!
ಆದರೆ ನಾನು ನಟಿಸಿದ "ಅನಗನಗಾ ಓ ಧೀರುಡು" ಮತ್ತು "ಓ ಮೈ ಫ್ರೆಂಡ್" ಸಿನಿಮಾಗಳು ನಿರೀಕ್ಷೆಯಂತೆ ಓಡಲಿಲ್ಲ. ಆಗ ಎಲ್ಲರೂ ನನ್ನನ್ನು ಐರನ್ ಲೆಗ್ ಎಂದು ಕರೆಯಲು ಪ್ರಾರಂಭಿಸಿದರು. ಆದರೆ ಆ ಎರಡೂ ಸಿನಿಮಾಗಳಲ್ಲಿ ಸಿದ್ಧಾರ್ಥ್ ನಾಯಕನಾಗಿದ್ದ. ಅದನ್ನು ಯಾರೂ ಏನನ್ನೂ ಹೇಳಲಿಲ್ಲ ಎಂದು ಅವರು ಬೇಸರ ಹಂಚಿಕೊಂಡಿದ್ದಾರೆ. ಬಳಿಕ ಪವನ್ ಕಲ್ಯಾಣ್ ಜೊತೆಗಿನ ಗಬ್ಬರ್ ಸಿಂಗ್ ಚಿತ್ರದಲ್ಲಿ ತಾನು ಯಶಸ್ಸನ್ನು ಸಾಧಿಸಿದೆ ಎಂದು ಶ್ರುತಿ ಹಾಸನ್ ನೆನೆಸಿದ್ದಾರೆ. ಈ ಚಿತ್ರದ ನಂತರ ಎಲ್ಲರೂ ಅವರನ್ನು ಗೋಲ್ಡನ್ ಲೆಗ್ ಎಂದು ಕರೆಯಲು ಪ್ರಾರಂಭಿಸಿದರು ಎಂದಿದ್ದಾರೆ. ಈ ಸಂದರ್ಶನದ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.












Click it and Unblock the Notifications