Sonal Monteiro: ನಟಿ ಸೋನಾಲ್‌ಗೆ ಜೀವನದಲ್ಲಿ ಈ ಒಂದು ವಿಚಾರ ಇಷ್ಟ ಇಲ್ಲವಂತೆ

ಕನ್ನಡ ಚಿತ್ರರಂಗದಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಜೋಡಿ ಎಂದರೆ ಕಾಟೇರ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ. ಈ ವರ್ಷದ ಆಗಸ್ಟ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಮೊದಲ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಫೋಟೋಶೂಟ್‌ ಕೂಡ ಮಾಡಿಸಿದ್ದ, ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಕೆಲವು ವಿಶೇಷ ಸಂದರ್ಶನಗಳನ್ನು ಸಹ ನೀಡಿದ್ದಾರೆ.

ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ನಟಿ ಸೋನಲ್ ಮೊಂಥೆರೋ ತಮಗೆ ಜೀವನದಲ್ಲಿ ಇಷ್ಟವೇ ಇಲ್ಲದ ಒಂದು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಸಂದರ್ಶನಲ್ಲಿ ಮಾತನಾಡಿದ ಅವರು, ತರುಣ್ ಸುಧೀರ್ ಹಾಗೂ ಸೋನಲ್ ಇಬ್ಬರಲ್ಲಿ ಯಾರು ಬೆಳಗ್ಗೆ ಬೇಗ ಏಳುವುದು ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.

Tharun Sudhir Wife Sonal Monteiro Does Not Like This Matter In Her Life

ಈ ಪ್ರಶ್ನೆಗೆ ಮೊದಲು ಉತ್ತರಿಸಿದ ತರುಣ್ ಸುಧೀರ್ 'ಪಾಪ ಅವರು ಬೆಳಗಿನ ಜಾವ ಐದು ಗಂಟೆಗೆ ಎದ್ದು, ನಮ್ಮ ಅಪಾರ್ಟ್‌ಮೆಂಟ್‌ ಮುಂದೆ ನೀರು ಹಾಕಿ ರಂಗೋಲಿ ಇಟ್ಟು, ಪೇಪರ್‌ ಒಳಗೆ ಇಟ್ಟು, ಹಾಲೆಲ್ಲ ಬಿಸಿ ಮಾಡಿ, ಈ ಎಲ್ಲಾ ಕೆಲಸ ಮುಗಿಸಿ ದೇವರಿಗೆ ದೀಪ ಹಚ್ಚುವಾಗ ಕೈ ಸುಡುತ್ತಲ್ಲ ಅವಾಗ ಅವರಿಗೆ ಎಚ್ಚರ ಆಗುತ್ತದೆ'

'ಆಗ ಎದ್ದು ನೋಡುವಾಗ ಗಂಟೆ ಒಂಬತ್ತು ಆಗಿರುತ್ತದೆ. ನಾನು ಆಗ ಆಫೀಸ್‌ಗೆ ರೆಡಿ ಆಗುತ್ತಿರುತ್ತೇನೆ. ನೀವು ಈಗ ಎದ್ರಾ ಕೇಳ್ತಾರೆ.. ನಾನು ಎದ್ದು ನನ್ನ ಕ್ರಿಕೆಟ್‌ ಮುಗಿಸಿ, ತಿಂಡಿ ಎಲ್ಲಾ ತಿಂದು ಎಲ್ಲಾ ಕೆಲಸ ಮುಗಿಸಿರುತ್ತೇನೆ. ಅವಾಗ ಇವರು ಎದ್ದೇಳುತ್ತಾರೆ' ಎಂದು ಸೋನಲ್ ಬೆಳಗ್ಗೆ ಬೇಗ ಎದ್ದೇಳಲ್ಲ ಎನ್ನುವುದನ್ನು ಪರೋಕ್ಷವಾಗಿ ತಮಾಷೆಯಾಗಿ ಹೇಳಿದ್ದಾರೆ.

ತರುಣ್ ಹೇಳಿದ ಮಾತು ಕೇಳಿ ಜೋರಾಗಿ ನಕ್ಕ ಸೋನಲ್ ಅಸಲಿ ವಿಚಾರವನ್ನು ಮಾತನಾಡಿದ್ದಾರೆ. ' ಜೀವನದಲ್ಲಿ ಅದೊಂದು ಆಗಲ್ಲ ನನಗೆ. ಬೆಳಗ್ಗೆ ಬೇಗ ಎದ್ದೇಳುವುದು ಒಂದು ನನಗೆ ಆಗಲ್ಲ. ಬೇಕಿದ್ದರೆ ರಾತ್ರಿ ಮೂರು ಗಂಟೆ ತನಕ ಎದ್ದಿರುತ್ತೇನೆ. ಆದರೆ ಬೆಳಗ್ಗೆ ನನ್ನ ಕಣ್ಣೇ ತೆರೆಯಲು ಆಗುವುದಿಲ್ಲ. ಶೂಟಿಂಗ್‌ ಇದ್ದರೆ ಎದ್ದೇ ಏಳುತ್ತೇನೆ. ಇನ್ನು ತರುಣ್‌ ಅವರು ಕಾಫಿ-ಟೀ ಕುಡಿಯುವುದಿಲ್ಲ ಹೀಗಾಗಿ ನಾನು ಬೆಳಗ್ಗೆ ಬೇಗ ಏಳಲ್ಲ' ಎಂದು ಹೇಳಿದ್ದಾರೆ.

Tharun Sudhir Wife Sonal Monteiro Does Not Like This Matter In Her Life

ಇನ್ನು ಕೆಲವೇ ದಿನಗಳ ಹಿಂದೆ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ನವದಂಪತಿ ಹನಿಮೂನ್‌ಗೆ ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸದ್ಯ ಬೆಂಗಳೂರಿಗೆ ವಾಪಸ್ ಆಗಿರುವ ಈ ಜೋಡಿ ಮತ್ತೆ ತಮ್ಮ ತಮ್ಮ ಸಂದರ್ಶನಗಳು ಹಾಗೂ ಸಿನಿಮಾ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+