'ಪುಷ್ಪ-2' ತಂಡದಿಂದ ಬಿಗ್ ಅಪ್ಡೇಟ್, ಇದು ಕನ್ನಡಿಗರಿಗೆ ಖುಷಿ ವಿಚಾರ!
ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಕನ್ನಡದ ಕಲಾವಿದರು ಮುಖ್ಯಭೂಮಿಕೆಯಲ್ಲಿರುವುದು ಕ್ರೇಜ್ ಹೆಚ್ಚಿಸಿದೆ. ಡಿಸೆಂಬರ್ 5ಕ್ಕೆ ಪ್ಯಾನ್ ಇಂಡಿಯಾ ರಿಲೀಸ್ ಆಗಲಿರುವ ಈ ಸಿನಿಮಾ ಇದಕ್ಕೂ ಮುನ್ನವೇ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದೆ.
ಪುಷ್ಟ ಪಾರ್ಟ್ ಒನ್‌ನಲ್ಲಿ ಸಿನಿಮಾದಷ್ಟೇ ಹಿಟ್ ಆಗಿತ್ತು ವೂ ಅಂಟಾವಾ ಮಾವ..ಊಹೂ ಅಂಟಾವಾ ಮಾವ ಅನ್ನೋ ಐಟಂ ಸಾಂಗ್. ಇದರಲ್ಲಿ ಅಲ್ಲು ಅರ್ಜುನ್ ಜೊತೆಗೆ ಸಮಂತಾ ಸೊಂಟ ಬಳುಕಿಸಿದ್ದರು. ಈಗ ಇದೇ ಸಿನಿಮಾದ ಸೀಕ್ವೆಲ್‌ನಲ್ಲೂ ಮತ್ತೊಂದು ಐಟಂ ಸಾಂಗ್ ಇರುವುದಾಗಿ ಈಗಾಗಲೇ ಚಿತ್ರತಂಡ ಹೇಳಿಕೊಂಡಿದೆ.

ಈಗ ಅಸಲಿ ವಿಚಾರ ಏನಪ್ಪಾ ಅಂದ್ರೆ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕುತ್ತಿರೋದು ನಮ್ಮ ಕನ್ನಡದ ಬೆಡಗಿ ಶ್ರೀಲೀಲಾ. ಹೌದು ಮೊದಲಿಗೆ ಶ್ರೀಲೀಲಾ ಈ ಸೀಕ್ವೆಲ್‌ನಲ್ಲಿದ್ದಾರೆ ಎಂದಷ್ಟೆ ರಿವೀಲ್ ಆಗಿತ್ತು. ಆಗ ಈ ಗುಳಿಕೆನ್ನೆ ಚೆಲುವೆ ಯಾವುದೋ ಮೇನ್ ಕ್ಯಾರೆಕ್ಟರ್‌ನಲ್ಲಿ ಇರುತ್ತಾರೆ ಎಂದೇ ತಿಳಿದುಕೊಂಡಿದ್ದರು.
ಈಗ ಶ್ರೀಲೀಲಾ ಅಲ್ಲು ಜೊತೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಪಡ್ಡೆಹುಡುಗರ ನಿದ್ದೆಕದಿಯಲು ಬರುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪುಷ್ಪ ಚಿತ್ರತಂಡ ಈ ಐಟಂ ಸಾಂಗ್ ಅನ್ನು ನವೆಂಬರ್ 24ರಂದು ಸಂಜೆ 7:02ಕ್ಕೆ ರಿಲೀಸ್ ಮಾಡುವುದಾಗಿ ಘೋಷಿಸಿದೆ. ಈ ಸಾಂಗ್ ಹೆಸರು ಕಿಸ್ಸಿಕ್ ಎಂದು ಚಿತ್ರತಂಡ ರಿವೀಲ್ ಮಾಡಿದೆ. ಐಕಾನ್ ಸ್ಟಾರ್ ಹಾಗೂ ಡ್ಯಾನ್ಸಿಂಗ್ ಕ್ವೀನ್ ಇಬ್ಬರ ಸ್ಟೆಪ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕುತೂಹಲದಿಂದ ಕಾದಿದ್ದಾರೆ.

ಶ್ರೀಲೀಲಾ ಕನ್ನಡದಿಂದ ತಮ್ಮ ಸಿನಿ ಕೆರಿಯರ್ ಶುರು ಮಾಡಿ, ಸದ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಪುಷ್ಪರಾಜ್ ಪ್ರೇಯಸಿ ಪಾತ್ರದಲ್ಲೂ ಕನ್ನಡದ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದರೆ, ವಿಲನ್ ಜಾಲಿರೆಡ್ಡಿಯಾಗಿ ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಕನ್ನಡಿಗರಿಗೆ ಒಂದು ರೀತಿಯಲ್ಲಿ ಹಬ್ಬವೇ ಎನ್ನಲಾಗಿದೆ.
ಹೊಸ ಸುದ್ದಿ ಏನೆಂದರೆ 'ಪುಷ್ಪ-2' ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಟಾಲಿವುಡ್‌ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಪುಷ್ಪ-2' ಡಿಸೆಂಬರ್ 5ಕ್ಕೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಸಿನಿಮಾದ ಐಟಂ ಹಾಡೊಂದಕ್ಕೆ ಶ್ರೀಲೀಲಾ ಹೆಜ್ಜೆ ಹಾಕಿದ್ದು, ಸಿನಿಮಾದ ಟ್ರೇಲರ್ ನ.17ರಂದು ಬಿಡುಗಡೆಯಾಗುತ್ತಿದೆ.
ಪುಷ್ಪ ಸಿನಿಮಾದ ಮೊದಲ ಪಾರ್ಟ್‌ನಲ್ಲಿ ಹೂ ಅಂಟಾವಾ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ಕೇಳಿಬರುತ್ತಲೇ ಇದೆ. ಅಷ್ಟರಮಟ್ಟಿಗೆ ಹಿಟ್ ಆಗಿತ್ತು ಹಾಡು. ಸಮಂತಾ ಹಾಗೂ ಅಲ್ಲು ಅರ್ಜುನ್ ಈ ಹಾಡಿನಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದರು. ದೇವಿ ಶ್ರೀಪ್ರಸಾದ್ ಸಂಗೀತ ಕೂಡ ಮೋಡಿ ಮಾಡಿತ್ತು. ಈಗ ಎರಡನೇ ಚಾಪ್ಟರ್‌ನಲ್ಲೂ ಡಿಎಸ್‌ಪಿ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಲೀಲಾ ಕೆರಿಯರ್‌ನಲ್ಲಿ ಈ ಹಾಡು ಒಂದು ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.












Click it and Unblock the Notifications